Advertisement

ಅನಿವಾಸಿ ಕೇರಳಿಗರಲ್ಲಿದೆ ಮತೋತ್ಸಾಹ

12:30 AM Mar 15, 2019 | Team Udayavani |

ಕೇರಳವೆಂದರೆ ಹಾಗೆಯೇ. ಸಾಕ್ಷರತೆಯಲ್ಲಿ ಶೇ.100ರಷ್ಟು ಪರಿಪೂರ್ಣತೆ ಸಾಧಿಸಿರುವುದರ ಜತೆಗೆ, ರಾಜಕೀಯ ಪ್ರಜ್ಞೆ ಮತ್ತು ನಾಗರಿಕರ ಹಕ್ಕು ಪಾಲನೆಯ ಪರಾಯಣತೆಯಲ್ಲೂ ಅಲ್ಲಿನವರು ಶೇ.100ರ ಸಮೀಪಕ್ಕೆ ಬರುವವರೇ. ಕೇರಳದ ಒಟ್ಟು ಮತದಾರರ ಪೈಕಿ ಹೆಚ್ಚಿನವರು ಇತರ ರಾಜ್ಯ, ವಿದೇಶಗಳಲ್ಲಿರುವವರೇ. ಸ್ಥಳೀಯ ಸಂಸ್ಥೆಗಳು, ವಿಧಾನಸಭೆ, ಲೋಕಸಭೆ ಚುನಾವಣೆ ವೇಳೆ ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸುತ್ತಾರೆ. ಬಹುತೇಕ ಮಂದಿ ಮಲಯಾಳಿಗರು ಕೇರಳದಿಂದ ಹೊರತಾಗಿರುವ ರಾಜ್ಯಗಳಲ್ಲಿ ಮತ್ತು ವಿದೇಶಗಳಲ್ಲಿರುವವರೇ. 

Advertisement

2014ರಲ್ಲಿ 12, 653 ಮಂದಿ ಸಾಗರೋತ್ತರ ಮತದಾರರು ಇದ್ದರೆ, ಜ.30ರ ವೇಳೆಗೆ ಅವರ ಸಂಖ್ಯೆ 66, 584ಕ್ಕೆ ಹೆಚ್ಚಳವಾಗಿದೆ. ದೇಶದ ಒಟ್ಟು ಅನಿವಾಸಿ ಮತದಾರರ ಸಂಖ್ಯೆ 1.3 ಕೋಟಿಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಎನಿಸಿದರೂ, ಅವರು ಉತ್ಸಾಹದಿಂದ ಮತದಾನದಲ್ಲಿ ಭಾಗವಹಿಸುತ್ತಾರೆ. 

ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ 66, 584 ಮತದಾರರ ಪೈಕಿ 3,729 ಮಂದಿ ಮಹಿಳಾ ಮತದಾರರೇ ಇದ್ದಾರೆ. ಕೇರಳದಲ್ಲಿನ ಹಲವಾರು ಸಂಘಟನೆಗಳು ವಿದೇಶಗಳಲ್ಲಿರುವ ಪ್ರಜೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡುವ ಬಗ್ಗೆ ವಿಶೇಷ ಕಾರ್ಯಕ್ರಮಗಳನ್ನು ಗಲ್ಫ್ ರಾಷ್ಟ್ರಗಳಲ್ಲಿ ಆಯೋಜಿಸಿದ್ದರು. ವಿಶೇಷವಾಗಿ 2018ರ ಆಗಸ್ಟ್‌ನಲ್ಲಿ ವಿದೇಶಗಳಲ್ಲಿರುವ ಭಾರತೀಯರು ಮತದಾನ ಮಾಡಲು ಅವಕಾಶ ನೀಡುವ ಕಾಯ್ದೆಗೆ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದ ಬಳಿಕ ಈ ಕ್ರಮ ಕೈಗೊಳ್ಳಲಾಗಿತ್ತು. ಆದರೆ ರಾಜ್ಯಸಭೆಯಲ್ಲಿ ಅದಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. 2018ರ ಅಕ್ಟೋಬರ್‌ ಮತ್ತು 2019ರ ಜನವರಿ ಅವಧಿಯಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಬೇರೆ ರಾಜ್ಯ ಮತ್ತು ವಿದೇಶಗಳಲ್ಲಿರುವ ಕೇರಳಿಗರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಸ್ವಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಂಡ ಎನ್‌ಆರ್‌ಐಗಳು ಮತಹಾಕಲು ಅವಕಾಶ ಉಂಟು.  ಮತೋತ್ಸಾಹ ಅಂದರೆ ಇದು.

Advertisement

Udayavani is now on Telegram. Click here to join our channel and stay updated with the latest news.

Next