Advertisement

ಸ್ತ್ರೀಶಕ್ತಿ ಸಂಘಗಳ ಸಾಲ ಸಂಪೂರ್ಣ ಮನ್ನಾ: ಕಾಂಗ್ರೆಸ್‌ನಿಂದ ಭರಪೂರ ಭರವಸೆ

12:20 AM Jan 24, 2023 | Team Udayavani |

ಕೋಲಾರ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಭರ್ಜರಿ ಭರವಸೆ ನೀಡಿದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾಕರಿಗೆ 10 ಸಾವಿರ ಕೋಟಿ ರೂ. ನೆರವು ಮತ್ತು ಸಹಕಾರ ಸಂಘಗಳ ಮೂಲಕ ಸ್ತ್ರೀಶಕ್ತಿ ಸಂಘಗಳು ಪಡೆದುಕೊಂಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡುವುದಾಗಿ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಘೋಷಿಸಿದರು.

Advertisement

ಕೋಲಾರದಲ್ಲಿ ಪ್ರಜಾಧ್ವನಿ ಕಾರ್ಯ ಕ್ರಮಕ್ಕೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದ ಅವರು, ಕೋಲಾರದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ, ಕೆ.ಸಿ. ವ್ಯಾಲಿ ಯೋಜನೆಯಡಿ ನೀರನ್ನು ಮೂರು ಬಾರಿ ಸಂಸ್ಕರಣೆ ಮಾಡಿ ಕೆರೆಗಳಿಗೆ ಹರಿಸಲಾಗುವುದು, ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಕೊಡುತ್ತೇವೆ ಎಂದು ಪ್ರಕಟಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಗಾಳಿ ಬೀಸುತ್ತಿದೆ, ನೂರು ಬಾರಿ ಅಮಿತ್‌ ಶಾ, ಮೋದಿ ರಾಜ್ಯಕ್ಕೆ ಬಂದರೂ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಸತ್ಯ. ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲಬೇಕು ಎಂದರು.

ರಾಜ್ಯದಲ್ಲಿ 2 ವರ್ಷ 10 ತಿಂಗಳು ಮುಖ್ಯ ಮಂತ್ರಿಯಾಗಿದ್ದಾಗ ಕುಮಾರಸ್ವಾಮಿಗೆ ರೈತರು ನೆನಪಿಗೆ ಬರಲಿಲ್ಲವೇ? ಈಗ ಜೆಡಿಎಸ್‌ ಪಂಚರತ್ನ ಎಂದು ಓಡಾಡುತ್ತಿದೆ. ಕುಮಾರಸ್ವಾಮಿ ಈಗ ಕೆ.ಸಿ. ವ್ಯಾಲಿ ನೀರು ವಿಷ ಎನ್ನುತ್ತಿದ್ದಾರೆ. ಎತ್ತಿನ ಹೊಳೆಗೂ ವಿರೋಧ ಮಾಡಿದವರು ಅವರೇ ಎಂದು ದೂರಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ನುಡಿದಂತೆ ಹಿಂದೆಯೂ ನಡೆ ದಿದ್ದೇವೆ, ಮುಂದೆಯೂ ನಡೆಯುತ್ತೇವೆ. ಈಗಾಗಲೇ ಘೋಷಿಸಿದಂತೆ 200

Advertisement

ಯೂನಿಟ್‌ ವಿದ್ಯುತ್‌ ಉಚಿತ, ಪ್ರತೀ ಮನೆಯ ಒಡತಿಗೆ  2 ಸಾವಿರ ರೂ. ನೀಡುತ್ತೇವೆ.  ಸಿದ್ದರಾಮಯ್ಯ ಘೋಷಿಸಿ ದಂತೆ ಪ್ರತೀ ಕುಟುಂಬಕ್ಕೆ 10 ಕೆ.ಜಿ. ಅಕ್ಕಿ ನೀಡುತ್ತೇವೆ ಎಂದು ಹೇಳಿದರು.

 

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next