ಚಿತ್ರದುರ್ಗ: ಕರ್ನಾಟಕವನ್ನು ಗುರಿಯಾಗಿಟ್ಟುಕೊಂಡು ಉಗ್ರರ ದಾಳಿ ನಡೆಯುತ್ತಿದ್ದು, ಇದನ್ನು ಸಂಪೂರ್ಣ ಮಟ್ಟ ಹಾಕಲಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಹಿರಿಯೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕದ ಪೊಲೀಸರು 18 ಸ್ಲೀಪರ್ ಸೆಲ್‌ಗಳನ್ನು ಪತ್ತೆ ಹಚ್ಚಿ ಹಲವರನ್ನು ತಿಹಾರ್ ಜೈಲಿಗೆ ಕಳುಹಿಸಿದ್ದಾರೆ.
ಕೆಲವರು ಹೊರ ರಾಜ್ಯಗಳ ಸಂಪರ್ಕ ಬೆಳೆಸಿ ಇಲ್ಲಿ ಕಾರ್ಯಾಚರಣೆ ಮಾಡುತ್ತಿದ್ದರು. ಈಗಾಗಲೇ ಹೊರ ರಾಜ್ಯದಿಂದ ಬರುವವರನ್ನು ಹಿಡಿಯಲಾಗಿದೆ.
ದೇಶದ ಸುರಕ್ಷತೆ ದೃಷ್ಟಿಯಿಂದ ಉಗ್ರ ಚಟುವಟಿಕೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. 24 ಗಂಟೆಗಳೊಳಗೆ ಸಿಕ್ಕಿ ಬಿದ್ದವನ ಹಿಂದಿರುವ ಸಂಸ್ಥೆಯ ಹೆಸರು ಭೇದಿಸಲು ಎನ್‌ಎಐ ಕ್ರಮ ತೆಗೆದುಕೊಂಡಿದೆ ಎಂದರು.
Related Articles