Advertisement

ರಕ್ಷಣಾ ಕ್ಷೇತ್ರದಲ್ಲೂ ಬರಲಿ ಪೂರ್ಣ ಸ್ವಾವಲಂಬನೆ

09:16 AM May 31, 2019 | Team Udayavani |

ನರೇಂದ್ರ ಮೋದಿಯವರ ಮೊದಲ ಅವಧಿಯಲ್ಲಿ ಎಲ್ಲರ ಹುಬ್ಬೇರಿಸಿದ ಮತ್ತೂಂದು ಯೋಚನೆ-ಯೋಜನೆ ‘ಮೇಕ್‌ ಇನ್‌ ಇಂಡಿಯಾ’. ಅದರಲ್ಲೂ ಈ ಕನಸು ರಕ್ಷಣಾ ಕ್ಷೇತ್ರದಲ್ಲಿಯೂ ಈಡೇರಬೇಕೆಂಬುದು ಪ್ರತಿ ಭಾರತೀಯನ ಹಂಬಲವೂ ಸಹ.

Advertisement

ಹೂಡಿಕೆ ಉತ್ತೇಜನ, ಆವಿಷ್ಕಾರದ ಪೋಷಣೆ, ಕೌಶಲ ಬೆಳವಣಿಗೆಯ ಹೆಚ್ಚಳ, ಬೌದ್ಧಿಕ ಆಸ್ತಿಯ ರಕ್ಷಣೆ, ಅತ್ಯುತ್ತಮ ಉತ್ಪಾದನ ಮೂಲಸೌಕರ್ಯ ಕಲ್ಪಿಸಿ ದೇಶವನ್ನು ಸ್ವಾವಲಂಬಿ ಯಾಗಿಸುವ ಉದ್ದೇಶದಿಂದ ಜಾರಿಗೆ ಬಂದದ್ದು ಈ ಮೇಕ್‌ ಇನ್‌ ಇಂಡಿಯಾ. ಈ ಐದು ವರ್ಷಗಳಲ್ಲಿ ಯೋಜನೆ ಗುರಿ ತಲುಪುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ; ಇನ್ನೂ ನಡೆಯಬೇಕಾದಷ್ಟು ಬಹಳಷ್ಟಿವೆ.

ದೇಶದ ಭದ್ರತೆ ವಿಷಯದಲ್ಲೂ ‘ಮೇಕ್‌ ಇನ್‌ ಇಂಡಿ ಯಾ’ವನ್ನು ಸರಕಾರ ಪ್ರತಿಪಾದಿಸುತ್ತಿದೆ. ವಿಶ್ವದ ಎರಡನೇ ಅತಿದೊಡ್ಡ ಸೇನಾಶಕ್ತಿಯಾಗಿರುವ ಭಾರತಕ್ಕೆ ಇದು ಅವಶ್ಯ ಕೂಡ. ವೇಗವಾಗಿ ಪ್ರಗತಿ ಕಾಣುತ್ತಿರುವ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ತನಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ದೇಶೀ ಯವಾಗಿಯೇ ಉತ್ಪಾದಿಸುವುದು ದುಸ್ತರವೇನಲ್ಲ. ಆದರೆ ಈ ಉದ್ದೇಶ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕಿದೆ.

ಸೈನ್ಯ ಬಲಿಷ್ಠವಾಗಿರಲು ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಅಗತ್ಯ. ಭಾರತವು ಸಂಖ್ಯೆಯಲ್ಲಿ ಎರಡನೇ ದೊಡ್ಡ ಸೇನಾಶಕ್ತಿಯಾದರೂ (ಸುಮಾರು 1.39 ಮಿಲಿಯನ್‌ ಸಕ್ರಿಯ ಸಿಬಂದಿ) ಶಕ್ತಿಯಲ್ಲಿ (ಸ್ಟ್ರೆಂತ್‌) ನಾಲ್ಕನೇ ಸ್ಥಾನ. ಭಾರತವು ಜಗತ್ತಿನ ಅತಿದೊಡ್ಡ ಸಾಂಪ್ರದಾಯಿಕ ರಕ್ಷಣಾ ಸಾಮಗ್ರಿ ಆಮದು ರಾಷ್ಟ್ರಗಳಲ್ಲಿ ಒಂದು. ಹೆಚ್ಚಿನ ಶಸ್ತ್ರಾಸ್ತ್ರಗಳು ಬರುವುದು ರಷ್ಯಾದಿಂದ.

ಇನ್ಸಾಸ್‌ ರೈಫ‌ಲ್

Advertisement

ಸದ್ಯ ಭಾರತೀಯ ಸೈನ್ಯದ ಪದಾತಿ ದಳ (ಇನ್ಫ್ಯಾಂಟ್ರಿ) ಬಳಸುತ್ತಿರುವ ಇನ್ಸಾಸ್‌ (ಇಂಡಿಯನ್‌ ಸ್ಮಾಲ್ ಆಮ್ಸ್‌ರ್ ಸಿಸ್ಟಂ) ರೈಫ‌ಲ್ಗಳು 1980ರ ಸಮಯದಲ್ಲಿ ಭಾರತದ ಆರ್ಮಮೆಂಟ್ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್ ಎಸ್ಟಾಬ್ಲಿಶ್‌ಮೆಂಟ್ (ಎಆರ್‌ಡಿಇ) ನಿಂದ ವಿನ್ಯಾಸಗೊಂಡು ಆರ್ಡ್‌ನ್ಯಾನ್ಸ್‌ ಫ್ಯಾಕ್ಟರೀಸ್‌ ಬೋರ್ಡ್‌ (ಒಎಫ್ಬಿ) ನಿಂದ ದೇಶೀಯವಾಗಿ ತಯಾರಿಸಲ್ಪಟ್ಟವು. ಇನ್ಸಾಸ್‌ ರೈಫ‌ಲ್ ವರ್ಗ ದಲ್ಲಿ ಅಸಾಲ್r ರೈಫ‌ಲ್ ಮತ್ತು ಲೈಟ್ ಮೆಶಿನ್‌ ಗನ್‌ (ಎಲ್ಎಂಜಿ) ಒಳಗೊಳ್ಳುತ್ತವೆ. ನಿಮಿಷಕ್ಕೆ 600-700 ಸುತ್ತು ಫೈರಿಂಗ್‌ ಸಾಮರ್ಥ್ಯವಿರುವ ಈ ರೈಫ‌ಲ್ಗಳ ಮ್ಯಾಗಜಿನ್‌ ಕೆಪ್ಯಾಸಿಟಿ 20-30 ಸುತ್ತುಗಳು ಮಾತ್ರ. ಇದರಲ್ಲಿನ ಕೆಲವು ತಾಂತ್ರಿಕ ದೋಷಗಳಿಂದಾಗಿ ಸೇನೆಯು ಇದಕ್ಕೆ ಪರ್ಯಾಯ ಶಸ್ತ್ರದ ಅಗತ್ಯ ಇದೆ ಎಂದಿತ್ತು. 2015ರಲ್ಲಿ ಸಿಆರ್‌ಪಿಎಫ್ಗೆ ಕೆಲವು ಎಕೆ-47 ರೈಫ‌ಲ್ಗಳನ್ನು ಒದಗಿಸಲಾಯಿತು. 2017ರಲ್ಲಿ ಸೈನ್ಯವು ದೇಶೀಯವಾಗಿ ಉತ್ಪಾದಿಸಲ್ಪಟ್ಟ ಅಸಾಲ್r ರೈಫ‌ಲ್ 5.56 ಎಂಎಂ ಎಕ್ಸ್‌ಕ್ಯಾಲಿಬರ್‌ ಗನ್‌ಗಳನ್ನು ನಿಗದಿತ ಮಾನದಂಡಗಳನ್ನು ಪೂರೈಸದಿದ್ದುದಕ್ಕಾಗಿ ತಿರಸ್ಕರಿಸಿತು.

ಮೇಡ್‌ ಇನ್‌ ಅಮೇಠಿ

ಇತ್ತೀಚೆಗೆ ಅಮೇಠಿಯಲ್ಲಿ ಎಕೆ 203 ಕಲಾಶ್ನಿಕೋವ್‌ ರೈಫ‌ಲ್ ಉತ್ಪಾದನ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಈ ಗನ್‌ ಈಗ ಸೈನಿಕ ಪಡೆಗಳಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವ ಇನ್ಸಾಸ್‌ ರೈಫ‌ಲ್ಗಳಿಗೆ ಪರ್ಯಾಯವಾಗಬಲ್ಲದು ಎನ್ನಲಾಗಿದೆ. 7,00,000 ರೈಫ‌ಲ್ಗಳ ಉತ್ಪಾದನೆ ಗುರಿ ಹೊಂದಲಾಗಿದೆ. ಮೇಡ್‌ ಇನ್‌ ಇಂಡಿಯಾ ನಿಟ್ಟಿನಲ್ಲಿ ಇದೊಂದು ಮಹತ್ತರ ಹೆಜ್ಜೆಯಾದರೂ ಇದು ರಷ್ಯಾ-ಭಾರತದ ಜಂಟಿ ಯೋಜನೆ. ಹಾಗಾಗಿ ಇಲ್ಲಿ ಸಂಪೂರ್ಣ ಸ್ವಂತಿಕೆ ಕಷ್ಟ.

ಕಳಪೆ ಗುಂಡು, ರಕ್ಷಣಾ ಸಾಮಗ್ರಿ

ಸೈನ್ಯಕ್ಕೆ ಶಸ್ತ್ರಾಸ್ತ್ರ, ಮದ್ದುಗುಂಡು ತಯಾರಿಸಿ ಕೊಡುವುದು ಒಎಫ್ಬಿ. ಇತ್ತೀಚೆಗೆ ಇದರಿಂದ ಪೂರೈಸಲ್ಪಟ್ಟ ಮದ್ದುಗುಂಡುಗಳು ಕಳಪೆಯಾಗಿವೆ ಎಂಬ ಆರೋಪ ಕೇಳಿ ಬಂದಿತ್ತು. ಸೈನ್ಯವು, ಟಿ-72, ಟಿ-90 ಗನ್‌ಗಳು, ಅರ್ಜುನ್‌ ಯುದ್ಧ ಟ್ಯಾಂಕ್‌ಗಳು, 105 ಎಂಎಂ ಇಂಡಿಯನ್‌ ಫೀಲ್ಡ್ ಗನ್‌, 105 ಎಂಎಂ ಲೈಟ್ ಫೀಲ್ಡ್ ಗನ್‌, 130 ಎಂಎಂ ಎಂಎ1 ಮೀಡಿಯಂ ಗನ್‌, 40 ಎಂಎಂ ಎಲ್-70 ಏರ್‌ ಡಿಫೆನ್ಸ್‌ ಗನ್‌ಗಳಿಗೆ ಕಳಪೆ ಮದ್ದುಗುಂಡುಗಳಿಂದಾಗಿ ಹಾನಿಯುಂಟಾಗಿದೆ ಎಂದು ರಕ್ಷಣಾ ಸಚಿವಾಲಯಕ್ಕೆ ವರದಿ ಸಲ್ಲಿಸಿತ್ತು. 2017ರ ಸೆಪ್ಟಂಬರ್‌ನಲ್ಲಿ ಪೋಖ್ರಾನ್‌ನಲ್ಲಿ ನಡೆದ ಫೀಲ್ಡ್ ಟ್ರಯಲ್ನಲ್ಲಿ ಆರ್ಮಿಯ ಲಾಂಗ್‌ ರೇಂಜ್‌ ಅಲಾó ಲೈಟ್ ಹೊವಿಟ್ಜರ್‌ ಎಂ-777 ಹಾನಿಗೊಳಗಾಗಿತ್ತು. ಕಳಪೆ ಮದ್ದುಗುಂಡುಗಳ ಕಾರಣ ಇದು ಸಂಭವಿಸಿತು ಎಂದು ಆರ್ಮಿ ಆಪಾದಿಸಿತ್ತು.

ಇದನ್ನೆಲ್ಲ ನೋಡುವಾಗ ದೇಶೀಯವಾಗಿಯೇ ಉತ್ಪಾದನೆ ಎಷ್ಟು ವಿಶ್ವಾಸಾರ್ಹ ಎಂಬ ಪ್ರಶ್ನೆಯೂ ಮೂಡುತ್ತದೆ. ಒಂದು ವೇಳೆ ಯುದ್ಧವೇನಾದರೂ ಘಟಿಸಿದರೆ ಏನು ಗತಿ? ತಂತ್ರಜ್ಞಾನದ ಯುಗದಲ್ಲಿ ಉತ್ತಮಗೊಳ್ಳುತ್ತಿರುವ ಆರ್ಥಿಕತೆ ನಡುವೆಯೂ ಒಂದು ಪ್ರಬಲ ದೇಶದ ಸೈನ್ಯಕ್ಕೂ ಬಲ ಬರಬೇಕಿದೆ. ಪಾಕ್‌, ಚೀನದಂಥ ರಾಷ್ಟ್ರಗಳು ಬಗಲಲ್ಲಿ ಇರುವಾಗ ಪರೋಕ್ಷ ಅಥವಾ ನೇರ ಯುದ್ಧದ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಶಸ್ತ್ರಾಸ್ತ್ರ ವಿಷಯದಲ್ಲಿ ಸ್ವಾವಲಂಬನೆ ಸಾಧಿಸ ದಿದ್ದರೆ ಅದು ರಾಷ್ಟ್ರೀಯ ಭದ್ರತೆಗೆ ಆಪಾಯಕಾರಿ. ಈ ವಿಷಯದಲ್ಲಿ ರಾಜಿ ಇಲ್ಲ ಎನ್ನುವ ನರೇಂದ್ರ ಮೋದಿ ಸರಕಾರ ಸೈನ್ಯದ, ದೇಶದ ಹಿತಾಸಕ್ತಿಯ ಪರವಾಗಿದೆ. ರಕ್ಷಣಾ ಕ್ಷೇñ ‌್ರದಲ್ಲಿ ಭಾರತವು ಶಸ್ತ್ರಾಸ್ತ್ರಗಳ ಆಮದಿಗಿಂತ ರಫ್ತಿನಲ್ಲಿ ಸಾಧನೆ ತೋರ ಬೇಕಾದ ಅಗತ್ಯವಿದೆ. ಸಂಪೂರ್ಣ ಸ್ವಾವಲಂಬನೆ ಈ ಕ್ಷೇತ್ರದಲ್ಲಿ ಸಾಧ್ಯವಾಗಬೇಕು.

ಭೂಸೇನೆ, ವಾಯುಸೇನೆ, ನೌಕಾಸೇನೆ

ಭೂಸೇನಾ ಪದಾತಿ ದಳಗಳ ಸಂಗತಿ ಈ ತೆರನಾದರೆ ವಾಯುಸೇನೆ, ನೌಕಾಸೇನೆಯದು ಇನ್ನೊಂದು ರೀತಿ. ಕಳೆದ ಎಪ್ರಿಲ್ನಲ್ಲಿ ಕಾರವಾರದಲ್ಲಿ ಐಎನ್‌ಎಸ್‌ ವಿಕ್ರಮಾದಿತ್ಯದಲ್ಲಿ ನಡೆದ ಅಗ್ನಿ ಅವಘಡದಲ್ಲಿ ನೌಕೆಯ ಫೈರ್‌ ಆ್ಯಂಡ್‌ ಸೇಫ್ಟಿ ವಿಭಾಗದ ಮುಖ್ಯಸ್ಥರಾಗಿದ್ದ ಲೆಫ್ಟಿನೆಂಟ್ ಕಮಾಂಡರ್‌ ಡಿ.ಎಸ್‌. ಚೌಹಾಣ್‌ ಹುತಾತ್ಮರಾದರು. ಐಎನ್‌ಎಸ್‌ ವಿಕ್ರಮಾದಿತ್ಯ ಭಾರತದ ಏಕೈಕ ಯುದ್ಧವಿಮಾನ ವಾಹಕ ನೌಕೆ ಎಂಬುದು ಗಮನಾರ್ಹ. ಅಗ್ನಿ ಅವಘಡಗಳಂಥವು ತಾಂತ್ರಿಕ ದೋಷಗಳಿಂದಾಗಿ ಸಂಭವಿಸಬಲ್ಲವು. ಇವುಗಳಿಗೆ ಸೈನಿಕ ಜೀವ ಬಲಿಯಾಗುವುದು ತಪ್ಪಬೇಕು. ತಂತ್ರಜ್ಞಾನದ ಸಮರ್ಥ ಬಳಕೆ ಇಲ್ಲಿ ಆಗಬೇಕು.

ಇನ್ನು, ವಾಯುಸೇನೆಯ ಯುದ್ಧ ವಿಮಾನಗಳಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರ ಸಾಹಸ ಜಗಜ್ಜಾಹೀರಾಗಿದೆ. ಆದರೂ ರಫೇಲ್ ಇದ್ದಿದ್ದರೆ ಏರ್‌ ಸ್ಟ್ರೈಕ್‌ ಇನ್ನೂ ಪರಿಣಾಮಕಾರಿಯಾಗಿರುತ್ತಿತ್ತು ಎಂದು ಏರ್‌ ಚೀಫ್ ಮಾರ್ಷಲ್ ಬಿ.ಎಸ್‌. ಧನೋವಾ ಹೇಳಿದ್ದು ವಾಯುಸೇನೆಗೆ ಇನ್ನಷ್ಟು ಬಲದ ಅಗತ್ಯ ಇದೆ ಎಂಬುದನ್ನು ಪುಷ್ಟೀಕರಿಸುತ್ತದೆ. ಬಳಿಕ ಚಿನೂಕ್‌, ಅಪಾಚೆ ಹೆಲಿಕಾಪ್ಟರ್‌ಗಳನ್ನೂ ಖರೀದಿಸಿಯಾಗಿದೆ, ಕೆಲವು ಖರೀದಿ ಹಂತದಲ್ಲಿವೆ. ಇನ್ನೊಂದು ಬೆಳವಣಿಗೆಯೆಂದರೆ ಸುಖೋಯ್‌ಗೆ ಹೊಸ ಕ್ಷಿಪಣಿ ಅಳವಡಿಕೆ. ಸದ್ಯದ ಮಾಹಿತಿಯಂತೆ ಐಎಎಫ್ನ ಪ್ರಮುಖ ಯುದ್ಧವಿಮಾನಗಳಲ್ಲಿ ಒಂದಾಗಿರುವ ಸುಖೋಯ್‌-30 ಮಾದರಿಯ ವಿಮಾನಗಳಿಗೆ ಇಸ್ರೇಲ್ ನಿರ್ಮಿತ ಐ-ಡೆರ್ಬಿ ಏರ್‌-ಟು-ಏರ್‌ ಕ್ಷಿಪಣಿ ಉಡಾವಣ ತಂತ್ರಜ್ಞಾನ ಅಳವಡಿಸುವ ಇರಾದೆ ಐಎಎಫ್ಗೆ ಇದೆ.

– ಕುದ್ಯಾಡಿ ಸಂದೇಶ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next