Advertisement
ಈ ಸಂಬಂಧ ಬಿಬಿಎಂಪಿ ಪುನಾರಚನೆ ಸಮಿತಿ ಸದಸ್ಯರು, ನಗರದ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಸದ್ಯ ಇರುವ ವಲಯ ಅಸಮಾನತೆ ನಿವಾರಿಸಿ ಹೊಸ ವಲಯ ಸೃಷ್ಟಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
Related Articles
Advertisement
ಅಸಮಾನತೆ ನಿವಾರಣೆಗೆ ಕ್ರಮ: ಪ್ರಸ್ತುತ ಇರುವ ವಲಯಗಳಲ್ಲಿನ ಅಸಮಾನತೆ ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ವಲಯಗಳ ಪೈಕಿ ಕನಿಷ್ಠ 4.45 ಲಕ್ಷ ಹಾಗೂ ಗರಿಷ್ಠ 19.6 ಲಕ್ಷ ಜನಸಂಖ್ಯೆ ಇದೆ. ಅದರೊಂದಿಗೆ ಆದಾಯದಲ್ಲೂ ವ್ಯತ್ಯಾಸವಿದೆ. ಈ ಕಾರಣದಿಂದಾಗಿ ವಲಯಗಳನ್ನು ಪುನರ್ ವಿಂಗಡಣೆ ಮಾಡುವ ಕುರಿತು 2015ರ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ಪುನಾರಚನಾ ಸಮಿತಿ ಪ್ರಸ್ತಾವನೆ ಸಲ್ಲಿಸಿತ್ತು. 10 ವಲಯಗಳಿಗೆ 198 ವಾರ್ಡ್‌ಗಳನ್ನು ಸಮಾನವಾಗಿ ಹಂಚುವ ಕುರಿತಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದರು.
ಪ್ರತಿ ವಲಯಕ್ಕೆ 30 ವಾರ್ಡ್?: ಪ್ರತಿ ವಲಯಕ್ಕೆ ಕನಿಷ್ಠ 30 ವಾರ್ಡ್‌ಗಳಿರುವಂತೆ ನೋಡಿಕೊಳ್ಳಲು ತೀರ್ಮಾನಿಸಿದ್ದು, ಅದರೊಂದಿಗೆ ವಿಧಾನಸಭೆ ಕ್ಷೇತ್ರದ ಎಲ್ಲ ವಾರ್ಡ್‌ಗಳು ಒಂದೇ ವಲಯ ವ್ಯಾಪ್ತಿಗೆ ಬರುವಂತೆ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಸೋಮವಾರದ ಸಭೆಯಲ್ಲಿ ಈ ಕುರಿತು ಬಿಬಿಎಂಪಿ ಪುನರ್‌ರಚನಾ ಸಮಿತಿ ಅಧ್ಯಕ್ಷ ಬಿ.ಎಸ್.ಪಾಟೀಲ್ ಅವರಿಗೆ ಸೂಚನೆ ನೀಡಿರುವ ಸಚಿವ ಕೆ.ಜೆ.ಜಾರ್ಜ್, ವಲಯ ಪುನಾರಚನೆಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಹಿರಿಯ ಅಧಿಕಾರಿಗಳ ನೇಮಕಹೊಸ ವಲಯಗಳಿಗೆ ಅಗತ್ಯವಿರುವ ಅಧಿಕಾರಿಗಳ ನೇಮಕಕ್ಕೆ ಸರ್ಕಾರ ತೀರ್ಮಾನಿಸಿದ್ದು, ಆದೇಶದಂತೆ ಈ ವಲಯಗಳಿಗೆ ಸರ್ಕಾರದಿಂದಲೇ ಉನ್ನತ ಅಧಿಕಾರಿಗಳನ್ನು ನೇಮಿಸುವುದು ಮತ್ತು ಪಾಲಿಕೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಮುಂಬಡ್ತಿ ನೀಡಲು ತೀರ್ಮಾನಿಸಲಾಗಿದೆ. ಜತೆಗೆ ನೇರ ನೇಮಕಾತಿ ಮೂಲಕ ಹೊಸದಾಗಿ ಅಧಿಕಾರಿಗಳನ್ನು ನೇಮಿಸಲು ಸರ್ಕಾರ ಬಿಬಿಎಂಪಿಗೆ ಸೂಚಿಸಿದ್ದು, ಇದರಿಂದ 1,004 ಹೊಸ ಹುದ್ದೆಗಳು ಸೃಷ್ಟಿಯಾಗಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಹತ್ತು ವಲಯಗಳು
ಯಲಹಂಕ, ದಾಸರಹಳ್ಳಿ, ಮಹ ದೇವಪುರ, ಕೆ.ಆರ್.ಪುರ, ಗೋವಿಂದ ರಾಜನಗರ, ಪದ್ಮನಾಭನಗರ, ಬೊಮ್ಮನ ಹಳ್ಳಿ, ಜಯನಗರ, ಮಲ್ಲೇಶ್ವರ ಮತ್ತು ರಾಜಾಜಿನಗರ.