Advertisement
ಮುಂಜಾನೆ ಮಂಜು ಸರಿಸುತ್ತಾ ಶಾಂತ ಮೇಘಗಳ ನಡುವೆ
Related Articles
Advertisement
ಆಷಾಡದ ತುಂತುರು ಜಡಿ ಮಳೆಗೆ ಮರ ಗಿಡಗಳೆಲ್ಲ ಚಿಗುರಿ
ಶ್ರಾವಣ ಮಾಸಕ್ಕೆ ತೋರುತಿದೆ ಸ್ವಾಗತದ ದೀಪ
ಅರಳಿದ ತಾವರೆ ಕೊಳದ ದೀಪ, ಮುತ್ತು ಕಡಲಿನ ದೀಪ,
ಕಾಮನಬಿಲ್ಲು ಆಕಾಶದ ದೀಪ ನಗುವೆ ಮೊಗದ ದೀಪ,
ಕುಂಕುಮವು ಹಣೆಯ ದೀಪ,ಮಗುವೆ ಮಡಿಲಿನ ದೀಪ ,
ಹೆಣ್ಣೆಂಬ ದೀಪವನು ಆರಿಸದರಿ ಆರಂಭದಲಿ
ಹೆಣ್ಣು ಮನೆ ಮನವ ಬೆಳಗುವ ದೀಪ
ಬನ್ನಿ ಹಚ್ಚೋಣ ಎಲ್ಲರೂ ಸೇರಿ ಪ್ರೀತಿಯ ದೀಪ
ಸಾಕ್ಷರತೆಯ ದೀಪ, ಸಾರ್ಥಕತೆಯ ದೀಪ
-ಸುಮನ ಅಮಿತ್,ಕೆ.ಆರ್.ನಗರ