Advertisement

ಚಿಕ್ಕನಾಯಕನಹಳ್ಳಿ: ಕಾಂಗ್ರೆಸ್‌ ಟಿಕೆಟ್‌ಗೆ ಪೈಪೋಟಿ

04:24 PM Jan 31, 2023 | Team Udayavani |

ತುಮಕೂರು: ಬಹುತೇಕ ಬಯಲುಸೀಮೆ ಪ್ರದೇಶ ಎಂದೇ ಹೆಸರಾಗಿರುವ ತೆಂಗು, ಅಡಕೆಯಆಗರ, ಕಬ್ಬಿಣ ಮ್ಯಾಂಗನೀಸ್‌, ಸುಣ್ಣದ ಕಲ್ಲುದೊರೆಯುವ ಗಣಿಗಾರಿಕೆಗೆ ಹೆಸರಾಗಿರುವಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಕೆಲವೇ ತಿಂಗಳಲ್ಲಿನಡೆಯಲಿರುವ ವಿಧಾನಸಭಾ ಚುನಾವಣೆಗಾಗಿಕಾಂಗ್ರೆಸ್‌ ಮುಖಂಡರ ನಡುವೆ ಟಿಕೆಟ್‌ಗಾಗಿ ಪೈಪೋಟಿ ಏರ್ಪಟ್ಟಿದೆ.

Advertisement

ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದದಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆಯುವುದೇ ದೊಡ್ಡ ಸಾಹಸವಾಗಿತ್ತು. ಕಾಂಗ್ರೆಸ್‌ ಪಕ್ಷದ ಟಿಕೆಟ್‌ಪಡೆದಿದ್ದಾರೆ ಎಂದರೆ ಅವರ ಗೆಲುವು ಖಚಿತಎನ್ನುವ ಭಾವನೆ ಮೂಡುತ್ತಿದ್ದ ಕ್ಷೇತ್ರ ಇದಾಗಿತ್ತು.

ಕಾಂಗ್ರೆಸ್‌ಗೆ ಹಿನ್ನಡೆ: ಇತ್ತೀಚಿನ ವರ್ಷಗಳಲ್ಲಿಕಾಂಗ್ರೆಸ್‌ ಹಿನ್ನಡೆ ಅನುಭವಿಸುತ್ತಲಿದೆ, ಇದಕ್ಕೆತಾಲೂಕಿನಲ್ಲಿ ಸಮರ್ಥ ನಾಯಕರ ಕೊರತೆ ಎದ್ದುಕಾಣುತ್ತಿದೆ. ಈ ಹಿಂದಿನ ಅಂಕಿ ಅಂಶಗಳನ್ನುಗಮನಿಸಿದರೆ 1952 ರಲ್ಲಿ ಕಾಂಗ್ರೆಸ್‌ ಪಕ್ಷದಿಂದಸಿ.ಎಚ್‌.ಲಿಂಗದೇವರು, 1957ರಲ್ಲಿ ಪಿಎಸ್‌ಪಿಯಿಂದ ಸಿ.ಪಿ.ರಾಜೇಶೆಟ್ಟಿ, 1962 ರಲ್ಲಿ ಕಾಂಗ್ರೆಸ್‌ನಿಂದ ಸಿ.ಎಚ್‌.ಲಿಂಗದೇವರು, 1967ರಲ್ಲಿ ಮತ್ತೆ ಪಿಎಸ್‌ಪಿಯಿಂದ ಸಿ.ಕೆ.ರಾಜೇಶೆಟ್ಟಿ, ನಂತರದದಿನಗಳಲ್ಲಿ 1978 ರಲ್ಲಿ ಮಾಜಿ ಸಚಿವ ಎನ್‌.ಬಸವಯ್ಯ, 1983 ರಲ್ಲಿ ಬಿಜೆಪಿಯ ಎಸ್‌.ಜಿ.ರಾಮಲಿಂಗಯ್ಯ, ನಂತರ 1985 ರಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಗೆಲುವು ಸಾಧಿಸಿದ್ದರು.

ಕೈ ಬಲಪಡಿಸುವ ನಾಯಕರು ಬರಲೇ ಇಲ್ಲ:1985 ರವರೆಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿಕಾಂಗ್ರೆಸ್‌ ತನ್ನ ಪ್ರಾಬಲ್ಯ ಸಾಧಿಸುತ್ತಾ ಬಂದಿತ್ತು, ಎನ್‌.ಬಸವಯ್ಯ ಅವರಿಗೆ ಕಾಂಗ್ರೆಸ್‌ ಟಿಕೆಟ್‌ತಪ್ಪಿದ ಮೇಲೆ ಬಂಗಾರಪ್ಪ ಅವರ ಕೆಸಿಪಿಯಿಂದಗೆಲುವು ಸಾಧಿಸಿದ ಮೇಲೆ ಈ ಕ್ಷೇತ್ರದಲ್ಲಿ ಕೈಬಲಪಡಿಸುವ ನಾಯಕರು ಬರಲೇ ಇಲ್ಲ. ನಂತರಜೆ.ಸಿ.ಮಾಧುಸ್ವಾಮಿ ಮತ್ತು ಸಿ.ಬಿ.ಸುರೇಶ್‌ಬಾಬು ರಾಜಕೀಯ ಆರಂಭಿಸಿದರು.

ಸೋತವರು ಸಂಘಟನೆಯಿಂದ ದೂರ: ಕಾಂಗ್ರೆಸ್‌ ಪಕ್ಷದಿಂದ ಇಲ್ಲಿಯವರೆಗೆ ಬಿ.ಲಕ್ಕಪ್ಪ,ಎಚ್‌.ಎಂ.ಸುರೇಂದ್ರಯ್ಯ, ಸೀಮೆಎಣ್ಣೆ ಕೃಷ್ಣಯ್ಯ, ಸಾಸಲು ಸತೀಶ್‌, ರೇಣುಕಾ ಪ್ರಸಾದ್‌,ಸಂತೋಷ್‌ ಜಯಚಂದ್ರ ಅವರು ಸ್ಪರ್ಧಿಸಿಸೋಲು ಕಂಡಿದ್ದಾರೆ. ಪಕ್ಷದಿಂದ ಟಿಕೆಟ್‌ ಪಡೆದುಸೋಲು ಕಂಡವರು ಯಾರೂ ಮತ್ತೆ ಕ್ಷೇತ್ರದಲ್ಲಿ ಪಕ್ಷಸಂಘಟನೆ ಮಾಡುವ ಪ್ರಯತ್ನ ಮಾಡಲಿಲ್ಲ, ಇತ್ತ ತಿರುಗಿ ನೋಡಿಲ್ಲ.

Advertisement

ಸಂತೋಷ್‌ ಜಯಚಂದ್ರ ಬರಲಿಲ್ಲ: ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ 2018ರ ಚುನಾವಣೆಯಲ್ಲಿಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಸಂತೋಷ್‌ ಜಯಚಂದ್ರ 46 ಸಾವಿರ ಮತ ಪಡೆದರೂ ಮತ್ತೆಕ್ಷೇತ್ರದ ಕಡೆ ಮುಖ ಮಾಡಲಿಲ್ಲ. ಇದರಿಂದ ಪಕ್ಷದ ಸಂಘಟನೆ ಕುಂಟುಂತ್ತಾ ಸಾಗಿದೆ.

ಟಿಕೆಟ್‌ಗೆ ಅರ್ಜಿ ಸಲ್ಲಿಸಿದವರು: ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮತ್ತೆಕಾಂಗ್ರೆಸ್‌ನಲ್ಲಿ ಈಗಾಗಲೇ ಚಟುವಟಿಕೆ ಪ್ರಾರಂಭವಾ ಗಿದ್ದು, ಟಿಕೆಟ್‌ಗಾಗಿ ಫೈಟ್‌ ನಡೆಯುತ್ತಿದೆ. ಈ ಬಾರಿ ಟಿಕೆಟ್‌ಗಾಗಿ ವಕೀಲರಾದ ಸಿ. ಎಂ.ಧನಂಜಯ, ಮಾಜಿ ಶಾಸಕ ಬಿ.ಲಕ್ಕಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈ.ಸಿ.ಸಿದ್ದರಾಮಯ್ಯ,ನೀರಾವರಿ ಹೋರಾಟಗಾರ, ತುಮಕೂರು ಶ್ರೀಮಂಜುನಾಥ ಆಸ್ಪತ್ರೆಯ ವೈದ್ಯರೂ, ಜಿಲ್ಲಾಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಡಾ.ಎಸ್‌.ಜಿ.ಪರಮೇಶ್ವರಪ್ಪ, ಡಾ.ವಿಜಯ ರಾಘವೇಂದ್ರ,ಡಾ.ವನಿತಾ, ಜಗದೀಶ್‌, ರೇಣುಕಪ್ಪ ಅವರುಕೆಪಿಸಿಸಿಗೆ ತಲಾ 2 ಲಕ್ಷ ರೂ. ಪಾವತಿಸಿ ಟಿಕೆಟ್‌ ಅರ್ಜಿ ಸಲ್ಲಿಸಿದ್ದಾರೆ.

ಡಾ.ಎಸ್‌.ಜಿ.ಪರಮೇಶ್ವರಪ್ಪ ಪ್ರಚಾರ: ಚಿಕ್ಕನಾ  ಯಕನಹಳ್ಳಿ ಕ್ಷೇತ್ರದವರೇ ಆದ ಡಾ.ಎಸ್‌.ಜಿ.  ಪರಮೇಶ್ವರಪ್ಪ ಮೂಲತಃ ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿದ್ದು, 2008 ರಿಂದ ಪಕ್ಷದಲ್ಲಿಟಿಕೆಟ್‌ ಆಕಾಂಕ್ಷಿ ಯಾಗಿದ್ದಾರೆ. ಹಲವು ಜನಪರಹೋರಾಟ ಮಾಡಿರುವ ಅವರು ನೀರಾವರಿಹೋರಾಟವನ್ನು ಪಟ್ಟನಾಯಕನಹಳ್ಳಿ ಶ್ರೀಗಳುಮತ್ತು ಕುಪ್ಪೂರು ಶ್ರೀಗಳು ಮತ್ತು ಇತರೆ ಮುಖಂಡರ ನೇತೃತ್ವದಲ್ಲಿ ಹೋರಾಟ ಮಾಡಿ ದ್ದಾರೆ.ಪಕ್ಷದಿಂದ ಈ ಬಾರಿ ಟಿಕೆಟ್‌ ಸಿಗುತ್ತದೆ ಎಂದು ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ವೈ.ಸಿ.ಸಿದ್ದರಾಮಯ್ಯ ಕಾಂಗ್ರೆಸ್‌ ಕಟ್ಟಾಳು, ಚಿಕ್ಕನಾಯಕನಹಳ್ಳಿ ಕ್ಷೇತ್ರದವರೇ ಅದ ಅವರುಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ,ವಿ.ಎಸ್‌.ಎಸ್‌.ಎನ್‌ ನಿಂದ ಜಿಲ್ಲಾ ಪಂಚಾಯಿತಿವರೆಗೆ ಕಾಂಗೆಸ್‌ನಿಂದ ಗೆಲುವು ಸಾಧಿಸಿಕೊಂಡುಬಂದಿದ್ದಾರೆ. ಟಿಕೆಟ್‌ಗಾಗಿ ತೀವ್ರ ಪ್ರಯತ್ನಮಾಡುತ್ತಿದ್ದಾರೆ. ಮಾಜಿ ಶಾಸಕ ಬಿ.ಲಕ್ಕಪ್ಪ ಅವರುಹಿರಿಯ ಕಾಂಗ್ರೆಸ್‌ ಮುಖಂಡರೊಂದಿಗೆಚರ್ಚಿಸಿ ಪಕ್ಷದ ಟಿಕೆಟ್‌ ಪಡೆಯುವ ಆಕಾಂಕ್ಷೆಹೊಂದಿದ್ದಾರೆ.

 ಸ್ಥಳೀಯರಿಗೆ ಟಿಕೆಟ್‌ ನೀಡಿ: ಹೊರಗಡೆಯಿಂದ ಬಂದವರಿಗೆ ಟಿಕೆಟ್‌ ನೀಡಿ..ನೀಡಿ ಈಕ್ಷೇತ್ರದದಲ್ಲಿ ಕಾಂಗ್ರೆಸ್‌ ಪಕ್ಷ ಮೂಲೆ ಗುಂಪಾಗಿದೆ. ನಾವು ಪಕ್ಷವನ್ನು ನಂಬಿರುವ ಕಾರ್ಯಕರ್ತರು,ಎಲ್ಲಿಗೆ ಹೋಗಬೇಕು, ಈ ಬಾರಿ ಸ್ಥಳಿಯರಿಗೆಟಿಕೆಟ್‌ ನೀಡಿ ಎನ್ನುವ ಕೂಗು ಒಂದೆಡೆಯಾದರೆ,ಯಾರಾದರೇನು ಚುನಾವಣೆಯಲ್ಲಿ ಹೇರಳಹಣ ಖರ್ಚು ಮಾಡಿ ಗೆಲ್ಲುವವರಿಗೆ ಟಿಕೇಟ್‌ನೀಡಿ ಎನ್ನುವ ಮಾತುಗಳೂ ಕಾಂಗ್ರೆಸ್‌ ಕಾರ್ಯಕರ್ತ ರಿಂದ ಕೇಳಿ ಬರುತ್ತಿದೆ.

ಧನಂಜಯ ಚಟುವಟಿಕೆ ಬಿರುಸು :  ಮೂಲತಃ ಬೆಂಗಳೂರಿನವರಾದ ಸಿ.ಎಂ.ಧನಂಜಯ ಅವರು ಈ ಬಾರಿ ಟಿಕೇಟ್‌ ಪಡೆಯಲು ವರಿಷ್ಠರ ಮಟ್ಟದಲ್ಲಿ ತೀವ್ರ ಲಾಬಿ ಆರಂಭಿಸಿದ್ದಾರೆ. ಕಾಂಗ್ರೆಸ್‌ನ ಕೆಲವು ಮುಖಂಡರು ಧನಂಜಯ ಅವರಿಗೆಟಿಕೆಟ್‌ ದೊರೆಯುತ್ತದೆ ಎಂದು ಹೇಳಲಾರಂಭಿಸಿದ್ದಾರೆ. ಅವರೂ ಕೂಡ ಚಿಕ್ಕನಾಯಕನಹಳ್ಳಿ ಸಮೀಪ ಒಂದು ಕಲ್ಯಾಣ ಮಂಟಪವನ್ನು ಬಾಡಿಗೆ ಪಡೆದು ಅಲ್ಲಿ ತಮ್ಮ ಚಟುವಟಿಕೆ ಆರಂಭಿಸಿ ಜನರನ್ನು ತಮ್ಮತ್ತ ಸೆಳೆಯುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

ಕೆ.ಎಸ್‌.ಕಿರಣ್‌ ಕುಮಾರ್‌ ಕೈ ಹಿಡಿಯುವರೇ? :

ಬಿಜೆಪಿಯಲ್ಲಿ ನಿಷ್ಠಾವಂತರಾಗಿರುವ ಮಾಜಿ ಶಾಸಕ ಹಾಗೂ ಕರ್ನಾಟಕ ಜೈವಿಕ ಇಂಧನ ನಿಗಮ ಮಂಡಲಿ ಅಧ್ಯಕ್ಷ, ಸಂಘ ಪರಿವಾರ ಮೂಲದ ಕೆ.ಎಸ್‌.ಕಿರಣ್‌ ಕುಮಾರ್‌ ಬಿಜೆಪಿಯಲ್ಲಿ ಟಿಕೆಟ್‌ ತಪ್ಪಿದರೆ ಕಾಂಗ್ರೆಸ್‌ ಪಕ್ಷಕ್ಕೆ ಬರುತ್ತಾರೆ ಎನ್ನುವ ಗುಮಾನಿ ಕ್ಷೇತ್ರದಲ್ಲಿ ಎದ್ದಿದೆ. ಕಿರಣ್‌ ಕುಮಾರ್‌ಬಿಜೆಪಿಯಲ್ಲಿ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ, ಕಳೆದಬಾರಿಯೂ ಟಿಕೆಟ್‌ ಕೇಳಿದ್ದರೂ ಸಚಿವ ಜೆ.ಸಿ.ಮಾಧುಸ್ವಾಮಿಗೆದೊರಕಿತ್ತು. ಈಗ ಮತ್ತೆ ಬಿಜೆಪಿಯಿಂದ ಟಿಕೆಟ್‌ ಕೇಳುತ್ತಿದ್ದು,ದೊರೆಯುತ್ತದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಒಂದು ವೇಳೆಟಿಕೆಟ್‌ ಕೈ ತಪ್ಪಿದರೂ ಸ್ಪರ್ಧೆ ಖಚಿತ ಎಂದು ಹೇಳುತ್ತಿದ್ದಾರೆ. ಈಘೋಷಣೆಯೇ ಹಲವು ಆಯಾಮಕ್ಕೆ ಇಂಬು ನೀಡುವಂತಿದೆ.ಬಿಜೆಪಿ ಟಿಕೆಟ್‌ ಸಿಗದಿದ್ದರೆ ಕಾಂಗ್ರೆಸ್‌ನತ್ತ ಮುಖ ಮಾಡುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಕಾಂಗ್ರೆಸ್‌ನ ಕೆಲವು ಮುಖಂಡರು, ಕಿರಣ್‌ ಕುಮಾರ್‌ ಪಕ್ಷಕ್ಕೆ ಬಂದರೆ ಸ್ವಾಗತಿಸಲು ಸನ್ನದ್ಧರಾಗಿದ್ದಾರೆ.

ಚಿಕ್ಕನಾಯಕನಹಳ್ಳಿ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಈ ಕ್ಷೇತ್ರ ಒಂದು ಕಾಲದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಪಕ್ಷ ಸಮರ್ಥರಿಗೆ ಟಿಕೆಟ್‌ ನೀಡದೇ ಬೇರೆ ಕಡೆಯಿಂದ ಬಂದವರಿಗೆ ಮಣೆ ಹಾಕಿ ಹಾಕಿ ಪಕ್ಷ ಹಾಳಾಗಿದೆ. ಈ ಬಾರಿ ಸ್ಥಳೀಯವಾಗಿರುವ ಯಾರಿಗಾದರೂ ಟಿಕೆಟ್‌ ನೀಡಿ ಎನ್ನುವುದೇ ನಮ್ಮ ಒತ್ತಾಯ. ವೈ.ಸಿ.ಸಿದ್ದರಾಮಯ್ಯ, ಜಿಪಂ ಮಾಜಿ ಸದಸ್ಯ

ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಹಲವು ವರ್ಷಗಳಿಂದ ಪಕ್ಷದ ಕೆಲಸಮಾಡಿಕೊಂಡು ಬಂದಿದ್ದೇನೆ. ಕ್ಷೇತ್ರದ ಹಲವು ಸಮಸ್ಯೆ, ನೀರಾವರಿ ಹೋರಾಟ ಮಾಡಿದ್ದೇನೆ. 2008ರಿಂದ ಪಕ್ಷದ ಟಿಕೆಟ್‌ ಕೇಳುತ್ತಿದ್ದು, ಈ ಬಾರಿಯಾದರೂ ಹೊರಗಿನವರಿಗೆ ಟಿಕೆಟ್‌ ನೀಡದೇ ಸ್ಥಳೀಯರಿಗೆ ನೀಡಿ ಎನ್ನುವುದು ನಮ್ಮ ಒತ್ತಾಯ ವಾಗಿದೆ.ಡಾ.ಎಸ್‌.ಜಿ.ಪರಮೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್‌ ಸಮಿತಿ

ನಾನೂ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಟಿಕೇಟ್‌ ಆಕಾಂಕ್ಷಿ. ಕ್ಷೇತ್ರದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿದ್ದಾರೆ, ಉತ್ತಮ ನಾಯಕ ಬೇಕು. ಕ್ಷೇತ್ರದಲ್ಲಿಬೇರೆ ಪಕ್ಷ ಪ್ರತಿನಿಧಿಸುವವರಲ್ಲಿ ಒಬ್ಬರು ದುರಹಂಕಾರಿ, ಮತ್ತೂಬ್ಬರು ಸೋಮಾರಿ.ಇವರನ್ನು ಸೋಲಿಸಿ ಕಾಂಗ್ರೆಸ್‌ ಬಾವುಟ ಹಾರಿಸಲು ಪಕ್ಷದ ಹೈಕಮಾಂಡ್‌ ಟಿಕೆಟ್‌ ನೀಡಿದರೆ ಖಂಡಿತ ಕಾಂಗ್ರೆಸ್‌ ಬಾವುಟ ಹಾರಿಸುತ್ತೇನೆ. ಸಿ.ಎಂ.ಧನಂಜಯ, ವಕೀಲರು ಹಾಗೂ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಉತ್ತಮ ಅಭ್ಯರ್ಥಿಗೆ ನೀಡಿದರೆಗೆಲ್ಲುವ ಅವಕಾಶ ಇದೆ. ಪಕ್ಷದ ಹೈಕಮಾಂಡ್‌ ಯಾರಿಗೇ ಟಿಕೆಟ್‌ ನೀಡಿದರೂ ನಾವು ಕೆಲಸ ಮಾಡುತ್ತೇವೆ. ಕೆ.ಜಿ.ಕೃಷ್ಣೇಗೌಡ, ಕಾಂಗ್ರೆಸ್‌ ಮುಖಂಡ, ಚಿಕ್ಕನಾಯಕನಹಳ್ಳಿ

ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next