Advertisement
ಇದರಿಂದ ಕೇಂದ್ರ ಸರಕಾರದ 20ಕ್ಕೂ ಹೆಚ್ಚು ವಲಯಗಳಲ್ಲಿನ ಉದ್ಯೋಗಗಳಿಗಾಗಿ ನಡೆಸುತ್ತಿದ್ದ ಹಲವಾರು ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುವ ಜಂಜಾಟದಿಂದ ಕೋಟ್ಯಂತರ ಯುವಜನರು ಮುಕ್ತಿ ಹೊಂದಲಿದ್ದಾರೆ.
ಹೊಸದಾಗಿ ರಚನೆಯಾಗುವ ಎನ್‌ಆರ್‌ಎ ವತಿಯಿಂದ ಕೇಂದ್ರ ಸರಕಾರದ ವಿವಿಧ ಇಲಾಖೆಗಳ ‘ಬಿ’ ಮತ್ತು ‘ಸಿ’ ಗುಂಪಿನ ತಾಂತ್ರಿಕೇತರ ಹುದ್ದೆಗಳಿಗಾಗಿ ರಾಷ್ಟ್ರಮಟ್ಟದಲ್ಲಿ ಒಂದೇ ರೀತಿಯ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಲಾಗುತ್ತದೆ. ಅಲ್ಲಿ ಅಭ್ಯರ್ಥಿಗಳು ಪಡೆಯುವ ಶ್ರೇಯಾಂಕ ಅಥವಾ ಅಂಕಗಳ ಆಧಾರದಲ್ಲಿ ಸಂದರ್ಶನ ಅಥವಾ ನೇರ ನೇಮಕಾತಿಯ ಮೂಲಕ ಉದ್ಯೋಗ ನೀಡಲಾಗುತ್ತದೆ.
Related Articles
Advertisement
ಅನುದಾನ ಬಿಡುಗಡೆಏಜೆನ್ಸಿ ರಚನೆಗೆ ಕೇಂದ್ರ ಈಗಾಗಲೇ 1,517.57 ಕೋಟಿ ರೂ. ಬಿಡುಗಡೆ ಮಾಡಿದೆ. ಹಣವನ್ನು ಆಯೋಗದ ಮುಂದಿನ ಮೂರು ವರ್ಷಗಳ ನಿರ್ವಹಣೆಗೆ ಬಳಸಲು ನಿರ್ಧರಿಸಲಾಗಿದೆ. ಆರಂಭದಲ್ಲಿ 117 ಜಿಲ್ಲೆಗಳಲ್ಲಿ ಪರೀಕ್ಷೆ ನಡೆಸಲು ಎನ್‌ಆರ್‌ಎಗೆ ಬೇಕಾದ ಖರ್ಚು-ವೆಚ್ಚಗಳನ್ನು ಪ್ರತ್ಯೇಕವಾಗಿ ಸರಕಾರವೇ ನೀಡುತ್ತದೆ. ಪ್ರಮುಖ ಅನುಕೂಲಗಳು
– ಪ್ರೌಢ ಶಿಕ್ಷಣ, ಪದವಿಪೂರ್ವ ಹಾಗೂ ಪದವಿ – ಈ ಮೂರು ಹಂತಗಳಲ್ಲಿಯೂ ಎನ್‌ಆರ್‌ಎ ಪ್ರತಿ ವರ್ಷ ನೇಮಕ ಪರೀಕ್ಷೆ ನಡೆಸಲಿದೆ. – ಸಿಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ), ರೈಲ್ವೇ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಹಾಗೂ ಬ್ಯಾಂಕಿಂಗ್ ಸಿಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಸೇರಿ 20ಕ್ಕೂ ಹೆಚ್ಚು ಕೇಂದ್ರ ಸರಕಾರಿ ವಲಯಗಳಿಗಾಗಿ ನಡೆಸಲಾಗುತ್ತಿದ್ದ ನಾನಾ ಪರೀಕ್ಷೆಗಳ ಬದಲಿಗೆ ಇನ್ನು ಒಂದೇ ಪರೀಕ್ಷೆ. – ಈ ಎಲ್ಲ ಪರೀಕ್ಷೆಗಳನ್ನು ಒಂದೇ ಆಯೋಗ ನಡೆಸುವುದರಿಂದ ಅಭ್ಯರ್ಥಿಗಳಿಗೆ ಖರ್ಚು- ವೆಚ್ಚ ಉಳಿತಾಯ. ಬಡ, ಗ್ರಾಮೀಣ ಅಭ್ಯರ್ಥಿಗಳಿಗೆ ಅನುಕೂಲ. – ತಮ್ಮಿಷ್ಟದ ಪರೀಕ್ಷಾ ಕೇಂದ್ರಗಳನ್ನು ಆಯ್ದುಕೊಳ್ಳಲು ಅಭ್ಯರ್ಥಿಗಳಿಗೆ ಅವಕಾಶ. – ರಾಷ್ಟ್ರೀಯ ನೇಮಕ ಪರೀಕ್ಷೆಯ ಫಲಿತಾಂಶದಲ್ಲಿ ಅಭ್ಯರ್ಥಿ ಗಳಿಸಿದ ಅಂಕ ಅಥವಾ ರ್‍ಯಾಂಕ್ ಪರೀಕ್ಷಾ ಫಲಿತಾಂಶ ಹೊರಬಿದ್ದ ದಿನಾಂಕದಿಂದ ಮೂರು ವರ್ಷಗಳವರೆಗೆ ಮಾನ್ಯತೆ ಹೊಂದಿರುತ್ತದೆ. – ಪರೀಕ್ಷೆಯನ್ನು ಬರೆಯಲು ಅಭ್ಯರ್ಥಿಗೆ ವಯೋಮಿತಿ ಇರಲಿದೆ. ಆದರೆ ಅಭ್ಯರ್ಥಿಗಳು ಎಷ್ಟು ಬಾರಿ ಬೇಕಾದರೂ ಪರೀಕ್ಷೆ ಬರೆಯಬಹುದು. – ಎಸ್‌ಸಿ, ಎಸ್‌ಟಿ, ಒಬಿಸಿ ಅಭ್ಯರ್ಥಿಗಳ ವಯೋಮಿತಿಯಲ್ಲಿ ರಿಯಾಯಿತಿ ಇದೆ. 3 ವಿಮಾನ ನಿಲ್ದಾಣಗಳ ನಿರ್ವಹಣೆ ಖಾಸಗಿಗೆ
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ನಿರ್ವಹಣೆಯಲ್ಲಿರುವ ಜೈಪುರ, ಗುವಾಹಾಟಿ ಹಾಗೂ ತಿರುವನಂತಪುರ ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ- ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) ನಿರ್ವಹಣೆಗೆ ಒಪ್ಪಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. 2018ರಲ್ಲಿ ಲಕ್ನೋ, ಅಹ್ಮದಾಬಾದ್, ಜೈಪುರ, ಮಂಗಳೂರು, ತಿರುವನಂತಪುರ ಹಾಗೂ ಗುವಾಹಾಟಿ ವಿಮಾನ ನಿಲ್ದಾಣಗಳನ್ನು ಖಾಸಗಿಗೆ ಒಪ್ಪಿಸಲು ಕೇಂದ್ರ ಸರಕಾರ ನಿರ್ಧರಿಸಿತ್ತು. ಇವುಗಳಲ್ಲಿ ಆರು ನಿಲ್ದಾಣಗಳ ನಿರ್ವಹಣೆಗಾಗಿ 2019ರ ಫೆಬ್ರವರಿಯಲ್ಲಿ ಕರೆಯಲಾಗಿದ್ದ ಬಿಡ್ ಅನ್ನು ಅದಾನಿ ಎಂಟರ್‌ಪ್ರೈಸಸ್ ಸಂಸ್ಥೆ ಗೆದ್ದಿತ್ತು. ಕಬ್ಬಿಗೆ ಬೆಂಬಲ ಬೆಲೆ
2020-21ನೇ ವರ್ಷಕ್ಕೆ ಅನ್ವಯಿಸುವಂತೆ, ಕಬ್ಬಿಗೆ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ಘೋಷಿಸಿದೆ. ಕಬ್ಬಿನ ಪ್ರತಿ ಕ್ವಿಂಟಾಲ್ ಮೇಲಿನ ಮೂಲ ಬೆಲೆಗೆ ಹೆಚ್ಚಳವಾಗಿ 285 ರೂ. ನೀಡುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ಉತ್ತಮ ಮೌಲ್ಯ ಸಿಗಲಿದೆ. ರಾಷ್ಟ್ರೀಯ ನೇಮಕ ಏಜೆನ್ಸಿಯು ದೇಶದ ಕೋಟ್ಯಂತರ ಯುವಜನರಿಗೆ ನೆರವಾಗಲಿದೆ. ವರ್ಷದಲ್ಲಿ ಹತ್ತಾರು ಪರೀಕ್ಷೆಗಳನ್ನು ಬರೆಯುವ ಬದಲು ಇನ್ನು ಒಂದೇ ಪರೀಕ್ಷೆಯ ಮೂಲಕ ಅವರು ಕೇಂದ್ರದ ನೌಕರಿಗಳನ್ನು ಹೊಂದಬಹುದಾಗಿದೆ. ಹೊಸ ವ್ಯವಸ್ಥೆ ಪಾರದರ್ಶಕತೆಗೆ ಹೆಚ್ಚು ಒತ್ತು ನೀಡಲಿದೆ.
– ನರೇಂದ್ರ ಮೋದಿ, ಪ್ರಧಾನಿ