Advertisement

ನಿರ್ದೇಶಕ ಎಸ್‌.ನಾರಾಯಣ್‌ರಿಂದ ದೂರು

12:38 AM Mar 19, 2020 | Lakshmi GovindaRaj |

ಬೆಂಗಳೂರು: ಪರಿಚಯಸ್ಥ ಮೂವರು ವ್ಯಕ್ತಿಗಳು ಒಂದೂವರೆ ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಿ ನಟ, ನಿರ್ದೇಶಕ ಎಸ್‌.ನಾರಾಯಣ್‌ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಡಿಸಿಪಿ ಕೆ.ಪಿ.ರವಿಕುಮಾರ್‌ ಅವರಿಗೆ ಬುಧವಾರ ದೂರು ನೀಡಿದ್ದಾರೆ.

Advertisement

ಕಳೆದ ವರ್ಷ ಎಸ್‌.ನಾರಾಯಣ್‌ ಮತ್ತು ಮೂವರು ಪರಿಚಯಸ್ಥರು ಪಾಲುದಾರಿಕೆಯಲ್ಲಿ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದಾಗಿದ್ದರು. ಆದರೆ, ಕಾರಣಾಂತರಗಳಿಂದ ಸಿನಿಮಾ ಮುಹೂರ್ತ ಮುಗಿದಿದ್ದು, ಶೂಟಿಂಗ್‌ ರದ್ದಾಗಿದೆ.

ಪಾಲುದಾರ ಮೂವರು ಸಂಭಾವನೆ ಬದಲು ನಿವೇಶನ ಖರೀದಿಸುವಂತೆ ನಾರಾಯಣ್‌ ಅವರಿಗೆ ಹೇಳಿ, ಎಚ್‌ಬಿಆರ್‌ ಲೇಔಟ್‌ನಲ್ಲಿರುವ ನಿವೇಶನದ ದಾಖಲೆಗಳನ್ನು ಕೊಟ್ಟಿದ್ದರು. ಆದರೆ, ಆ ನಿವೇಶನದ ದಾಖಲೆಗಳು ಸಂಪೂರ್ಣ ನಕಲಿ ಎಂಬುದು ಗೊತ್ತಾಗಿದೆ. ನಕಲಿ ದಾಖಲೆಗಳನ್ನು ಕೊಟ್ಟು ತಮ್ಮ ಬಳಿ ಹಣ ಪಡೆದು ವಂಚಿಸಿದ್ದಾರೆ ಎಂದು ನಾರಾಯಣ್‌ ದೂರಿನಲ್ಲಿ ಆರೋಪಿಸಿದ್ದಾರೆ.

ನಿವೇಶನ ಖರೀದಿಗೆ ಬ್ಯಾಂಕ್‌ನಲ್ಲಿ ಒಂದೂವರೆ ಕೋಟಿ ರೂ. ಸಾಲ ಮಾಡಲಾಗಿತ್ತು. ಇದೀಗ ಅದು ಎರಡು ಕೋಟಿ ರೂ. ದಾಟಿದೆ. ಸಾಲ ಮರುಪಾವತಿ ಮಾಡಲು ಕಷ್ಟವಾಗುತ್ತಿದೆ. ಹೀಗಾಗಿ ಮೂವರು ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಂಡು ಹಣ ಕೊಡಿಸುವಂತೆ ಎಸ್‌.ನಾರಾಯಣ್‌ ದೂರಿನಲ್ಲಿ ಮನವಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next