Advertisement
ಅವರು ಪಟ್ಟಣದ ವಾರ್ಡ್ ನಂ. 4,5,6 ಮತ್ತು 10 ರ ಕೊಳೆಗೇರಿ ಪ್ರದೇಶದಲ್ಲಿ ಮಂಡಳಿ ವತಿಯಿಂದ 1.13 ಕೋಟಿ ವೆಚ್ಚದಲ್ಲಿ ಸಿ.ಸಿ. ರಸ್ತೆ ಹಾಗೂ 1 ಸಾವಿರ ಮೀ. ಚರಂಡಿ ಕಾಮಗಾರಿಗೆ ಅಡಿಗಲ್ಲು ಪೂಜೆ ನೆರವೇರಿಸಿ ಮಾತನಾಡಿ, ಕೊಳೆಗೇರಿ ಪ್ರದೇಶದಲ್ಲಿ ಸುಮಾರು 11 ರಿಂದ 12 ಕೋಟಿಗಳ ಕಾಮಗಾರಿ ಮಾಡಿದ್ದು ವೈಯಕ್ತಿಕವಾಗಿ ತೃಪ್ತಿ ಇದೆ. ಅಥಣಿ ಮತಕ್ಷೇತ್ರದ ಅಭಿವೃದ್ಧಿಗಾಗಿ ನಿರಂತರ ಪ್ರಯತ್ನ ಮತ್ತು ಓಡಾಟ ನಡೆದಿದೆ ಎಂದು ಹೇಳಿದರು. ಕೊಳೆಗೇರಿ ಪ್ರದೇಶದಲ್ಲಿ ಸ್ವತ್ಛತೆಗೆ ಪುರಸಭೆಗೆ ತಿಳಿಸಲಾಗಿದೆ.
ನಿವಾಸಿಗಳಿಗೆ ಅನುಕೂಲ ವಾಗಲಿದೆ ಎಂದರು. ಬಿಜೆಪಿ ಮುಖಂಡ ಅನಿಲ ಸೌದಾಗರ ಮಾತನಾಡಿ, ಕೊಳೆಗೇರಿ ಅಭಿವೃದ್ಧಿಗೆ ಶಾಸಕರು ಸಾಕಷ್ಟು ಅನುದಾನ ತಂದಿದ್ದಾರೆ ಎಂದರು. ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಲ್.ಲಮಾಣಿ, ಬಿ.ಎಸ್.ಶಂಭುಲಿಂಗಪ್ಪಾ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಕುಮಾರ ಕೆ, ದಲಿತ ಮುಖಂಡ ಶಶಿಕಾಂತ ಸಾಳವಿ, ಪ್ರಕಾಶ ಚನ್ನನವರ, ಮಾಂತೇಶ ಇತರರಿದ್ದರು.