ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಮೂಲ ಸೌಕರ್ಯ, ಪ್ರವಾಸೋದ್ಯಮ, ಡಿಜಿಟಲೈಸೇಶನ್‌ಗೆ ಹೆಚ್ಚು ಒತ್ತು ನೀಡಲಾಗಿದೆ. ಬಜೆಟ್‌ನಲ್ಲಿ ಆರೋಗ್ಯ, ನರ್ಸಿಂಗ್, ರೈಲ್ವೇ, 50 ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ, ಐಟಿ ಕ್ಷೇತ್ರಕ್ಕೆ ಸಂಬಂಧಿಸಿ ದಂತೆ ಸಿಂಗಲ್ ವಿಂಡೋ ಕ್ಲಿಯರೆನ್ಸ್ ಫಾರ್ಮುಲಾ ಸಹಿತ ವಿವಿಧ ಕ್ಷೇತ್ರಗಳನ್ನು ಒಳಗೊಂಡಂತೆ ಅಭಿವೃದ್ಧಿ ದೃಷ್ಟಿ ಯಿಂದ ವಿಸ್ತಾರವಾಗಿ ಹಲವು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ.
ನೇರವಾಗಿ ರಿಯಲ್ ಎಸ್ಟೇಟ್, ನಿರ್ಮಾಣ ಉದ್ಯಮಕ್ಕೆ ಮೇಲ್ನೋಟಕ್ಕೆ ಯಾವುದೇ ಘೋಷಣೆ ಮಾಡಿಲ್ಲ. ನಿರ್ದಿಷ್ಟ ವಾಗಿ ಅನುದಾನ ಅಥವಾ ಯೋಜನೆ ನೀಡದಿದ್ದರೂ ಕೂಡಾ ಬೇರೆ ಕ್ಷೇತ್ರಗಳು ಅಭಿವೃದ್ಧಿಯಾಗುವಾಗ ಆದರೊಂದಿಗೆ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೂ ಲಾಭವಾಗಲಿದೆ.
ಪ್ರವಾಸೋದ್ಯಮ, ಡಿಜಿಟಲೈಸೇಶನ್, ಆರೋಗ್ಯ, ರೈಲ್ವೇ, ರಸ್ತೆ, ವಿಮಾನ ನಿಲ್ದಾಣಗಳ ಅಭಿವೃದ್ಧಿಯಾದಾಗ ಆರ್ಥಿಕವಾಗಿ ಎಲ್ಲರೂ ಸದೃಢರಾಗುತ್ತಾರೆ. ಆಗ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಅಧಿಕ ಲಾಭವಾಗಲಿದೆ. ಆ ಹಿನ್ನೆಲೆಯಲ್ಲಿ ಇದೊಂದು ಉತ್ತಮ ಬಜೆಟ್ ಎನ್ನಬಹುದು.
ಈ ಹಿಂದಿನ ಬಜೆಟ್‌ನಲ್ಲಿ ಏನೆಲ್ಲ ಯೋಜನೆಗಳನ್ನು ನೀಡಿ ದ್ದಾರೋ ಅದನ್ನು ಉಳಿಸಿಕೊಂಡು, ಬೇರೆ ಬೇರೆ ಕ್ಷೇತ್ರಗಳ ಅಭಿವೃದ್ಧಿಗೆ ಮುಂದಾಗಿರುವುದನ್ನು ಬಜೆಟ್‌ನಲ್ಲಿ ಕಾಣ ಬಹುದಾಗಿದೆ.
Related Articles
ರಿಯಲ್ ಎಸ್ಟೇಟ್ ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ವಾಯುಮಾರ್ಗ, ರೈಲ್ವೇ ಮತ್ತು ರಸ್ತೆ ಸಂಪರ್ಕಗಳು ನಿರ್ಮಾಣವಾಗುವುದು ಅಗತ್ಯ. ಈ ಮೂರೂ ಸಂಪರ್ಕಗಳಿಗೆ ಬಜೆಟ್‌ನಲ್ಲಿ ಸಮಗ್ರವಾಗಿ ಅವಕಾಶ ಕಲ್ಪಿಸಲಾಗಿದೆ. ರಿಯಲ್ ಎಸ್ಟೇಟ್ ಮತ್ತು ಕನ್ಸಸ್ಟ್ರಕ್ಷನ್ ಕ್ಷೇತ್ರದೊಂದಿಗೆ ಈ ಮೂರು ಕ್ಷೇತ್ರಗಳು ನೇರವಾದ ಸಂಬಂಧ ಹೊಂದಿದೆ.
ದೇಶದಲ್ಲಿ ಅಧಿಕ ಪ್ರಮಾಣದಲ್ಲಿ ಜಿಎಸ್‌ಟಿ, ಆದಾಯ ತೆರಿಗೆಗಳು ಸಂಗ್ರಹವಾಗಿದ್ದು, ಅದನ್ನೆಲ್ಲ ಮೂಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಬಳಕೆ ಮಾಡಲಾಗಿದೆ. ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಇದರಿಂದ ಹಳ್ಳಿಯ ಕೃಷಿಕರೂ ಕೂಡಾ ಆರ್ಥಿಕವಾಗಿ ಸದೃಢರಾಗಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮುಂದೆ ಬರಲು ಅವಕಾಶವಿದೆ. ದೇಶದ ಜನರು ಅಭಿವೃದ್ಧಿಯಾದರೆ ರಿಯಲ್ ಎಸ್ಟೇಟ್‌ಗೆ ಅದೇ ದೊಡ್ಡ ಕೊಡುಗೆ.
ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲಾಗಿದ್ದು, ಇದರಿಂದ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತದೆ. ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಿರುವುದರಿಂದ ಕೈಗಾರಿಕೆಗಳ ಅಭಿವೃದ್ಧಿಗೂ ಕಾರಣವಾಗುತ್ತದೆ. ಇದರ ಪರಿಣಾಮ ಖಾಸಗಿ ಕ್ಷೇತ್ರದ ಹೂಡಿಕೆ ಆರಂಭವಾಗುತ್ತದೆ. ಜಾಗದ ಖರೀದಿ- ಮಾರಾಟ, ಫ್ಲ್ಯಾಟ್‌ಗಳ ಖರೀದಿ ಹೆಚ್ಚಾಗುತ್ತದೆ. ಹೆಚ್ಚಿನ ಗುಣಮಟ್ಟದ ನಿರ್ಮಾಣ ಯೋಜನೆಗಳು ಜಾರಿಗೆ ಬರುತ್ತವೆ.
ಮೂಲಸೌಕರ್ಯ ವ್ಯವಸ್ಥೆ ಕಲ್ಪಿಸಿದಾಗ ಕೈಗಾರಿಕೆಗಳಿಗೂ ಲಾಭವಾಗುತ್ತದೆ. ಇದು ಮತ್ತೆ ಉದ್ಯೋಗಾವಕಾಶಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಬಜೆಟನ್ನು ಸಮಗ್ರ ವಾಗಿ ಗಮನಿಸುವುದಾದರೆ ಇದೊಂದು ಧನಾತ್ಮಕ ಅಂಶಗಳನ್ನು ಒಳ ಗೊಂಡಿ ರುವ ಉತ್ತಮ ಬಜೆಟ್ ಎನ್ನುಬಹುದು.
-ಪುಷ್ಪರಾಜ್ ಜೈನ್
ಅಧ್ಯಕ್ಷರು, ಕ್ರೆಡೈ, ಮಂಗಳೂರು