Advertisement

ದರ್ಶನ್‌ ಬರ್ತ್‌ಡೇಗೂ 50ದಿನ ಮೊದಲೇ ಕಾಮನ್ ಡಿಪಿ

11:04 AM Dec 29, 2021 | Team Udayavani |

ಸಾಮಾನ್ಯವಾಗಿ ಇತ್ತೀಚಿನ ವರ್ಷಗಳಲ್ಲಿ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್‌ಗಳ ಬರ್ತ್‌ಡೇ ಸಂದರ್ಭದಲ್ಲಿ ವಿಶೇಷವಾದ ಕಾಮನ್(ಸಿ) ಡಿಪಿಯನ್ನು ವಿನ್ಯಾಸಗೊಳಿಸಿ, ಅದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡು ತಮ್ಮ ಅಭಿಮಾನವನ್ನು ಪ್ರದರ್ಶಿಸುತ್ತಾರೆ.

Advertisement

ಇದನ್ನೂ ಓದಿ:ನೈಟ್‌ ಕರ್ಫ್ಯೂ ಎಫೆಕ್ಟ್ ಶೋಗಳ ಸಂಖ್ಯೆ ಇಳಿಕೆ; 1,200ಕ್ಕೂ ಹೆಚ್ಚು ಪ್ರದರ್ಶನ ಸ್ಥಗಿತ

ಬರ್ತ್‌ಡೇಗೂ ಎಂಟು-ಹತ್ತು ದಿನಗಳ ಮುಂಚೆ ಸೋಶಿಯಲ್‌ ಮೀಡಿಯಾದಲ್ಲಿ ಇಂಥದ್ದೊಂದು ಅಭಿಮಾನದ ಅಭಿಯಾನ ಶುರುವಾಗುತ್ತದೆ. ಆದರೆ, ಈಗ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿಮಾನಿಗಳು ಅವರ ಬರ್ತ್‌ಡೇ ಗೆ ಇನ್ನೂ ಐವತ್ತು ದಿನಗಳು ಬಾಕಿಯಿರುವಾಗಲೇ ಸೋಶಿಯಲ್‌ ಮೀಡಿಯಾದಲ್ಲಿ ಸಿಡಿಪಿ ರಿಲೀಸ್‌ ಮಾಡುವ ಮೂಲಕ, ತಮ್ಮ ನೆಚ್ಚಿನ ನಟನ ಬರ್ತ್‌ಡೇ ಸೆಲೆಬ್ರೆಶನ್‌ಗೆ ಚಾಲನೆ ಕೊಟ್ಟಿದ್ದಾರೆ.

ಹೌದು, ಮುಂಬರುವ ಫೆಬ್ರವರಿ 16ಕ್ಕೆ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹುಟ್ಟುಹಬ್ಬ. ಹುಟ್ಟುಹಬ್ಬಕ್ಕೆ ಐವತ್ತು ದಿನ ಮುಂದೆಯೇ ದರ್ಶನ್‌ ಫ್ಯಾನ್ಸ್‌ ಸೋಶಿಯಲ್‌ ಮೀಡಿಯಾದಲ್ಲಿ ಕಾಮನ್‌ ಡಿಪಿಯನ್ನು ಬಿಡುಗಡೆ ಮಾಡಿದ್ದು, “ಬಾಸ್‌ ಪವರ್‌… ಸುಲ್ತಾನ್‌ ಸಂಭ್ರಮ’ ಅಂತ ಅಭಿಯಾನ ಶುರುಮಾಡಿದ್ದಾರೆ. ಸದ್ಯ ಇದೇ ಸಿಡಿಪಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿದ್ದು, ದರ್ಶನ್‌ ಅಭಿಮಾನಿಗಳು ಈ ಸಿಡಿಪಿಯನ್ನು ಹಂಚಿಕೊಳ್ಳುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next