Advertisement

ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧ: ದೇವಾನಂದ

04:55 PM Jan 15, 2022 | Shwetha M |

ಚಡಚಣ: ಮತದಾರರ ಆಶಯದಂತೆ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸದಾ ಶ್ರಮಿಸುತ್ತೇನೆ ಎಂದು ಶಾಸಕ ದೇವಾನಂದ ಚವ್ಹಾಣ ಹೇಳಿದರು.

Advertisement

ತಾಲೂಕಿನ ಮರಗೂರ ಗ್ರಾಮದಲ್ಲಿ ಜಲ ಜೀವನ ಮಿಷನ್‌ ಯೋಜನೆಯಡಿ ಕಾರ್ಯಾತ್ಮಕ ಮನೆ ನಳ ಸಂಪರ್ಕ ಯೋಜನೆಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮುಖಂಡ ಪ್ರಭಾಕರ ಗುಮತೆ ಮಾತನಾಡಿ, ಶಾಸಕ ದೇವಾನಂದ ಚವ್ಹಾಣ ಅವರು ಮತಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುತ್ತಿದ್ದಾರೆ. ರಾಮನ ತಾಂಡಾದಲ್ಲಿ ಶಾಲೆಯ ಕಟ್ಟಡ 10 ಲಕ್ಷ ರೂ. ವೆಚ್ಚದಲ್ಲಿ ಹಾಗೂ ಜಲ ಜೀವನ ಮಿಷನ್‌ ಯೋಜನೆಯಡಿ ಕಾರ್ಯಾತ್ಮಕ ಮನೆಮನೆಗೆ ನಳ ಸಂಪರ್ಕ ಯೋಜನೆಯ ಅಡಿಯಲ್ಲಿ ಮರಗೂರ, ಹೊಳೆಸಂಖ, ಏಳಗಿ, ಶಿರಗೂರ ಖಾಲ್ಜಾ ಗ್ರಾಮಗಳಲ್ಲಿ 1 ಕೋಟಿ 55 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿಗಳು ಪ್ರಾರಂಭಿಸಿದ್ದಾರೆ ಎಂದರು.

ಸಿದ್ದು ಪೂಜಾರಿ, ಪ್ರಬಾಕರ ಗುಮತೆ, ಶಿವಶರಣ ಜಿತ್ತಿ, ಬಾಬು ಚವ್ಹಾಣ, ಸಂದೀಪ ಬೆಳ್ಳಿ, ಗಿರೀಶ ಬಾಲಗಾಂವ, ಸಾಹೇಬಗೌಡ ಬಿರಾದಾರ, ಲಕ್ಷ್ಮೀಕಾಂತ ಏಳಗಿ, ಅಮಶಿದ್ದ ಬಳಗಾನೂರ, ಶಾಂತಗೌಡ ಬಿರಾದಾರ, ಫಾರುಕ್‌ ಕಾರ್ಯಕರ್ತರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next