Advertisement

ಫೆ.1ರಂದು ಭೂಮಿಯ ಸಮೀಪಕ್ಕೆ ಧೂಮಕೇತು

01:14 AM Jan 28, 2023 | Team Udayavani |

ಲಂಡನ್‌: 2020ರಲ್ಲಿ ಗೋಚರಿಸಿದ ನಿಯೋವೈಸ್‌ ಧೂಮಕೇತುವಿನ ಬಳಿಕ ಈಗ ಮತ್ತೊಂದು ಪ್ರಕಾಶಮಾನವಾದ ಧೂಮಕೇತುವೊಂದು ಸದ್ಯದಲ್ಲೇ ಭೂಮಿಯ ಸಮೀಪಕ್ಕೆ ಬರಲಿದೆ. ತದನಂತರ, ಖಗೋಳದ ಈ ಅಪರೂಪದ ಅತಿಥಿ ನಮಗೆಲ್ಲ ವಿದಾಯ ಹೇಳಲಿದೆ.ಮತ್ತೆ ಇದರ ಭೇಟಿ ಬರೋಬ್ಬರಿ 50,000 ವರ್ಷಗಳ ಬಳಿಕ!

Advertisement

ಹೌದು, ಇ/2022 ಉ3 ಧೂಮ ಕೇತುವು ಒಳ ಸೌರವ್ಯೂಹದಲ್ಲಿದ್ದು, ಜ.12 ರಂದು ಸೂರ್ಯನ ಸಮೀಪ ತನ್ನ ಚಲನೆಯನ್ನು ಪೂರ್ಣಗೊಳಿಸಿದೆ. ಅಂತೆಯೇ ತನ್ನ ಕಕ್ಷೆಯಲ್ಲಿ ಮರಳಿ ಹೋಗುವಾಗ ಭೂಮಿಯ ಸಮೀಪಕ್ಕೆ ಬರಲಿದ್ದು, ಫೆ.1ರಂದು ಭೂಮಿಯಿಂದ 42.63 ದಶಲಕ್ಷ ಕಿ.ಮೀ.ಗಳಷ್ಟು ಸಮೀಪದಿಂದ ಹಾದು ಹೋಗಲಿದೆ. ಅಂದರೆ ಭೂಮಿ ಮತ್ತು ಸೂರ್ಯನ ನಡುವಿನ ಅಂತರದ ಸರಿಸುಮಾರು ಮೂರನೇ ಒಂದರಷ್ಟು. ಈ ಧೂಮಕೇತುವು ಭೂಮಿಯ ಹತ್ತಿರಕ್ಕೆ ಬಂದಂತೆ 5.4 ರಷ್ಟು ಕಾಂತಿಮಾನದಲ್ಲಿ ಪ್ರಕಾಶಿಸಲಿದೆ.

ಪ್ರಸಕ್ತ ತಿಂಗಳ ಕೊನೆಯ ಕೆಲವು ದಿನಗಳಲ್ಲಿ ಮತ್ತು ಫೆಬ್ರವರಿ ತಿಂಗಳ ಪ್ರಾರಂಭದ ದಿನಗಳಲ್ಲಿ ಪ್ರಕಾಶಮಾನವಾಗಿ ಗೋಚರಿಸುವ ಇ/2022 ಉ3 ಧೂಮಕೇತುವನ್ನು ಭೂಮಿಯಿಂದ ವೀಕ್ಷಿಸಬಹುದು. ಇದು ಫೆ.1ರಂದು ಮುಂಜಾನೆಯ ಆಕಾಶದಲ್ಲಿ ಪ್ರಕಾಶಮಾನವಾಗಿ ಗೋಚರಿಸಲಿದ್ದು, ಮತ್ತೆ ಈ ಅಪರೂಪದ ಅತಿಥಿಯನ್ನು ವೀಕ್ಷಿಸಬೇಕೆಂದರೆ 50,000 ವರ್ಷ ಕಾಯಬೇಕಾಗುತ್ತದೆ. ಅಂದರೆ, ಜೀವಿತಾವಧಿಯಲ್ಲಿ ಒಮ್ಮೆಗೆ ಮಾತ್ರ ನಮಗೆ ಇದನ್ನು ನೋಡಲು ಸಾಧ್ಯ!

ಇಂದು ಯುರೇನಸ್‌ ಕಣ್ಣಾಮುಚ್ಚಾಲೆ ಆಟ!
ಖಗೋಳದಲ್ಲಿ ನಡೆಯುವ ವಿಸ್ಮಯಗಳು ಒಂದೋ ಎರಡೋ? ಶನಿವಾರ ಹೊಸದೊಂದು ವಿಸ್ಮಯಕ್ಕೆ ನಮ್ಮ ಸೌರವ್ಯೂಹ ಸಾಕ್ಷಿಯಾಗಲಿದೆ. ದೂರದರ್ಶಕದಲ್ಲಿ ಮಾತ್ರವೇ ಕಾಣಸಿಗುವ ಯುರೇನಸ್‌ ಗ್ರಹವು ಶನಿವಾರ ಚಂದ್ರನ ಹಿಂದೆ ಅಡಗಿ ಕುಳಿತು ಕೊಳ್ಳುತ್ತಾನಂತೆ!

ಜಗತ್ತಿನ ಉತ್ತರ ಭಾಗದ ಹಾಗೂ ಏಷ್ಯಾದ ಕೆಲವು ಭಾಗಗಳ ಜನರಿಗೆ ಈ ಕೌತುಕವನ್ನು ವೀಕ್ಷಿಸುವ ಅವಕಾಶವಿದೆ ಎಂದಿದ್ದಾರೆ ವಿಜ್ಞಾನಿಗಳು. ಒಂದು ಆಕಾಶಕಾಯವು ಇನ್ನೊಂದರ ಹಿಂದೆ ಹಾದುಹೋದಾಗ ಇಂಥ ವಿಸ್ಮಯ ಸಂಭವಿಸುತ್ತದೆ. ಅಲಾಸ್ಕಾ, ಗ್ರೀನ್‌ಲ್ಯಾಂಡ್ , ರಷ್ಯಾ ಮತ್ತು ಜಪಾನ್‌ನ ಜನ ಈ ಸುಂದರ ವಿದ್ಯಮಾನವನ್ನು ನೋಡಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next