Advertisement

ಅವ್ಯವಹಾರ ತನಿಖೆಗಾಗಿ ಸದನ ಸಮಿತಿಗೆ ದೂರು

01:33 PM Jun 13, 2017 | |

ಜಗಳೂರು: ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆ ನಡೆಸಿರುವ ಅವ್ಯವಹಾರವನ್ನು ತನಿಖೆ ನಡೆಸುವಂತೆ ಸದನ ಸಮಿತಿಗೆ ದೂರು ನೀಡಲಾಗುವುದು ಎಂದು ಮಾಜಿ ಶಾಸಕ ಎಸ್‌.ವಿ.ರಾಮಚಂದ್ರ ತಿಳಿಸಿದರು. ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

Advertisement

ಜಗಳೂರು ಪಟ್ಟಣದ ಕೆರೆಯ ಅಭಿವೃದ್ಧಿಗೆ ನಾಲ್ಕೆçದು ಕೋಟಿ ರೂಪಾಯಿ ಅನುದಾನ ಖರ್ಚು ಮಾಡಲಾಗಿದೆ ಎಂದು ದಾಖಲೆಗಳು ಹೇಳುತ್ತಿವೆ. ಆದರೆ ಭೌತಿಕವಾಗಿ ಪ್ರಗತಿಯಾಗಿಲ್ಲ, ಬದಲಿಗೆ ಡ್ರೆನೇಜ್‌ ಗುಂಡಿಯಾಗಿ ಪರಿವರ್ತನೆಯಾಗಿದೆ ಎಂದು ಆರೋಪಿಸಿದರು. 

ಜಗಳೂರು ತಾಲೂಕಿನ 8 ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ದಾಖಲಾಗಿರುವ ಕ್ರಿಮಿನಲ್‌ ಪ್ರಕರಣಗಳೇ ಸಾಕ್ಷಿಯಾಗಿದೆ. ಕೂಲಿ ಇಲ್ಲದೇ ಜನತೆ ಬೇರೆ ಕಡೆ ಗುಳೆ ಹೋಗುತ್ತಿದ್ದಾರೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಅಗತ್ಯಕ್ಕೆ ತಕ್ಕಂತೆ ಬೀಜಗೊಬ್ಬರ ದಾಸ್ತಾನ ಮಾಡಿಲ್ಲ. 

ಪಶುಭಾಗ್ಯ ಯೋಜನೆಯಡಿ ಹಗಲು ದರೋಡೆ ನಡೆದಿದೆ. ವಸತಿ ಯೋಜನೆಯಡಿ ಅನರ್ಹರಿಗೆ ವಸತಿ ಕಲ್ಪಿಸಲಾಗಿದೆ. ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ ಎಂದು ದೂರಿದರು. ಕ್ಷೇತ್ರದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದ್ದು, ಶಾಸಕರ ಮಾತನ್ನು ಅ ಧಿಕಾರಿಗಳು ಕೇಳುತ್ತಿಲ್ಲ. ರೆಗ್ಯೂಲರ್‌ ರೇಂಜ್‌ ಫಾರೆಸ್ಟ್‌ನಲ್ಲಿ ಅವ್ಯವಹಾರ ನಡೆದಿದೆ.

ಜಿಲ್ಲಾ ಪಂಚಾಯಿತಿಯಲ್ಲಿ ಬ್ಲಾಕ್‌ ಸ್ಪಾಟ್‌ ಕಾಮಗಾರಿಯಲ್ಲಿ 70 ಲಕ್ಷ ರೂ. ದುರುಪಯೋಗವಾಗಿದ್ದು, ವಿವಿಧ ಇಲಾಖಾ ಕಚೇರಿಗಳಲ್ಲಿ ಕುರುಡು ಕಾಂಚಾಣ ಕುಣಿತೈತಿ. ಹಣ ಕೊಡದಿದ್ದರೇ ಏನೂ ಕೆಲಸಗಳು ನಡೆಯುತ್ತಿಲ್ಲ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿ ಧಿಗಳು ಕೇಳಿದ ಮಾಹಿತಿ ಅಧಿಕಾರಿಗಳು ನೀಡುತ್ತಿಲ್ಲ. ಕ್ಷೇತ್ರದ  ಶಾಸಕರು ಇವುಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. 

Advertisement

1400 ಕೋಟಿ ಅನುದಾನ ತಂದಿದ್ದೇವೆ ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಿದ್ದಾರೆ. ಆದರೆ ಅಂತಹ ಮುಖ್ಯವಾದ ಕೆಲಸಗಳೇನು ನಡೆದಿಲ್ಲ. ಹಿರೇಮಲ್ಲನಹೊಳೆ ಫವರ್‌ ಸ್ಟೇಷನ್‌, ತಾಲೂಕಿನ ರಾಜ್ಯ ಹೆದ್ದಾರಿ ಅಭಿವೃದ್ಧಿ, ಅರಸಿಕೆರೆ ಭಾಗದ 13 ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಇತರೇ ನನ್ನ ಅವಧಿಯಲ್ಲಿ ಮಂಜೂರಾದ ಯೋಜನೆಗಳನ್ನು ಹಾಲಿ ಶಾಸಕರ ಅವಧಿಯಲ್ಲಿ ನಡೆದಿವೆ ಎಂಬಂತೆ ಜಾಹೀರಾತಿ ನೀಡುತ್ತಿದ್ದಾರೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. 

ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಸ್‌.ಕೆ. ಮಂಜುನಾಥ್‌ ಮಾತನಾಡಿ, ಜಗಳೂರು ರೆಗ್ಯೂಲರ್‌ ರೇಂಜ್‌ ಫಾರೆಸ್ಟ್‌ನಲ್ಲಿ ನಡೆದಿರುವ ಅವ್ಯವಹಾರ ಮತ್ತು ಗಣಿಗಾರಿಕೆ ಬಗ್ಗೆ ದೂರು ನೀಡಿದರೆ, ದೂರು ನೀಡಿದವರ ಮೇಲೆ ವಲಯ ಅರಣ್ಯಾ ಧಿಕಾರಿ ಅಮಾಯಕ ಜನರನ್ನು ಎತ್ತಿ ಕಟ್ಟಿದ್ದಾರೆಂದು ಆರೋಪಿಸಿದರು.

ಅಧಿಕಾರಿ ವಿರುದ್ಧ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತನಿಖೆ ನಡೆಸುತ್ತಿದ್ದು, ಆದಷ್ಟು ಬೇಗನೆಸರ್ಕಾರಕ್ಕೆ ವರದಿ ಸಲ್ಲಿಸಬೇಕು. ತಾಲೂಕಿನ ಲಕ್ಕಂಪುರ ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಜಿಪಂ ಸದಸ್ಯೆ ಶಾಂತಕುಮಾರಿ ಮಾತನಾಡಿದರು.

ಜಿಪಂ ಉಪಾಧ್ಯಕ್ಷ ಸಿದ್ದಪ್ಪ, ಸದಸ್ಯೆ ರಶ್ಮಿ ರಾಜಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಡಿ.ವಿ.ನಾಗಪ್ಪ, ಅರಸಿಕೆರೆ ಬ್ಲಾಕ್‌ ಬಿಜೆಪಿ ಅಧ್ಯಕ್ಷ ದ್ಯಾಮನಗೌಡ, ಪ್ರಧಾನ ಕಾರ್ಯದರ್ಶಿ  ಜೆ.ವಿ.ನಾಗರಾಜ್‌, ಎಪಿಎಂಸಿ ಸದಸ್ಯ ಶರಣಪ್ಪ, ತಾಪಂ ಸದಸ್ಯರಾದ ಶಂಕರನಾಯ್ಕ, ಟಿ.ಬಸವರಾಜ್‌, ಸಿದ್ದೇಶ್‌, ಮುಖಂಡರಾದ ಶ್ರೀನಿವಾಸ್‌, ಮಹ್ಮದ್‌ ಅನ್ವರ್‌, ಶಿವಕುಮಾರ್‌ ಸ್ವಾಮಿ, ಸಿ.ಲಕ್ಷಣ, ಹನುಮಂತಪ್ಪ, ಕೃಷ್ಣಮೂರ್ತಿ, ಗುರುಮೂರ್ತಿ ಸೇರಿದಂತೆ ಮತ್ತಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next