Advertisement

ವಾಣಿಜ್ಯ ಬಳಕೆ ಸಿಲಿಂಡರ್‌ ದರ 43 ರೂ. ಹೆಚ್ಚಳ

10:08 PM Oct 01, 2021 | Team Udayavani |

ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರ ದುಬಾರಿಯಾಗಿದೆ.

Advertisement

ಅ.1ರಿಂದ ಅನ್ವಯವಾಗುವಂತೆ ಪೆಟ್ರೋಲಿಯಂ ಕಂಪನಿಗಳು 19 ಕೆಜಿ ಕಮರ್ಷಿಯಲ್‌ ಸಿಲಿಂಡರ್‌ ದರವನ್ನು 43.50 ರೂ. ಹೆಚ್ಚಳ ಮಾಡಿವೆ.

ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದರ ಪರಿಷ್ಕರಣೆಯಿಂದಾಗಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ ದರ 1,736.50 ರೂ. ಆಗಿದೆ.

ಈ ಹಿಂದೆ ಈ ದರ 1,693 ರೂ. ಆಗಿತ್ತು. ಸೆ.1ರಂದು ಕಮರ್ಷಿಯಲ್‌ ಸಿಲಿಂಡರ್‌ ದರವನ್ನು 75 ರೂ. ಹೆಚ್ಚಳ ಮಾಡಲಾಗಿತ್ತು.

ಇದನ್ನೂ ಓದಿ:ಸಚಿವರ ಕಾರ್ಯಕ್ರಮಕ್ಕಾಗಿ ರಸ್ತೆ ಬಂದ್ : ನಾಗರಿಕರ ಆಕ್ರೋಶ

Advertisement
Advertisement

Udayavani is now on Telegram. Click here to join our channel and stay updated with the latest news.

Next