ಬೆಳ್ತಂಗಡಿ : ಎತ್ತ ನೋಡಿದರೂ ಉಳುವ ಯೋಗಿ. ಊರಿಗೆ ಊರೇ ಸಂಭ್ರಮಿಸುವ ದಿನ ರವಿವಾರ ಕೊಳಂಬೆ ನೆರೆ ಪೀಡಿತ ಪ್ರದೇಶದ್ದಾಗಿತ್ತು.
ಅ. 9ರ ನೆರೆಗೆ ನಲುಗಿದ ಊರಿನ ಚಿತ್ರಣ ಬದಲಿಸಲು ಹೊರಟ ಉಜಿರೆಯ ಉದ್ಯಮಿ ಗಳಾದ ಮೋಹನ್ ಕುಮಾರ್ ಹಾಗೂ ರಾಜೇಶ್ ಪೈ ತಂಡದೊಂದಿಗೆ ಸೇರಿದ 3,500ಕ್ಕೂ ಹೆಚ್ಚು ಮಂದಿ ಸ್ವಯಂಸೇವಕರ ಶ್ರಮದಾನದಿಂದ ಒಂದು ವರ್ಷದಲ್ಲಿ ಪೂರೈಸಬೇಕಿದ್ದ ಅಭಿವೃದ್ಧಿ ಕಾಮಗಾರಿ ನುಡಿದಂತೆ 65 ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ. ಈ ಮೂಲಕ ಸಂತ್ರಸ್ತರ ಪಾಲಿಗೆ ಬೆಳಕಾ ಗುವು ದರೊಂದಿಗೆ ಹೊಸ ಬದುಕನ್ನೇ ಕಟ್ಟಿಕೊಟ್ಟಿ ರುವುದಕ್ಕೆ ಸಾಕ್ಷಿ ಇಲ್ಲಿನ ಕೃಷಿ ಭೂಮಿ.
ಶಾಸಕ ಹರೀಶ್ ಪೂಂಜ ಅವರು “ಬದುಕು ಕಟ್ಟೋಣ ಬನ್ನಿ’ ಕಾರ್ಯಕ್ರಮದ ಸಮಾರೋಪಕ್ಕೆ ಸಾಂಪ್ರದಾಯಿಕ ವಾಗಿ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಿರಂತರ ಶ್ರಮಿಸಿದ ತಿಮ್ಮಯ್ಯ ನಾಯ್ಕ, ಶಶಿ, ಶ್ರೀಧರ್, ರಾಘು ಅವರನ್ನು ಶಾಸಕ ಹರೀಶ್ ಪೂಂಜ ಗೌರವಿಸಿದರು. ತಿಮ್ಮಯ್ಯ ನಾಯ್ಕ, ಸತೀಶ್ ಹೊಸ್ಮಾರು ನಿರೂಪಿಸಿದರು.
ಜಿ.ಪಂ. ಸದಸ್ಯೆ ಸೌಮ್ಯಲತಾ ಜಯಂತ ಗೌಡ, ತಾ.ಪಂ. ಸದಸ್ಯ ಶಶಿಧರ ಕಲ್ಮಂಜ, ಚಾರ್ಮಾಡಿ ಗ್ರಾ.ಪಂ. ಅಧ್ಯಕ್ಷೆ ಶೈಲಜಾ, ಉಜಿರೆ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಪೂಜಾರಿ, ಉದ್ಯಮಿಗಳಾದ ಜಯಂತ ಶೆಟ್ಟಿ ಮಡಂತ್ಯಾರು, ಪ್ರಶಾಂತ್ ಜೈನ್ ಉಜಿರೆ, ಮೋಹನ್ ಶೆಟ್ಟಿಗಾರ್, ರಾಘವೇಂದ್ರ ಬೈಪಡಿತ್ತಾಯ, ಲಕ್ಷ್ಮಣ ಸಪಲ್ಯ ಕನ್ನಾಜೆ ಮತ್ತಿತರರು ಭಾಗವಹಿಸಿದ್ದರು.
ಧರ್ಮಸ್ಥಳ ಅನ್ನಪೂರ್ಣ ಛತ್ರದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್, ಗ್ರಾ. ಯೋಜನಾಧಿಕಾರಿ ಜಯಕರ್ ಶೆಟ್ಟಿ, ಉದ್ಯಮಿಗಳಾದ ಶ್ರೀಧರ ಕೆ.ವಿ., ಅರವಿಂದ ಕಾರಂತ್, ಕೇಶವ ಭಟ್, ಜಯಂತ ಶೆಟ್ಟಿ ಕುಂಡಿನಿ, ರಮೇಶ್ ಪ್ರಭು, ದೇವಪ್ಪ ಗೌಡ, ಪ್ರಕಾಶ್ ಅಪ್ರಮೇಯ, ಶ್ರೀನಿವಾಸ ಗೌಡ ಪಟ್ರಮೆ, ನಾರಾಯಣ ಗೌಡ ಕೊಳಂಬೆ, ದಯಾಕರ್ ಕೊಳಂಬೆ, ಶ್ರೀಧರ ಗೌಡ ಮರಕಡ, ಕಾಳಜಿ ಫಂಡ್ ಸಮಿತಿ ಸದಸ್ಯ ಡಾ| ಎಂ.ಎಂ. ದಯಾಕರ್, ವಿಜಯ ಬ್ಯಾಂಕ್ ಪ್ರಬಂಧಕ ಅನಿಲ್ ಧರ್ಮಸ್ಥಳ, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ತುಳು ಅಕಾಡೆಮಿ ಸದಸ್ಯ ರವೀಂದ್ರ ಶೆಟ್ಟಿ ಬಳೆಂಜ, ಉಮೇಶ್ ಗೌಡ ಅಂತರ, ರಾಜೇಂದ್ರ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಪದ್ಧತಿ ನಾಟಿ
ಕೊಳಂಬೆಯ ಸುಮಾರು 5 ಎಕ್ರೆಯಲ್ಲಿನ 17 ಗದ್ದೆಗಳಿಗೆ ಗಣ್ಯರು ಹಾಲೆರೆಯುವ ಮೂಲಕ ನಾಟಿಗೆ ಚಾಲನೆ ನೀಡಿದರು.
200 ಮಹಿಳೆಯರು, 350
ಸ್ವಯಂ ಸೇವಕರು ಸಾಂಪ್ರದಾಯಿಕವಾಗಿ ಓಬೇಲೆ ಪಾಡªನ ಹಾಡಿ, ಏಕಕಾಲದಲ್ಲಿ ಶ್ರೀ ಪದ್ಧತಿ ಮೂಲಕ ಸಾಲು ನೇಜಿ ನಾಟಿ ಮಾಡಲಾಯಿತು. ಫಲವಸ್ತು ಹಾಗೂ ಅಡಿಕೆ ನೆಡುವ ಕಾರ್ಯಕ್ರಮಕ್ಕೆ ತಹಶೀಲ್ದಾರ್ ಗಣಪತಿ ಶಾಸಿŒ ದಂಪತಿ ಚಾಲನೆ ನೀಡಿದರು. ಸುಮಾರು 1,000 ಅಡಿಕೆ ಗಿಡ, 300 ತೆಂಗು, 100 ಬಾಳೆ, 150 ಹಲಸಿನ ಕಾಯಿ, ಮಾವಿನ ಗಿಡ, ಪೇರಳೆ ಸಹಿತ ಫಲವಸ್ತುಗಳ ಗಿಡಗಳನ್ನು ನೆಡಲಾಯಿತು.