Advertisement

Lokayukta: ಲಕ್ಷ್ಮೀ ಹೆಬ್ಟಾಳ್ಕರ್‌ ವಿರುದ್ಧ ಲೋಕಾಯುಕ್ತಕ್ಕೆ ದೂರು

11:58 PM Nov 17, 2023 | Team Udayavani |

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 600 ಕೋಟಿ ರೂ.ಗೂ ಹೆಚ್ಚು ಅವ್ಯವಹಾರ ನಡೆದಿದ್ದು, ಕೆಲವು ಅನರ್ಹ ಸಹಕಾರ ಸಂಘಗಳಿಗೆ ಮಕ್ಕಳ ಪೌಷ್ಟಿಕ ಆಹಾರ ಪೂರೈಕೆ ಗುತ್ತಿಗೆ ನೀಡುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಟಾಳ್ಳರ್‌ ಹಾಗೂ ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿರಿಯ ವಕೀಲ ಎಸ್‌.ನಟರಾಜ ಶರ್ಮಾ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

Advertisement

ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌, ಇಲಾಖೆ ಪ್ರಧಾನ ಕಾರ್ಯದರ್ಶಿ ಜೆ.ಸಿ.ಪ್ರಕಾಶ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ, ಶಿವಮೊಗ್ಗದ ಹರಿಹರೇಶ್ವರ ಮಹಿಳಾ ಉದ್ಯೋಗ ಮತ್ತು ಸೇವಾ ಸಂಘ, ಬೆಳಗಾವಿಯ ರೇಣುಕಾದೇವಿ ಪ್ರಗತಿಪರ ಮಹಿಳಾ ಸೇವಾ ಸಂಘ, ಕಲಬುರಗಿಯ ಸಂಜೀವಿನಿ ಮಹಿಳಾ ವಿಕಾಸ ಸೇವಾ ಸಂಘ, ಈ ಮೂರು ಸೇವಾ ಸಂಘಗಳ ಜತೆಗೆ ಕಪ್ಪು ಪಟ್ಟಿಗೆ ಸೇರಿರುವ ಕ್ರಿಸ್ಟಿ ಫೈಡ್‌ ಗ್ರಾಮ್‌ ಎಂಬ ಕಂಪೆನಿಯ ಜತೆಯಲ್ಲಿ ಶಾಮೀಲಾಗಿ ಅಕ್ರಮವೆಸಗುತ್ತಿದ್ದು, ಅವರ‌ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಿಗೆ ಸ್ಥಳೀಯ ಸೇವಾ ಸಂಘಗಳಿಂದ ಪೂರಕ ಪೌಷ್ಟಿಕ ಆಹಾರ ಪೂರೈಸಲು ಕೋರ್ಟ್‌ ಆದೇಶಿಸಿತ್ತು. ಮಕ್ಕಳಿಗೆ ಪೌಷ್ಟಿಕತೆಯನ್ನು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಹೈಕೋರ್ಟ್‌ ಆದೇಶದಂತೆ ಕೇವಲ ಬಿಐಎಸ್‌ ತಂತ್ರಜ್ಞಾನವುಳ್ಳ ತಾಂತ್ರಿಕ ನೆರವಿನೊಂದಿಗೆ ಅಥವಾ ತಂತ್ರಜ್ಞಾನವನ್ನು ಉಪಯೋಗಿಸಿಕೊಳ್ಳಲು ಆದೇಶ ನೀಡಿದ್ದು, ಸರಕಾರದ ಕೆಲವು ಅಧಿಕಾರಿಗಳು ಕಾಣದ ಕೆಲವು ಕಂಪೆನಿಗಳ ಜತೆಗೂಡಿ ಈ ಆದೇಶವನ್ನು ತಮಗೆ ಬೇಕಾದ ರೀತಿಯಲ್ಲಿ ತಿರುಚಿದ್ದಾರೆ ಎಂದು ಆರೋಪಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next