Advertisement

ರಾಜಕೀಯ ಜೀವನಕ್ಕೆ ಬುನಾದಿ ಹಾಕಿದ ಶಿರ್ವದ ಅಭಿವೃದ್ಧಿಗೆ ಕಟಿಬದ್ಧ: ಐವನ್‌ ಡಿ ಸೋಜಾ,

08:50 PM Jun 22, 2024 | Team Udayavani |

ಶಿರ್ವ:ಗ್ರಾಮೀಣ ಪರಿಸರದಲ್ಲಿ ಅಭಿವೃದ್ಧಿಯ ಕೆಲಸಕಾರ್ಯಗಳು ನಡೆಯಬೇಕಿದ್ದು, ಜನಸಂಖ್ಯೆಗೆ ಅನುಗುಣವಾಗಿ ಎಲ್ಲಾ ಮೂಲಭೂತ ಸೌಕರ್ಯಗಳಿರುವ ಶಿರ್ವ ಗ್ರಾಮ ಪಂಚಾಯತನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸುವ ಅವಶ್ಯಕತೆಯಿದೆ.

Advertisement

ಮುದರಂಗಡಿಯಲ್ಲಿ ಹುಟ್ಟಿ ಬೆಳೆದರೂ,ತನ್ನ ರಾಜಕೀಯ ಜೀವನಕ್ಕೆ ಬುನಾದಿ ಹಾಕಿದ ಶಿರ್ವ ಗ್ರಾಮದ ಅಭಿವೃದ್ಧಿಗೆ ಕಟಿಬದ್ಧನಾಗಿರುವೆ ಎಂದು ಕರ್ನಾಟಕ ವಿಧಾನಪರಿಷತ್‌ ಸದಸ್ಯ ಐವನ್‌ ಡಿಸೋಜಾ ಹೇಳಿದರು.

ಅವರು ಶನಿವಾರ ಸಂಜೆ ಶಿರ್ವ ಸಾರ್ವಜನಿಕ ಗಣೇಶೋತ್ಸವ ವೇದಿಕೆಯ ಬಳಿಯಿರುವ ಮಹಿಳಾ ಸೌಧದಲ್ಲಿ ಶಿರ್ವದ ಐವನ್‌ ಡಿಸೋಜಾ ಅಭಿಮಾನಿ ಬಳಗ ಆಯೋಜಿಸಿದ ಸಮ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.

ಕಾಪು ಶಾಸಕ ಸುರೇಶ್‌ ಶೆಟ್ಟಿ ಗುರ್ಮೆ ಮಾತನಾಡಿ ಛಲದ ಬಲದಿಂದ ಸಾಧನೆ ಸಾಕ್ಷಾತ್ಕಾರವಾಗಬೇಕು.ಪಕ್ಷ ಸಿದ್ಧಾಂತ ಯಾವುದೇ ಇರಲಿ,ಅಭಿವೃದ್ಧಿಯ ವಿಚಾರದಲ್ಲಿ ರಾಜಕೀಯ ಅಡ್ಡಿಯಾಗಬಾರದು.

ಎಳವೆಯಲ್ಲಿಯೇ ಹೋರಾಟದ ಬದುಕು ಕಟ್ಟಿಕೊಂಡು ಸಮಾಜಕ್ಕೆ ಅರ್ಪಿಸಿಕೊಂಡ ಐವನ್‌ ಡಿಸೋಜಾ ಅವರೊಂದಿಗೆ ಶಿರ್ವದ ಅಭಿವೃದ್ಧಿಯಲ್ಲಿ ಕೈಜೋಡಿಸುವೆ ಎಂದು ಹೇಳಿದರು.

Advertisement

ಮಾಜಿ ಸಚಿವ ವಿನಯ ಕುಮಾರ್‌ ಸೊರಕೆ ಮಾತನಾಡಿ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗುವುದು ಸುಲಭವಲ್ಲ. ತಾನು ನಂಬಿರುವ ವಿಚಾರಧಾರೆಯಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಿದಾಗ ಉನ್ನತ ಅವಕಾಶಗಳು ಒದಗಿ ಬರುತ್ತದೆ ಎಂದು ಹೇಳಿದರು.

ಶಿರ್ವ ಚರ್ಚ್‌ ದ್ವಾರದ ಬಳಿ ಸಾರ್ವಜನಿಕವಾಗಿ ಸ್ವಾಗತಿಸಿ ಬಳಿಕ ಭವ್ಯ ಮೆರವಣಿಗೆಯಲ್ಲಿ ಬರಮಾಡಿಕೊಂಡು ಮಹಿಳಾ ಸೌಧಕ್ಕೆ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಐವನ್‌ ಡಿಸೋಜಾ ಅವರನ್ನು ಸಮ್ಮಾನಿಸಿ ಗೌರವಿಸ ಲಾಯಿತು. ನಿವೃತ್ತ ಶಿಕ್ಷಕ ಗಿಲ್ಬರ್ಟ್‌ ಪಿಂಟೋ ಸಮ್ಮಾನಪತ್ರ ವಾಚಿಸಿದರು.

ಶಿರ್ವ ಆರೋಗ್ಯ ಮಾತಾ ಚರ್ಚ್‌ನ ಪ್ರಧಾನ ಧರ್ಮ ಗುರು ವಂ|ಡಾ| ಲೆಸ್ಲಿ ಡಿಸೋಜಾ, ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬರಾದ ಜ|ಸಿರಾಜುದ್ದೀನ್‌ ಝೈನಿ ಶುಭ ಹಾರೈಸಿದರು. ಶಿರ್ವ ಗ್ರಾ.ಪಂ. ಅಧ್ಯಕ್ಷೆ ಸವಿತಾ ರಾಜೇಶ್‌ ಪೂಜಾರಿ ವೇದಿಕೆಯಲ್ಲಿದ್ದರು. ಉಪಾಧ್ಯಕ್ಷ ವಿಲ್ಸನ್‌ ರೊಡ್ರಿಗಸ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬೆಳ್ಳೆ ಶಿವಾಜಿ ಎಸ್‌. ಸುವರ್ಣ, ಮಾಜಿ ತಾ.ಪಂ. ಸದಸ್ಯ ಮೈಕಲ್‌ ರಮೇಶ್‌ ಡಿಸೋಜಾ, ಅಲೆವೂರು ಹರೀಶ್‌ ಕಿಣಿ,ಪ್ರಶಾಂತ್‌ ಜತ್ತನ್ನ,ಜಿತೇಂದ್ರ ಫುರ್ಟಾಡೋ,ಜೋಸೆಫ್‌ ಡಿಸೋಜಾ ಮತ್ತಿತರ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಐವನ್‌ ಡಿಸೋಜಾ ಅಭಿಮಾನಿ ಬಳಗದ ಅಧ್ಯಕ್ಷ ಮೆಲ್ವಿನ್‌ ಅರಾನ್ಹಾ ಸ್ವಾಗತಿಸಿದರು. ಸ್ಟೀವನ್‌ ಕುಲಾಸೋ ಕಾರ್ಯಕ್ರಮ ನಿರೂಪಿಸಿ,ಕೆ.ಆರ್‌.ಪಾಟ್ಕರ್‌ ವಂದಿಸಿದರು.

ಗ್ರಾ.ಪಂ.ಗೆ 10 ಲ. ರೂ. ಅನುದಾನ
ಗ್ರಾ.ಪಂ. ಮೇಲ್ದರ್ಜೆಗೇರಿದರೆ ಹೆಚ್ಚಿನ ಅನುದಾನ ಸಿಗಲಿದ್ದು ಅಭಿವೃದ್ಧಿಗೆ ಪೂರಕವಾಗಲಿದೆ. ಶಿರ್ವ ಗ್ರಾ.ಪಂ.ನ ಹಳೆ ಕಟ್ಟಡದ ದುರಸ್ತಿ ಕಾಮಗಾರಿ ಪೂರ್ತಿಗೊಳಿಸಲು ರಾಜ್ಯ ಸರಕಾರದ ನಿಧಿಯಿಂದ 10 ಲ. ರೂ.ಗಳ ಆನುದಾನ ನೀಡಲು ಶ್ರಮಿಸುವೆ.
-ಐವನ್‌ ಡಿಸೋಜಾ, ವಿಧಾನ ಪರಿಷತ್‌ ಸದಸ್ಯರು.

Advertisement

Udayavani is now on Telegram. Click here to join our channel and stay updated with the latest news.

Next