Advertisement

ವಡೋದರಾದಲ್ಲಿ ಧ್ವಜದ ವಿಚಾರದಲ್ಲಿ ಕೋಮು ಘರ್ಷಣೆ: 36 ಜನರ ಬಂಧನ

03:59 PM Oct 03, 2022 | Team Udayavani |

ವಡೋದರಾ: ಗುಜರಾತ್‌ನ ವಡೋದರಾ ಜಿಲ್ಲೆಯ ಸಾವ್ಲಿ ಪಟ್ಟಣದಲ್ಲಿ ಧಾರ್ಮಿಕ ಧ್ವಜವನ್ನು ಹಾಕುವ ವಿಚಾರದಲ್ಲಿ ಎರಡು ಗುಂಪುಗಳು ಪರಸ್ಪರ ಘರ್ಷಣೆ ಮತ್ತು ಕಲ್ಲು ತೂರಾಟ ನಡೆಸಿದ್ದು, 36 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

Advertisement

ಧಮೀಜಿ ಕಾ ಡೇರಾ ಪ್ರದೇಶದ ವಿದ್ಯುತ್ ಕಂಬದ ಮೇಲೆ ಮತ್ತೊಂದು ಸಮುದಾಯದ ಸದಸ್ಯರು ತಮ್ಮ ಧ್ವಜದ ಜೊತೆಗೆ ಧಾರ್ಮಿಕ ಧ್ವಜವನ್ನು ಹಾಕಲು ಪ್ರಯತ್ನಿಸುತ್ತಿರುವುದನ್ನು ಜನರ ಗುಂಪೊಂದು ವಿರೋಧಿಸಿದ ನಂತರ ಶನಿವಾರ ರಾತ್ರಿ ಈ ಘಟನೆ ಸಂಭವಿಸಿದೆ ಎಂದು ಸಾವ್ಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : ಕ್ರಿಟಿಕಲ್ ಕೇರ್ ಯೂನಿಟ್ ನಲ್ಲಿ ಮುಲಾಯಂ: ತಜ್ಞರ ತಂಡದಿಂದ ಚಿಕಿತ್ಸೆ

ವಿಷಯ ಉಲ್ಬಣಗೊಂಡು ಎರಡೂ ಸಮುದಾಯಗಳು ಪರಸ್ಪರ ಕಲ್ಲು ತೂರಾಟ ಆರಂಭಿಸಿದರು. ಯಾರೂ ಗಾಯಗೊಂಡಿಲ್ಲ ಆದರೆ ವಾಹನ ಮತ್ತು ಅಂಗಡಿಗೆ ಗಲಭೆಕೋರರಿಂದ ಹಾನಿಯಾಗಿದೆ ಎಂದು ಸಾವ್ಲಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಆರ್ ಮಹಿದಾ ತಿಳಿಸಿದ್ದಾರೆ.

ಶನಿವಾರ ತಡರಾತ್ರಿ ಎರಡೂ ಗುಂಪುಗಳಿಂದ ಎಫ್‌ಐಆರ್ ದಾಖಲಿಸಲಾಗಿದ್ದು, 43 ಜನರ ವಿರುದ್ಧ ಭಾರತೀಯ ದಂಡ ಸಂಹಿತೆಯ ಗಲಭೆ, ಕಾನೂನುಬಾಹಿರ ಸಭೆ, ಇತ್ಯಾದಿಗಳಿಗಾಗಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮಹಿದಾ ಹೇಳಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next