Advertisement

ಕ್ಷೇತ್ರದ ಸರ್ವಾಂಗೀಣ ಅಭಿವೃದಿಗೆ ಬದ್ದ

10:37 AM Jun 21, 2022 | Team Udayavani |

ಶಹಾಬಾದ: ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಸದಾ ಕಾಲ ಬದ್ಧನಾಗಿರುತ್ತೆನೆ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಹೇಳಿದರು.

Advertisement

ಲೋಕೋಪಯೋಗಿ ಇಲಾಖೆ ವತಿಯಿಂದ ಆಯೋಜಿಸಲಾದ 2019-20ನೇ ಸಾಲಿನ ನಬಾರ್ಡ ಆರ್‌ ಐಡಿಎಫ್‌-25 ಯೋಜನೆಯಡಿ ನಗರದ ಸರಕಾರಿ ಬಾಲಕ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡ ಶಾಲಾ ಕೋಣೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಗರದ ಮಧ್ಯ ಭಾಗದ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಹಳೆಯ ಕಟ್ಟಡಗಳು ಬೀಳುವ ಹಂತದಲ್ಲಿದ್ದವು. ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿತ್ತು. ಅದನ್ನು ಅರಿತು ಸುಮಾರು 1.70 ಕೋಟಿ ರೂ. ಅನುದಾನದಲ್ಲಿ ಸುಮಾರು ಹತ್ತು ಕೋಣೆಗಳನ್ನು ನಿರ್ಮಾಣ ಮಾಡಿಕೊಡಲಾಗಿದೆ ಎಂದರು.

ನಗರಸಭೆ ಅಧ್ಯಕ್ಷೆ ಅಂಜಲಿ ಗಿರೀಶ ಕಂಬಾನೂರ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ನರೇಂದ್ರ ವರ್ಮಾ, ಲೋಕೋಪಯೋಗಿ ಇಲಾಖೆ ಎಇ ಜಗನ್ನಾಥ, ಶಿಕ್ಷಣ ಸಂಯೋಜಕ ಶ್ರೀಧರ್‌, ಮುಖ್ಯಗುರು ಏಮನಾಥ ರಾಠೊಡ, ನಗರಸಭೆ ಸದಸ್ಯರಾದ ಡಾ| ಅಹ್ಮದ್‌ ಪಟೇಲ್‌, ಸಾಬೇರಾ ಬೇಗಂ, ಪಾರ್ವತಿ ಪವಾರ, ಜಗದೇವ ಸುಬೇದಾರ, ಸದಸ್ಯ ರವಿ ರಾಠೊಡ, ನಿಂಗಣ್ಣ ಹುಳಗೋಳಕರ್‌, ಸಿದ್ರಾಮ ಕುಸಾಳೆ, ಸದಾನಂದ ಕುಂಬಾರ, ಭೀಮಯ್ಯ ಗುತ್ತೆದಾರ, ರಾಜೇಶ ಯನಗುಂಟಿಕರ್‌, ಶರಣು ಪಗಲಾಪೂರ, ರಾಮು ಕುಸಾಳೆ, ಶಿವುಗೌಡ ಪಾಟೀಲ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next