Advertisement

ಕಾಮನ್ವೆಲ್ತ್ ಗೇಮ್ಸ್: ಸೆಮಿ ಪ್ರವೇಶಿಸಿದ ಭಾರತದ ವನಿತೆಯರ ಹಾಕಿ ತಂಡ

06:58 PM Aug 03, 2022 | Team Udayavani |

ಬರ್ಮಿಂಗ್ ಹ್ಯಾಮ್ : ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ವನಿತೆಯರು ಬುಧವಾರ ನಡೆದ ರೋಚಕ ಪಂದ್ಯದಲ್ಲಿ ಕೆನಡಾ ತಂಡವನ್ನು 3-2 ಅಂತರದಲ್ಲಿ ಸೋಲಿಸಿ ಸೆಮಿ ಫೈನಲ್ ಪ್ರವೇಶಿಸಿದ್ದಾರೆ.

Advertisement

‘ಎ’ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಭಾರತದ ವನಿತೆಯರು 22 ನೇ ನಿಮಿಷದ ವರೆಗೆ ಹಿಡಿತ ಸಾಧಿಸಿದ್ದರು. ಸಲೀಮಾ ಟೆಟೆ 3 ನೇ ನಿಮಿಷದಲ್ಲಿ ಮತ್ತು ನವನೀತ್ ಕೌರ್ 22 ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ ಮೇಲು ಗೈ ಒದಗಿಸಿಕೊಟ್ಟರು. ಆ ಬಳಿಕ ಆಕ್ರಮಣಕಾರಿ ಆಟವಾಡಿದ ಕೆನಡಾದ ಆಟಗಾರ್ತಿಯರು, 23ನೇ ನಿಮಿಷದಲ್ಲಿ ಬ್ರಿಯೆನ್ನೆ ಸ್ಟೇರ್ಸ್ ಮತ್ತು 39ನೇ ನಿಮಿಷದಲ್ಲಿ ಹನ್ನಾ ಹಾಘನ್ ಗೋಲು ಬಾರಿಸಿ ಸಮಬಲ ಸಾಧಿಸುವಂತೆ ಮಾಡಿದರು.

ಜಿದ್ದಾಜಿದ್ದಿನ ಪಂದ್ಯದಲ್ಲಿ  ಲಾಲ್ರೆಮ್ಸಿಯಾಮಿ 51 ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ನಲ್ಲಿ ಗೋಲು ಬಾರಿಸುವ ಮೂಲಕ ಭಾರತಕ್ಕೆ ಮೇಲುಗೈ ಒದಗಿಸಿ ಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next