ಮಂಗಳೂರು/ಉಡುಪಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಸಲಾಗುವ ವಸತಿ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ ರವಿವಾರ ನಡೆದಿದ್ದು, ದ.ಕ. ಜಿಲ್ಲೆಯ ಆರು ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1,424 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು, 231 ಮಂದಿ ಗೈರಾಗಿದ್ದರು. ಉಡುಪಿ ಜಿಲ್ಲೆಯ ನಾಲ್ಕು ಪರೀಕ್ಷಾ ಕೇಂದ್ರಗಳಲ್ಲಿ 810 ಮಂದಿ ನೋಂದಣಿ ಮಾಡಿಸಿಕೊಂಡಿದ್ದು, 282 ಮಂದಿ ಗೈರು ಹಾಜರಾಗಿದ್ದಾರೆ. ಒಟ್ಟು 528 ಮಂದಿ ಹಾಜರಾಗಿದ್ದರು.
ಮಂಗಳೂರು ಬಲ್ಮಠದ ಮಹಿಳಾ ಪಿಯು ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 199 ಮಂದಿ ಹಾಜರಾಗಿದ್ದು, 30 ಮಂದಿ ಗೈರಾಗಿದ್ದರು. ಮೂಡುಬಿದಿರೆಯ ಮಹಾವೀರ ಪಿಯು ಕಾಲೇಜಿನ ಕೇಂದ್ರದಲ್ಲಿ 89 ಮಂದಿ ಹಾಜರಾಗಿ, 89 ಮಂದಿ ಗೈರಾಗಿದ್ದರು. ಕೊಂಬೆಟ್ಟುವಿನ ಮಹಿಳಾ ಪಿಯು ಕಾಲೇಜು ಕೇಂದ್ರದಲ್ಲಿ 277 ಹಾಜರಾಗಿ 13 ಮಂದಿ ಗೈರು, ಸುಳ್ಯದ ಮಹಿಳಾ ಪಿಯು ಕಾಲೇಜಿನಲ್ಲಿ 460 ಮದಿ ಹಾಜರಾಗಿ 34 ಮಂದಿ ಗೈರು, ಹಳೆಕೋಟೆ ವಾಣಿ ಸ್ವತಂತ್ರ ಪಿಯು ಕಾಲೇಜಿನಲ್ಲಿ 314 ಮಂದಿ ಹಾಜರಾಗಿದ್ದು, 34 ಮಂದಿ ಗೈರು, ಬಂಟ್ವಾಳದ ಮಹಿಳಾ ಪಿಯು ಬಿ ಮೂಡ ಕಾಲೇಜಿನಲ್ಲಿ 85 ಮಂದಿ ಹಾಜರಾಗಿ 31 ಮಂದಿ ವಿದ್ಯಾರ್ಥಿಗಳು ಗೈರಾಗಿದ್ದರು. ಉಡುಪಿಯ ಬಾಲಕಿಯರ ಸರಕಾರಿ ಪ.ಪೂ. ಕಾಲೇಜಿನಲ್ಲಿ 196 ಮಂದಿ ಹಾಜರಾಗಿದ್ದು, 150 ಮಂದಿ ಗೈರು ಹಾಜರಾಗಿದ್ದಾರೆ. ಕಾರ್ಕಳದ ಸರಕಾರಿ ಪ.ಪೂ. ಕಾಲೇಜಿನಲ್ಲಿ 87 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು, 9 ಮಂದಿ ಗೈರು ಹಾಜರಾಗಿದ್ದಾರೆ. ಕುಂದಾಪುರ ಪ.ಪೂ. ಕಾಲೇಜಿನಲ್ಲಿ 124 ಮಂದಿ ಹಾಜರಾಗಿದ್ದು, 7 ಮಂದಿ ಗೈರು ಹಾಜರಾಗಿದ್ದಾರೆ. ಬೈಂದೂರು ಸರಕಾರಿ ಪ.ಪೂ. ಕಾಲೇಜಿನಲ್ಲಿ 121 ಮಂದಿ ಹಾಜರಾಗಿದ್ದು, 7 ಮಂದಿ ಗೈರಾಗಿದ್ದಾರೆ ಎಂದು ದ.ಕ. ಹಾಗೂ ಉಡುಪಿ ಪ.ಪೂ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.