Advertisement

BEO ಮಾರ್ಗದರ್ಶನದಲ್ಲಿ ದಾಖಲಾಗಿದ್ದ ದೂರು- ಪತ್ರಕರ್ತನ ವಿರುದ್ಧದ ಪ್ರಕರಣ ಹೈ.ಕೋ.ನಲ್ಲಿ ವಜಾ

09:15 PM Feb 03, 2024 | Team Udayavani |

ಕಾರ್ಕಳ: ಕಾರ್ಕಳ ಪತ್ರಕರ್ತ ಸಂಪತ್‌ಕುಮಾರ್‌ ನಾಯಕ್‌ ಎಂಬವರ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿ ಮಾರ್ಗದರ್ಶನದಲ್ಲಿ ಶಿಕ್ಷಕರೊಬ್ಬರು ನಿಡಿದ ದೂರು ಸುಳ್ಳು ಪ್ರಕರಣವೆಂದು ಹೈಕೋರ್ಟ್‌ ವಜಾಗೊಳಿಸಿದೆ.2020ರಲ್ಲಿ ಕೊರೊನಾ ಸಂದರ್ಭ ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಷೇತ್ರಶಿಕ್ಷಣಾಧಿಕಾರಿ ಶಶಿಧರ್‌ ಜಿ.ಎಸ್‌ ಮಾರ್ಗದರ್ಶನದಲ್ಲಿ ಸರಕಾರಿ ಬೋರ್ಡ್‌ ಹೈಸ್ಕೂಲ್‌ನಲ್ಲಿ ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಿದ್ದರು. ಕೊರೊನಾದ ಸಂದರ್ಭ ಕಾನೂನು ಉಲ್ಲಂಘಿಸಿ ವಿದ್ಯಾರ್ಥಿಗಳನ್ನು ಒಂದೆಡೆ ಕೂಡಿ ಹಾಕಿ ತರಬೇತಿ ನೀಡಲಾಗಿತ್ತು ಎಂಬ ವಿಷಯವನ್ನು ಆಧಾರಿಸಿ ದಿನ ಪತ್ರಿಕೆಯೊಂದರಲ್ಲಿ ನಿರ್ಬಂಧ ಉಲ್ಲಂಘಿಸಿ ಎಸ್ಸೆಸೆಲ್ಸಿ ವಿದ್ಯಾರ್ಥಿಗಳಿಗೆ ತರಗತಿ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು.

Advertisement

ಈ ವರದಿಯನ್ನು ಆಕ್ಷೇಪಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಸರಕಾರಿ ಬೋರ್ಡ್‌ ಹೈಸ್ಕೂಲಿನ ಮುಖ್ಯ ಶಿಕ್ಷಕ ಮುರಳೀಧರ ಪ್ರಭು ಎಂಬವರು ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. 2020ರ ಮೇ 20ರಂದು ಪ್ರಕರಣ ದಾಖಲುಗೊಂಡಿತ್ತು. ಐಪಿಸಿ ಸೆಕ್ಷನ್‌ 353,109,448 ಮತ್ತು 34ರಡಿ ಪ್ರಕರಣ ದಾಖಲಾಗಿತ್ತು.

ಸಂಪತ್‌ಕುಮಾರ್‌ ಇದಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಬಳಿಕ ದಾಖಲಾದ ಪ್ರಕಣ ಸುಳ್ಳೆಂದು ಸಂಪತ್‌ ನಾಯಕ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಜ.19ರಂದು ವಿಚಾರಣೆ ನಡೆಸಿದ ಹೈಕೋರ್ಟ್‌ ಪತ್ರಕರ್ತರನ ವಿರುದ್ದ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣ ಸುಳ್ಳೆಂದು ಪ್ರಕರಣ ರದ್ದುಗೊಳಿಸಿ ತೀರ್ಪು ನೀಡಿದೆ. ಹೈಕೋರ್ಟ್‌ ನ್ಯಾಯವಾದಿ ಪವನ್‌ಚಂದ್ರ ಶೆಟ್ಟಿ ವಾದಿಸಿದ್ದರು. ಕೊರೊನಾ ಸಂದರ್ಭದಲ್ಲಿ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಶಶಿಧರ್‌ ಜಿ.ಎಸ್‌ ಅವರ ವಿರುದ್ಧ ತಾಲೂಕಿನಲ್ಲಿ ಬಹಳಷ್ಟು ಅಸಮಧಾನಗಳಿದ್ದವು. ಪತ್ರಕರ್ತರನ್ನು ವರದಿ ಮಾಡದಂತೆ ಹಲವು ಬಾರಿ ತಾಕೀತು ಮಾಡಿರುವ ಪ್ರಕರಣಗಳು ಅವರಿಂದ ನಡೆದಿತ್ತು. ಅವರ ವರ್ಗಾವಣೆಗೆ ಹೆಚ್ಚಿನ ಒತ್ತಡ ವ್ಯಕ್ತವಾಗಿತ್ತು. ಬಳಿಕ ವರ್ಗಾವಣೆಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next