Advertisement

ಮಿನಿ ಒಲಿಂಪಿಕ್ಸ್‌ಗೆ ಅದ್ದೂರಿ ಚಾಲನೆ

06:00 AM Apr 05, 2018 | |

ಗೋಲ್ಡ್‌ ಕೋಸ್ಟ್‌: ಇಪ್ಪತ್ತೈದು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಜನಸ್ತೋಮ, 71 ರಾಷ್ಟ್ರಗಳ ಕ್ರೀಡಾಪಟುಗಳ ಶಿಸ್ತಿನ ಪಥ ಸಂಚಲನ, ಆಕಾಶದಲ್ಲಿ ಸಿಡಿಮದ್ದಿನ ಬಣ್ಣದ ಓಕುಳಿ, ಕ್ರೀಡಾಭಿಮಾನಿಗಳ ಜಯಘೋಷ…. ಬುಧವಾರ ರಾತ್ರಿ ಗೋಲ್ಡ್‌ಕೋಸ್ಟ್‌ ಕರಾವಳಿ ತೀರದ “ಕರಾರ ಸ್ಟೇಡಿಯಂ’ ಭೂಲೋಕದ ಸ್ವರ್ಗದ ಸಿರಿಯಾಗಿ 21ನೇ ಕಾಮನ್ವೆಲ್ತ್‌ ಕ್ರೀಡಾಕೂಟದ ರಂಗ್‌ಬಿರಂಗಿ ಉದ್ಘಾಟನೆಗೆ ಸಾಕ್ಷಿಯಾಯಿತು.

Advertisement

ಭಾರತದ ಧ್ವಜ ಹಿಡಿದ ಸಿಂಧು
ಪಥಸಂಚಲನದಲ್ಲಿ ಪಾಲ್ಗೊಂಡ ಪ್ರತಿಯೊಂದು ರಾಷ್ಟ್ರದ ಕ್ರೀಡಾಪಟುಗಳೂ ತಮ್ಮ ದೇಶದ ಸಂಸ್ಕೃತಿ ಬೀರುವಂತಹ ಉಡುಪುಗಳನ್ನು ಧರಿಸಿದ್ದರು. ಆದರೆ ಭಾರತದ ಆ್ಯತ್ಲೀಟ್‌ಗಳೆಲ್ಲ ಕಾಮನ್‌ ಸೂಟ್‌, ಬ್ಲೇಜರ್‌, ಬೂಟ್‌ ತೊಟ್ಟು ಗಮನ ಸೆಳೆಯುವಂತೆ ಆಕರ್ಷಕ ಪಥ ಸಂಚಲನದಲ್ಲಿ ಪಾಲ್ಗೊಂಡರು. ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಭಾರತದ ಧ್ವಜಧಾರಿಯಾಗಿ ತಂಡವನ್ನು ಮುನ್ನಡೆಸಿದರು. ಗೋಲ್ಡ್‌ಕೋಸ್ಟ್‌ನಲ್ಲಿದ್ದ ಸಾವಿರಾರು ಸಂಖ್ಯೆಯ ಭಾರತೀಯ ಅಭಿಮಾನಿಗಳು ಕೂಡ ಭಾರತದ ಪಥ ಸಂಚಲನವನ್ನು ಕಣ್ತುಂಬಿಕೊಂಡರು.


ವರ್ಣರಂಜಿತ ಚಾಲನೆ
ಗೋಲ್ಟ್ ಕೋಸ್ಟ್‌ ಕ್ರೀಡಾಂಗಣದ ಒಳಗೆ ಹಾಗೂ ಹೊರಗೆ ಹಬ್ಬದ ವಾತಾವರಣ. ಎಲ್ಲೆಲ್ಲೂ ಜನ ಜಾತ್ರೆ. ಈ ವೇಳೆ ಕ್ವೀನ್ಸ್‌ ಬ್ಯಾಟನ್‌ ಹೊತ್ತ ಕ್ರೀಡಾಪಟು ಮುಖ್ಯ ರಸ್ತೆಯ ಮೂಲಕ ಕ್ರೀಡಾಗ್ರಾಮವನ್ನು ಪ್ರವೇಶಿಸಿದರು. ಕೊನೆಗೆ ಕ್ರೀಡಾಗ್ರಾಮದಲ್ಲಿ ಕ್ವೀನ್‌ಸ ಬ್ಯಾಟನ್‌ ಹಿಡಿದ ವ್ಯಕ್ತಿ ಕೈಎತ್ತಿ ಸಂಕೇತ ಹೊರಡಿಸಿದರು. ಈ ವೇಳೆ ಅವರ ಹಿಂದೆಯೆ ಇದ್ದ ವೇದಿಕೆಯಲ್ಲಿ ಅಳವಡಿಸಿದ್ದ ಬೃಹತ್‌ ಪರದೆಯಿಂದ ಬಣ್ಣದ ಬೆಂಕಿ ಕಿಡಿಗಳು ಹಾರಿದವು. ಜತೆಗೆ ಇಂಪಾದ ಪಾಶ್ಚಿಮಾತ್ಯ ಸಂಗೀತವೂ ನೋಡುಗರನ್ನು ಹುಚ್ಚೆಬ್ಬಿಸಿ ಕುಣಿಸಿತು. ವಿವಿಧ ರಾಷ್ಟ್ರಗಳ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.


ಇದೇ ವೇಳೆ ಆಸ್ಟ್ರೇಲಿಯದ ಬುಡಕಟ್ಟು ಸಂಸ್ಕೃತಿ ಬೀರುವಂತಹ ಕಾರ್ಯಕ್ರಮಗಳು ಜರಗಿದವು. ಅಷ್ಟೇ ಅಲ್ಲ, ಮಾನವನ ಉದಯ, ಆತ ನಾಗರೀಕತೆಯೆ ಅರಿವು ಕಂಡುಕೊಂಡ ಬಗೆ… ಎಲ್ಲವನ್ನೂ ನಾಟಕ ರೂಪದಲ್ಲಿ ಬಿಂಬಿಸಲಾಯಿತು. ವಶಾಹತುಶಾಹಿ ರಾಷ್ಟ್ರಗಳ ಕಪಿಮುಷ್ಟಿಯಿಂದ ಕಾಮವ್ವೆಲ್ತ್‌ ರಾಷ್ಟ್ರಗಳು ಪಾರಾದ ಬಗೆಯನ್ನು ಕಲಾವಿದರು ನೃತ್ಯ ರೂಪದಲ್ಲಿ ಪ್ರದರ್ಶಿಸಿದರು.


ಯುವರಾಜ,ರಾಣಿ ಭಾಗಿ
ಉದ್ಘಾಟನಾ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯದ ಯುವರಾಜ ಚಾರ್ಲ್ಸ್‌ ಭಾಗಿಯಾಗಿದ್ದರು. ಇವರೊಂದಿಗೆ ರಾಣಿ ಕ್ಯಾಮಿಲ್ಲಾ ಪಾರ್ಕರ್‌ ಬೌಲ್ಸ್‌ ಕೂಡ ಉಪಸ್ಥಿತರಿದ್ದರು. ಇದೊಂದು ಸ್ನೇಹ ಸೂಚಕವಾಗಿರುವ ಕ್ರೀಡಾಕೂಟ. ವಿಶ್ವದ ಎಲ್ಲ ಸ್ನೇಹಿತ ರಾಷ್ಟ್ರಗಳು ಇದರಲ್ಲಿ ಪಾಲ್ಗೊಂಡಿವೆ. ಕ್ರೀಡಾ ಹಬ್ಬಕ್ಕೆ ನಮ್ಮ ಮನೆಗೆ ಅವರೆಲ್ಲರನ್ನೂ ಸ್ವಾಗತಿಸಿದ್ದೇವೆ ಎಂದು ಚಾರ್ಲ್ಸ್‌ ತಿಳಿಸಿದರು.

ಅತ್ಯಾಧುನಿಕ ಸ್ಕೈ ಕ್ಯಾಮ್‌ ಬಳಕೆ
ಇತ್ತೀಚಿನ ದಿನಗಳಲ್ಲಿ ಪ್ರಮುಖ ಕ್ರೀಡಾಕೂಟದ ಉದ್ಘಾಟನೆ ವೇಳೆ ಸ್ಕೈ ಕೆಮರಾ ಬಳಸುವುದು  ಸಾಮಾನ್ಯವಾಗಿದೆ. ಅಂತೆಯೇ ಕಾಮನ್ವೆಲ್ತ್‌ ಉದ್ಘಾಟನೆಯ ಸೊಬಗನ್ನು ಸ್ಕೈ ಕೆಮರಾ ಮೂಲಕ ಸೆರೆಹಿಡಿಯಲಾಯಿತು. ಬಹು ಎತ್ತರದಿಂದ ಕ್ರೀಡಾಂಗಣದ ಉದ್ಘಾಟನೆ, ಸುತ್ತಮುತ್ತಲಿ® ವಾತಾವರಣದ ಮನಮೋಹಕ ದೃಶ್ಯಗಳನ್ನು ಸೆರೆ ಹಿಡಿಯಲಾಯಿತು. ಉದ್ಘಾಟನೆಗೆ ಮೂದಲು ಯುವತಿಯೊಬ್ಬಳು ಮೊಬೈಲ್‌ ಫೋನ್‌ ಮೂಲಕ ಡಿಜಿಟಲ್‌ ಕೌಂಟ್‌ಡೌನ್‌ ಚಾಲನೆ ನೀಡಿದರು. ಈ ಮೂಲಕ ಮಹಾನ್‌ ಕೂಟದ ಚಾಲನೆಗೆ ಅತ್ಯಾಧುನಿಕ ಸ್ಪರ್ಶ ನೀಡಲಾಯಿತು.

ಆಸ್ಟ್ರೇಲಿಯ ಖ್ಯಾತ ನಟ ಜಾಕ್‌ ಥಾಮ್ಸನ್‌ ಸ್ವಾಗತ ಕೋರಿದರು. ಭರವಸೆ, ಶಾಂತಿ ಹಾಗೂ ಒಗ್ಗಟ್ಟಿನ ಸಂದೇಶವನ್ನು ಸಾರಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next