Advertisement

ಉತ್ತರ ಕನ್ನಡದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಬದ್ಧ :ವಿಧಾನಸಭೆಯಲ್ಲಿ ಡಾ.ಸುಧಾಕರ್

03:24 PM Sep 22, 2022 | Team Udayavani |

ವಿಧಾನಸಭೆ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ತಾತ್ವಿಕ ಒಪ್ಪಿಗೆ ನೀಡಿದ್ದು, ಎಲ್ಲಿ ಆಗಬೇಕು ಎಂಬುದನ್ನು ಜಮೀನು ಲಭ್ಯತೆ ಆಧಾರದ ಮೇಲೆ ಸ್ಥಳ ನಿರ್ಧಾರ ಮಾಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿಧಾನಸಭೆಗೆ ಭರವಸೆ ನೀಡಿದ್ದಾರೆ.

Advertisement

ಪ್ರಶ್ನೋತ್ತರ ಕಲಾಪ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಆರ್.ವಿ.ದೇಶಪಾಂಡೆ, ಶಿವರಾಂ ಹೆಬ್ಬಾರ್, ದಿನಕರ ಶೆಟ್ಟಿ, ರೂಪಾಲಿ ನಾಯ್ಕ್ , ಸುನೀಲ್ ನಾಯ್ಕ್ ಸೇರಿದಂತೆ ಎಲ್ಲ ಸದಸ್ಯರು ಪಕ್ಷಾತೀತವಾಗಿ ಈ ವಿಚಾರ ಪ್ರಸ್ತಾಪ ಮಾಡಿದಾಗ ಸಚಿವರು ಈ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಆತ್ಮಾವಲೋಕನ‌ ಮಾಡಿಕೊಳ್ಳಿ: ಉಭಯ ಸದನದಲ್ಲಿ ಅನುರಣಿಸಿದ ‘ಪೇಸಿಎಂ’ ವಿವಾದ

ಇದೇ ಮೊದಲ ಬಾರಿಗೆ ಉತ್ತರ ಕ‌ನ್ನಡ ಜಿಲ್ಲೆಯ ಶಾಸಕರೆಲ್ಲರೂ ಈ ಚರ್ಚೆಯಲ್ಲಿ ಭಾಗವಹಿಸಿದ್ದು, ಜಿಲ್ಲೆಯ ಪರ ಗಟ್ಡಿ ಧ್ವನಿ ಮೊಳಗಿಸಿದ್ದಾರೆ.ಉತ್ತರ ಕನ್ನಡ ಜಿಲ್ಲೆಗೆ ಉತ್ಕೃಷ್ಟ ದರ್ಜೆಯ ಆರೋಗ್ಯ ಸೇವೆ ಸಿಗಬೇಕು ಎಂಬುದರಲ್ಲಿ ಎರಡನೇ ಮಾತೇ ಇಲ್ಲ.  ಮುಖ್ಯಮಂತ್ರಿಗಳು ಈಗಾಗಲೇ ನಮವೆ ಭರವಸೆ ನೀಡಿದ್ದಾರೆ. ತಾತ್ವಿಕ ಒಪ್ಪಿಗೆಯನ್ನು ನೀಡಿದ್ದಾರೆ. ವಿಧಾನಸಭೆ ಕಲಾಪ ಮುಗಿದ ತಕ್ಷಣ ಮತ್ತೊಮ್ಮೆ ಸಭೆ ನಡೆಸಿ ಆದಷ್ಟು ಬೇಗ ಆಸ್ಪತ್ರೆ ವಿಚಾರ ಇತ್ಯರ್ಥಗೊಳಿಸುತ್ತೇವೆ ಎಂದರು.

ಆಕ್ಷೇಪ
ಈ ವಿಚಾರದಲ್ಲಿ ಇಷ್ಟೊಂದು ದೀರ್ಘ ಚರ್ಚೆಗೆ ಅವಕಾಶ ನೀಡಿರುವ ಬಗ್ಗೆ ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದರು. ಒಂದೇ ಪ್ರಶ್ನೆಗೆ ಬಗ್ಗೆ ಎಷ್ಟು ವರ್ಷ ಅವಕಾಶ ನೀಡುತ್ತೀರಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ನಾನು ಚರ್ಚೆಗೆ ಅವಕಾಶ ಕೊಡದೇ ಇದ್ದರೆ ಅದನ್ನೇ ವಿವಾದ ಮಾಡುವುದಕ್ಕೆ ನನ್ನ ಸ್ನೇಹಿತರು ಕಾಯ್ದುಕೊಂಡು ಕುಳಿತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇದು ನಮ್ಮ ಕ್ಷೇತ್ರದ ಜನತೆಯ ಆದ್ಯತೆಯೂ ಆಗಿದೆ ಎಂದರು.

Advertisement

ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ದಿನಕರ ಶೆಟ್ಟಿ ಹಾಗೂ ಸುನೀಲ್ ನಾಯ್ಕ್ ಜಿಲ್ಲೆಗೆ ತಕ್ಷಣ ಆಸ್ಪತ್ರೆಗೆ ತಕ್ಷಣ 300 ಕೋಟಿ ರೂ. ಅನುದಾನ ಘೋಷಣೆ ಮಾಡಲೇಬೇಕು ಎಂದು ಬಾವಿಗೆ ನುಗ್ಗಿ ಧರಣಿ ಪ್ರಾರಂಭಿಸಲು ಮುಂದಾದರು.‌ಕೊನೆಗೆ ಸ್ಪೀಕರ್ ಸೂಚನೆ ಮೇರೆಗೆ ಪ್ರತಿಭಟನೆ ವಾಪಾಸ್ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next