Advertisement

ಕಾಮನ್ವೆಲ್ತ್‌ : ಭಾರತಕ್ಕೆ 6 ನೇ ಚಿನ್ನ; ಪೂನಮ್‌,ಮನು ಸಾಧನೆ 

09:41 AM Apr 08, 2018 | |

ಕಾಮನ್ವೆಲ್ತ್‌ : ಭಾರತಕ್ಕೆ 6 ನೇ ಚಿನ್ನ ; ಪೂನಮ್‌ , ಮನು ಸಾಧನೆ  ಕಾಮನ್‌ವೆಲ್ತ್‌ ಗೇಮ್ಸ್‌ನ 4 ನೇ ದಿನವೂ ಪದಗಳ ಬೇಟೆ ಮುಂದುವರಿಸಿರುವ ಭಾರತೀಯ ಕ್ರೀಡಾಳುಗಳು ಇನ್ನೆರಡು ಚಿನ್ನದ ಪದಗಳನ್ನು ಜಯಿಸಿದ್ದಾರೆ. ಇದರಿಂದಾಗಿ ಭಾರತಭಾನುವಾರ 6 ನೇ ಚಿನ್ನದ ಪದಕ ಗೆದ್ದಂತಾಗಿದೆ. 

Advertisement

ಮಹಿಳೆಯರ 10 ಮೀಟರ್‌ ಏರ್‌ ಪಿಸ್ತೂಲ್‌ನಲ್ಲಿ ಮನು ಭಾಕರ್‌ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಇದೇ ಸ್ಪರ್ಧೆಯಲ್ಲಿ ಭಾರತದ ಹೀನಾ ಸಿಧು ಬೆಳ್ಳಿ ಪದಕ ಗೆದ್ದಿದ್ದಾರೆ.

ವೇಯ್ಟ್‌ಲಿಫ್ಟಿಂಗ್‌ನಲ್ಲಿ ಪೂನಂ ಯಾದವ್‌ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಅವರು 69 ಕೆಜಿ ವಿಭಾಗದ ಭಾರ ಎತ್ತುವುದರಲ್ಲಿ ಈ ಸಾಧನೆ ಮಾಡಿದ್ದಾರೆ. 

ಭಾರತ ಪದಕ ಪಟ್ಟಿಯಲ್ಲಿ 6 ಚಿನ್ನ, 2 ಬೆಳ್ಳಿ ಮತ್ತು 1 ಕಂಚು ಜಯಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next