Advertisement

ಕಾಮನ್ವೆಲ್ತ್‌ ಪವರ್ ಲಿಫ್ಟಿಂಗ್‌: ಚಿನ್ನ ಗೆದ್ದ ಸತೀಶ್‌ ಖಾರ್ವಿ, ಪ್ರತೀಕ್ಷಾ ನಾಯಕ್

12:28 PM Nov 30, 2022 | Team Udayavani |

ಕುಂದಾಪುರ: ನ್ಯೂಜಿಲ್ಯಾಂಡ್‌ನ‌ ಆಕ್ಲೆಂಡ್‌ನ‌ಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ ಶಿಪ್‌ನಲ್ಲಿ ಉಡುಪಿ ಜಿಲ್ಲೆಯ ಇಬ್ಬರು ಲಿಫ್ಟರ್‌ಗಳು ಚಿನ್ನದ ಪದಕ ಜಯಿಸಿದ್ದಾರೆ. ಇವರೆಂದರೆ ಕುಂದಾಪುರದ ಸತೀಶ್‌ ಖಾರ್ವಿ ಮತ್ತು ಉಡುಪಿಯ ವಿದ್ಯಾರ್ಥಿನಿ ಪ್ರತೀಕ್ಷಾ ನಾಯಕ್‌.

Advertisement

ವೃತ್ತಿಯಲ್ಲಿ ದಿನಸಿ ವ್ಯಾಪಾರಿಯಾಗಿರುವ ಕುಮಟಾದ ವಿಕ್ರಮ್‌ ನಾರಾಯಣ್‌ ಪ್ರಭು ಅವರಿಗೂ ಬಂಗಾರ ಒಲಿದಿದೆ. ಅವರು 93 ಕೆ.ಜಿ. ವಿಭಾಗದ ಬೆಂಚ್‌ ಪ್ರಸ್‌ನಲ್ಲಿ ಈ ಸಾಧನೆಗೈದರು.

ಸತೀಶ್‌ ಖಾರ್ವಿ ಒಟ್ಟು 2 ಪದಕ ಗಳನ್ನು ತಮ್ಮದಾಗಿಸಿಕೊಂಡರು. ಮಾಸ್ಟರ್‌ ಒನ್‌ 66 ಕೆ.ಜಿ. ವಿಭಾಗದ ಕ್ಲಾಸಿಕ್‌ ಬೆಂಚ್‌ ಪ್ರಸ್‌ನಲ್ಲಿ ಚಿನ್ನ ಹಾಗೂ ಎಕ್ವಿಪೆಡ್‌ ಬೆಂಚ್‌ ಪ್ರಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದರು. ಡಿ. ಒಂದರಂದು ಎಕ್ವಿಪೆಡ್‌ ಪವರ್‌ ಲಿಫ್ಟಿಂಗ್‌ ಸ್ಪರ್ಧೆ ನಡೆಯಲಿದೆ.

ಉಡುಪಿಯ ಅಜ್ಜರಕಾಡಿನ ಡಾ| ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೊತ್ತರ ಪದವಿ ಕೇಂದ್ರದ ವಿದ್ಯಾರ್ಥಿನಿ ಪ್ರತೀಕ್ಷಾ ನಾಯಕ್‌ ಅವರು 83 ಕೆ.ಜಿ. ಜೂನಿಯರ್‌ ವಿಭಾಗದ ಬೆಂಚ್‌ ಪ್ರಸ್‌ ನಲ್ಲಿ ಚಿನ್ನದ ಪದಕ ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next