ಮಳೆಯೆಂದರೆ ಪುಳಕ, ರೋಮಾಂಚನ, ಹಳೆಯ ನೆನಪುಗಳ ಮೆರವಣಿಗೆ, ಖುಷಿ, ಸಡಗರ. ಮಳೆಗಾಲ ತನ್ನ ಜೊತೆಗೆ ನೂರಾರು ಸಂಭ್ರಮಗಳನ್ನು ಹೊತ್ತು ತರುತ್ತದೆ. ಬೆಂಗಳೂರಿನ ಜಂಜಾಟದಲ್ಲಿ ಮುಳುಗೆದ್ದವರಿಗೆ, ಪ್ರಕೃತಿಯ ಕಡೆಗೆ ಮುಖ ಮಾಡುವ ತವಕ. ಈಗಾಗಲೇ ನಿಮ್ಮಲ್ಲಿ ಹಲವರು, ವಾರಾಂತ್ಯದಲ್ಲಿ ಚಾರಣ ಹೊರಡುವ ಪ್ಲ್ರಾನ್ ಮಾಡಿಕೊಳ್ಳುತ್ತಿರಬಹುದು. ಅಂಥವರು “ರೈನಥಾನ್’ನಲ್ಲಿ ಭಾಗವಹಿಸಬಹುದು. ರೈನಥಾನ್ ಎಂದರೆ, ಮ್ಯಾರಥಾನ್ ರೀತಿಯಲ್ಲಿಯೇ, ಮಳೆಯಲ್ಲಿ 15-20 ಕಿ.ಮೀ. ನೆನೆಯುತ್ತಾ ನಡೆದುಕೊಂಡು ಹೋಗುವುದು. ಅದಕ್ಕಾಗಿ ಮಳೆ ಹೆಚ್ಚು ಬರುವ ಪ್ರದೇಶಗಳನ್ನು ಆಯ್ದುಕೊಳ್ಳಲಾಗುತ್ತದೆ. ಕಳೆದ ಹತ್ತು ವರ್ಷಗಳಿಂದ “ರೈನಥಾನ್’ ನಡೆದುಕೊಂಡು ಬರುತ್ತಿದೆ.
ಒಂದಿಡೀ ದಿನ ಮಳೆಯಲ್ಲಿ ನೆನೆಯುತ್ತಾ, ನಡೆಯುವ ನಡಿಗೆ ಕಾರ್ಯಕ್ರಮವಾಗಿದ್ದು, ಛತ್ರಿ , ಟೋಪಿ, ರೈನ್ ಕೋಟ್‌ನಂಥ ಯಾವುದೇ ರಕ್ಷಣೆಯನ್ನು ಬಳಸುವಂತಿಲ್ಲ. ತಂಡದವರೆಲ್ಲರೂ ಬೆರೆತು ಆಡುತ್ತ, ಹರಟುತ್ತ, ತಿನ್ನುತ್ತಾ ನಡೆದು ಗುರಿ ಮುಟ್ಟಬೇಕು. ಆಸಕ್ತರು ಆನ್‌ಲೈನ್ ನೋಂದಣಿ ಮೂಲಕ ರೈನಥಾನ್ ತಂಡದಲ್ಲಿ ಪಾಲ್ಗೊಳ್ಳಬಹುದು.
ಹೆಚ್ಚಿನ ಮಾಹಿತಿಗೆ: www.rainathon.com