Advertisement
ಈ ಸಮಿತಿಗೆ ಮಹಾ ನಿರ್ದೇಶಕರೊಬ್ಬರ (ಡಿಜಿ) ಅಧ್ಯಕ್ಷತೆ ಇರಲಿದ್ದು, ಅವರ ಅಧೀನದಲ್ಲಿ ಜಂಟಿ ಕಾರ್ಯದರ್ಶಿ ಅಥವಾ ಸೇನೆಯ ಮೇಜರ್ ಜನರಲ್ ಹುದ್ದೆಗಳಿಗೆ ಸರಿಸಮಾನವೆನಿಸುವ 11 ಅಧಿಕಾರಿಗಳು ಸದಸ್ಯರಾಗಿ ಇರಲಿದ್ದಾರೆ.ಅದಲ್ಲದೆ, ಡಿಪಿಪಿಗಳ ಪರಾಮರ್ಶೆ ಮಾತ್ರ ವಲ್ಲದೆ, ಸೇನೆಯ ಪುನಶ್ಚೇತನಕ್ಕೆ ಹೊಸ ಪರಿ ಕಲ್ಪನೆಗಳ ಪರಾಮರ್ಶೆ ಮತ್ತು ಅನುಷ್ಠಾನ, ಸಾಮಾನು- ಸರಂಜಾಮು ಸಾಗಣೆಯ ಮೇಲು ಸ್ತುವಾರಿ, ಸೇನೆಯೊಳಗಿನ ಸುವ್ಯವಸ್ಥೆ ಹಾಗೂ ಸುರಕ್ಷತೆಯ ವಾತಾವರಣ, ಸೇನೆಯ ಸ್ಥಿರಾಸ್ತಿ ವ್ಯವಹಾರಗಳ ಮೇಲುಸ್ತುವಾರಿ, ಸೇನೆಯ ಗುಣಮಟ್ಟ ಹೆಚ್ಚಳ, ಹೊಸ ಸಾರ್ಟಪ್‌ಗ್ ಳನ್ನು ಸೇನೆಯ ಅವಶ್ಯಕ ಪರಿಕರ, ತಂತ್ರಜ್ಞಾನಗಳ ಅಭಿವೃದ್ಧಿಗೆ ಪ್ರೇರೇಪಿಸುವ ಜವಾಬ್ದಾರಿಯನ್ನು ಹೊಂದಿದೆ.
ಭಾರತೀಯ ಸೇನೆಗೆ ಶಸ್ತ್ರಾಸ್ತ್ರವನ್ನು ತಯಾರಿಸಿ ಪೂರೈಸುವ, ಆರ್ಡಿನನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್ಬಿ) ಅನ್ನು ಖಾಸಗೀಕರಣಗೊಳಿಸುವ ಯಾವುದೇ ಪ್ರಸ್ತಾವನೆ ಕೇಂದ್ರದ ಮುಂದಿಲ್ಲ ಎಂದು ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ. ಖಾಸಗೀಕರಣವು ಕೇವಲ ವದಂತಿಯಷ್ಟೇ ಎಂದಿರುವ ಇಲಾಖೆ, ಒಎಫ್ಬಿಯ ಕಾರ್ಯಕ್ಷಮತೆ ಹೆಚ್ಚಿಸಲು ರಕ್ಷಣಾ ಇಲಾಖೆಯ ಅಧಿಕಾರಿಗಳು, ಒಎಫ್ಬಿ ಕಾರ್ಮಿಕ ಸಂಘಟನೆಗಳ ಮುಖಂಡರ ನಡುವೆ ನಿರಂತರ ಮಾತುಕತೆ ಸಾಗಿದೆ.
Related Articles
Advertisement