Advertisement

ಭಾರತಕ್ಕೆ ಮತ್ತೊಂದು ಚಿನ್ನ: ಬಂಗಾರದ ತೂಕ ಎತ್ತಿದ ಅಚಿಂತಾ ಶೆಯುಲಿ

09:27 AM Aug 01, 2022 | Team Udayavani |

ಬರ್ಮಿಂಗಂ: ಇಲ್ಲಿನ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಭಾರತದ ವೇಟ್ ಲಿಫ್ಟರ್ ಅಚಿಂತಾ ಶೆಯುಲಿ ಅವರು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದರೊಂದಿಗೆ ಮೂರು ಚಿನ್ನದ ಪದಕದೊಂದಿಗೆ ಭಾರತದ ಪದಕಗಳ ಸಂಖ್ಯೆ ಆರಕ್ಕೇರಿದೆ.

Advertisement

20 ವರ್ಷದ ಅಚಿಂತಾ ಶೆಯುಲಿ ಅವರು 73 ಕೆಜಿ ವಿಭಾಗದಲ್ಲಿ ಸ್ಪರ್ಧೆ ನಡೆಸಿದ್ದರು. ಮೊದಲ ಬಾರಿಗೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಅಚಿಂತಾ ಒಟ್ಟು 313 ಕೆಜಿ ಭಾರತ ಎತ್ತಿದರು. ಕೂಟದಲ್ಲಿ ಬೆಳ್ಳಿ ಪದಕ ಪಡೆದ ಮಲೇಶ್ಯಾ ಎರ್ರಿ ಹಿದಾಯತ್ ಮುಹಮ್ಮದ್ ಅವರು ಅಚಿಂತಗಿಂತ ಹತ್ತು ಕೆಜಿ ಕಡಿಮೆ ಭಾರ ಎತ್ತಿದರು.

ಇದನ್ನೂ ಓದಿ:ಬೊಮ್ಮಾಯಿ ತಾರತಮ್ಯ ಧೋರಣೆ ಪ್ರದರ್ಶಿಸಿ ಮುಖ್ಯಮಂತ್ರಿ ಹುದ್ದೆಗೆ ಕಳಂಕ: ಬಿ.ಎಂ. ಫಾರೂಕ್

ಈ ಹಿಂದೆ ಕೇಂದ್ರ ಕ್ರೀಡಾ ಸಚಿವರಾಗಿದ್ದ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅವರು, “ಭಾರತವು ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಮೂರನೇ ಚಿನ್ನದ ಪದಕವನ್ನು ಗೆದ್ದಿದೆ. ಪುರುಷರ 73 ಕೆಜಿ ವೇಟ್ ಲಿಫ್ಟಿಂಗ್‌ನಲ್ಲಿ ಅಚಿಂತಾ ಶೆಯುಲಿ ಚಿನ್ನದ ಪದಕ ಗೆದ್ದಿದ್ದಾರೆ! ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next