Advertisement

Bonda Mani: 270ಕ್ಕೂ ಹೆಚ್ಚಿನ ಚಿತ್ರದಲ್ಲಿ ನಟಿಸಿದ್ದ ಹಾಸ್ಯನಟ ಬೋಂಡಾ ಮಣಿ ನಿಧನ

10:31 AM Dec 24, 2023 | Team Udayavani |

ಚೆನ್ನೈ: ಜನಪ್ರಿಯ ಹಾಸ್ಯನಟ ಬೋಂಡಾ ಮಣಿ ಮೂತ್ರಪಿಂಡ ಸಂಬಂಧಿ ಕಾಯಿಲೆಯಿಂದ ಶನಿವಾರ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

Advertisement

ಡಿಸೆಂಬರ್ 23 ರ ರಾತ್ರಿ, ಮಣಿ ಅವರು ಚೆನ್ನೈನ ಪೊಝಿಚಲೂರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಮೂರ್ಛೆ ಹೋದರು ಕುಟುಂಬ ಸದಸ್ಯರು ಕೂಡಲೇ ಅವರನ್ನು ಕ್ರೋಮ್‌ಪೇಟೆಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೋತ್ತಿಗಾಗಲೇ ಮಣಿ ನಿಧನ ಹೊಂದಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಅವರ ಪಾರ್ಥಿವ ಶರೀರವನ್ನು ಪೊಝಿಚಾಲೂರಿನ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದು ಸಂಜೆ 5ರ ಸುಮಾರಿಗೆ ಕ್ರೋಂಪೇಟೆಯಲ್ಲಿರುವ ಚಿತಾಗಾರದಲ್ಲಿ ಅಂತಿಮ ವಿಧಿವಿಧಾನಗಳು ನಡೆಯಲಿವೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿದೆ.

ಮೃತರು ಪತ್ನಿ ಮಾಲತಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮಣಿ ಅವರ ಚಿಕಿತ್ಸೆಗೆ ಚಿತ್ರರಂಗದ ಹಿರಿಯ ಹಾಗೂ ಖ್ಯಾತ ನಟರು ಆರ್ಥಿಕ ಸಹಾಯ ಮಾಡಿದ್ದಾರೆ.

Advertisement

ಬೋಂಡಾ ಮಣಿ ತಮಿಳು ಚಿತ್ರರಂಗದ ಜನಪ್ರಿಯ ಹಾಸ್ಯನಟರಾಗಿದ್ದರು. 1991 ರಲ್ಲಿ ಬಿಡುಗಡೆಯಾದ ನಟ ಭಾಗ್ಯರಾಜ್ ಅವರ ‘ಪೌನು ಪೌನುತನ್’ ಚಿತ್ರದ ಮೂಲಕ ಬೋಂಡಾ ಮಣಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಪೊನ್ವಿಲಾಂಗು, ಪೊಂಗಲೋ ಪೊಂಗಲ್, ಸುಂದರ ಟ್ರಾವೆಲ್ಸ್, ಮರುದಮಲೈ, ವಿನ್ನರ್, ವೇಲಾಯುಧಂ, ಜಿಲ್ಲಾ, ವಸೀಕರ ಸೇರಿದಂತೆ 270 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಹಾಸ್ಯ ನಟ ವಡಿವೇಲು ಅವರೊಂದಿಗೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: IIT Kanpur: ಉಪನ್ಯಾಸ ನೀಡುತ್ತಿದ್ದಾಗಲೇ ವೇದಿಕೆ ಮೇಲೆ ಕುಸಿದುಬಿದ್ದು ಪ್ರಾಧ್ಯಾಪಕ ಮೃತ್ಯು

Advertisement

Udayavani is now on Telegram. Click here to join our channel and stay updated with the latest news.

Next