Advertisement

ಬಣ್ಣ ಬಣ್ಣದ ಹೋಳಿಗೆ ಸಜ್ಜಾದ ದಾವಣಗೆರೆ

01:10 PM Mar 13, 2017 | Team Udayavani |

ದಾವಣಗೆರೆ: ಬಣ್ಣ ಬಣ್ಣದ ಹೋಳಿ ಹಬ್ಬಕ್ಕೆ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ ಸಜ್ಜಾಗಿದೆ. ಸತತ ಬರ, ಮಳೆಯ ಕೊರತೆ ಹಿನ್ನೆಲೆಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆಯ ನಡುವೆಯೇ ಜನರು ಬಣ್ಣದ ಹಬ್ಬಕ್ಕೆ ಸಿದ್ಧವಾಗಿದ್ದಾರೆ.

Advertisement

ಸೋಮವಾರ ನಡೆಯುವ ಹೋಳಿ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ನಗರದ ವಿವಿಧ ಪ್ರಮುಖ ವೃತ್ತ, ಬೀದಿಯಲ್ಲಿ ಕಾಮದಹನ ಮಾಡಿದರು. ಅಲ್ಲಲ್ಲಿ ಗುಂಡಿ ತೋಡಿ, ಕಬ್ಬಿಣದ ರಿಂಗ್‌ ತೊಟ್ಟಿಗಳಿಟ್ಟು ಕಾಮನ ಪ್ರತಿಕೃತಿ ದಹಿಸುವ ಮೂಲಕ ಸಂತಸಪಟ್ಟರು. 

ಕಾಮಣ್ಣನ ಮಕ್ಕಳು… ಘೋಷಣೆ ಕೂಗಿದರು. ಚಿಕ್ಕ ಮಕ್ಕಳಾದಿಯಾಗಿಈ ಸಂಭ್ರಮದಲ್ಲಿ ಮಿಂದೆದ್ದರು. ದಾವಣಗೆರೆಯಲ್ಲಿ ಹೋಳಿ ಹಬ್ಬ ಎಂದರೆ ರಾಂ ಅಂಡ್‌ ಕೋ ವೃತ್ತದಲ್ಲಿ ಭರ್ಜರಿ ತಯಾರಿ ನಡೆದಿದೆ. ಅಲ್ಲಲ್ಲಿ ಈಗಾಗಲೇ ಭರ್ಜರಿ ಮೈಕ್‌ಸೆಟ್‌, ಬಣ್ಣ ಎರೆಚಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಂಡಿಪೇಟೆ, ಅಶೋಕ ರಸ್ತೆ, ಎವಿಕೆ ಕಾಲೇಜು ರಸ್ತೆ, ಗಡಿಯಾರ ಕಂಬ, ವಿಜಯಲಕ್ಷ್ಮಿ ರಸ್ತೆ… ಇತರೆಡೆ ವಿವಿಧ ಬಣ್ಣ, ಪಿಚಾರಿಗಳ ಮಾರಾಟ, ಖರೀದಿ ಭರಾಟೆ ಜೋರಾಗಿತ್ತು. ನೀರಿನ ಸಮಸ್ಯೆಯ ನಡುವೆಯೂ ದಾವಣಗೆರೆ ಹೋಳಿಗೆ ಸಜ್ಜಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next