Advertisement

ಸಂಘಟಿತ ಹೋರಾಟದಿಂದ ಸಮುದಾಯ ಅಭಿವೃದ್ಧಿ: ಶಾಮರಾವ್‌

12:44 PM Aug 26, 2018 | |

ಹುಮನಾಬಾದ: ಹಡಪದ ಅಪ್ಪಣ್ಣನವರ ಜಯಂತಿಯನ್ನು ಸರ್ಕಾರ ಸ್ವ ಇಚ್ಚೆಯಿಂದ ಆಚರಿಸುತ್ತಿಸುತ್ತಿಲ್ಲ. ಹಡಪದ ಅಪ್ಪಣ ಸವಿತಾ ಸಮಾಜ ಎರಡು ದಶಕದಿಂದ ನಡೆಸಿದ ನಿರಂತರ ಹೋರಾಟದ ಫಲವಾಗಿದೆ ಎಂದು ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಶಾಮರಾವ್‌ ಮೋರ್ಗಿಕರ್‌ ಹೇಳಿದರು.

Advertisement

ಚಿಟಗುಪ್ಪದ ಈಶ್ವರ ದೇವಸ್ಥಾನದಲ್ಲಿ ನಡೆದ ಹಡಪದ ಅಪ್ಪಣ್ಣನವರ 884ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘಟಿತ ಹೋರಾಟದಿಂದ ಮಾತ್ರ ಸಮುದಾಯ ಅಭಿವೃದ್ಧಿ ಸಾಧ್ಯ. ಸರ್ಕಾರ ನಮ್ಮ ಸಮುದಾಯಕ್ಕೆ ಹೇಳಿಕೊಳ್ಳುವಂತಹ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಸರ್ಕಾರದಿಂದ ಜಯಂತಿ ಆಚರಿಸಲು  ಎರಡು ದಶಕ ಬೇಕಾಯಿತು. ಆದರೇನಮ್ಮ ಸಮಾಜದವರು ವೈಯಕ್ತಿಕ ಭಿನ್ನಮತ, ಒಣ ಪ್ರತಿಷ್ಟೆ ನೆಪದಲ್ಲಿ ಕಾಲಹರಣ ಮಾಡದೇ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
 
ಪುರಸಭೆ ಅಧ್ಯಕ್ಷೆ ಗೌರಮ್ಮ ವರನಾಳ್‌ ಹಡಪದ ಅಪ್ಪಣ್ಣನವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಪುರಸಭೆಯಿಂದ ಲಭಿಸುವ ಸೌಲಭ್ಯಗಳನ್ನು ಒದಗಿಸಲು ಶಕ್ತಿಮೀರಿ ಪ್ರಯತ್ನಿಸುವುದಾಗಿ ಹೇಳಿದರು. ಸಂಘಟನೆ ಕೊರತೆ ಕಾರಣದಿಂದ ಪ್ರತಿಯೊಂದು ಸಮುದಾಯಗಳು
ಸರ್ಕಾರಿ ಸೌಲಭ್ಯದಿಂದ ವಂಚಿತವಾಗುತ್ತಿರುವುದು ನಿಜ. ಅದೇ ಕಾರಣಕ್ಕಾಗಿ ಸವಿತಾ ಸಮಾಜದ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ, ಸರ್ಕಾರಿ ಹುದ್ದೆ ಕೊಡಿಸಲು ಯತ್ನಿಸಬೇಕೆಂದು ಸಲಹೆ ನೀಡಿದರು.

ಸವಿತಾ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಶಂಕರ ಸೇಡೋಳ್‌ ಮಾತನಾಡಿ, ಚಿಟಗುಪ್ಪದ ಸವಿತಾ ಸಮಾಜದಲ್ಲಿನ ಒಗ್ಗಟ್ಟು ಇಡೀ ಜಿಲ್ಲೆಗೆ ಮಾದರಿಯಾಗಿದೆ. ಇತರ ತಾಲೂಕಿನ ಮುಖಂಡರು ಇವರನ್ನು ಅನುಸರಣೆ ಮಾಡಬೇಕು ಎಂದರು. ಶ್ರೀಗುರು ಅಯ್ಯಪ್ಪ ಸ್ವಾಮಿ ಪದವಿ
ಕಾಲೇಜಿನ ಪ್ರಾ ಚಾರ್ಯ ಡಾ| ಎನ್‌.ಎಸ್‌.ಮಲಶಟ್ಟಿ ವಿಶೇಷ ಉಪನ್ಯಾಸ ನೀಡಿದರು. 

ಉತ್ಸವ ಸಮಿತಿ ಅಧ್ಯಕ್ಷ ಪ್ರಭು ಹಡಪದ, ರಮೇಶ ಜಿ.ಕಲ್ಯಾಣಿ, ಅನೀಲಕುಮಾರ ಹಡಪದ, ಸುನೀಲ ಹಡಪದ ಚಿಂಚೋಳಿ ಅರ್ಮಿಳಾ ಧನವಾಡಕರ್‌, ಸವಿತಾ ಸಮಾಜದ ಪದಾಧಿಕಾರಿಗಳಾದ ಕಿರಣ ಧನವಾಡಕರ್‌, ರಾಜಕುಮಾರ ಮಾನೆ, ಸಂಜೀವಕುಮಾರ ಮಾನೆ, ಮಲ್ಲಿಕಾರ್ಜುನ ಕಟ್ಟಿಮನಿ, ಸಿಕ್ರೇಶ್ವರ ಹಡಪದ, ರಾಮಚಂದ್ರ ಹಡಪದ ಮೊದಲಾದವರು ಇದ್ದರು. ಶ್ವೇತಾ ಪ್ರಾರ್ಥಿಸಿದರು. ಆದರ್ಶ ನಿರೂಪಿಸಿ, ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next