Advertisement

ವೈವಿಧ್ಯವನ್ನು ಸಾರುವ ಕಲರ್ಸ್‌ ಆಫ್ ಇಂಡಿಯಾ

10:38 AM Oct 24, 2019 | mahesh |

ಶರನ್ನವರಾತ್ರಿಯ ಪ್ರಯುಕ್ತ ಉಡುಪಿ ಪರಿಸರದ ಸುಮಾರು ಐದು ದೇವಿ ದೇವಾಲಯಗಳಲ್ಲಿ, ಉಡುಪಿಯ ‘ದರ್ಪಣ ಸ್ಕೂಲ್‌ ಆಫ್ ಪರ್ಫಾರ್ಮಿಂಗ್‌ ಆರ್ಟ್ಸ್ ಸಂಸ್ಥೆಯ ಗುರು ಮತ್ತು ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೇರವೇರಿರಿದುವು. ವಿ|ರಮ್ಯಾ ಉಡುಪಿ ಮತ್ತು ವಿ| ರಕ್ಷಾ ಉಡುಪಿಯವರ ಸಾರಥ್ಯದಲ್ಲಿ ವಿದ್ಯಾರ್ಥಿನಿಯರು ಭರತನಾಟ್ಯ, ಕಥಕ್‌, ಜನಪದ ನೃತ್ಯಗಳನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

Advertisement

ಸಮೂಹ ನೃತ್ಯಗಳಲ್ಲಿ ವಿಶೇಷವಾದ ನೃತ್ಯವೆಂದರೆ ಕಲರ್ಸ್‌ ಆಫ್ ಇಂಡಿಯಾ. ಬೇರೆ ಬೇರೆ ರಾಜ್ಯಗಳ ಸುಮಾರು ಒಂಭತ್ತು ಜನಪದ ನೃತ್ಯಗಳನ್ನು ನಿರಂತರವಾಗಿ 32 ನಿಮಿಷಗಳ ಕಾಲ ಒಂದಾದ ಮೇಲೊಂದರಂತೆ ಪ್ರದರ್ಶಿಸುವುದೇ ಕಲರ್ಸ್‌ ಆಫ್ ಇಂಡಿಯಾ ನೃತ್ಯದ ವೈಶಿಷ್ಟತೆ. ಈ ವಿನೂತನ ನೃತ್ಯದಲ್ಲಿ 4 ರಿಂದ 15 ವಯಸ್ಸಿನ 25 ಮಕ್ಕಳು ಭಾಗವಹಿಸಿದ್ದರು. ಕರ್ನಾಟಕದ- ಕಂಸಾಳೆ, ಯಕ್ಷಗಾನ, ಅಸ್ಸಾಮಿನ ಬಿಹು, ಕಾಶ್ಮೀರದ ರೌಫ್, ಪಂಜಾಬಿನ ಬಾಂಗ್ರಾ, ರಾಜಸ್ಥಾನದ-ಕಲೆಲಿಯ ,ಚಿರ್ಮಿ, ಗುಜರಾತಿನ ದಾಂಡಿಯಾ, ಮಹಾರಾಷ್ಟ್ರದ ಲಾವಣಿ ಜನಪದ ನೃತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿನಿಯರು ಸಂಪ್ರದಾಯಿಕ ವೇಷಭೂಷಣಗಳನ್ನು ಚಾಕಚಕ್ಯತೆಯಿಂದ ಬದಲಿಸಿ ಪ್ರದರ್ಶಿಸಿದ್ದು ಆಕರ್ಷಕವಾಗಿತ್ತು.

ಅನುಪಮಾ ಕೋಟ

Advertisement

Udayavani is now on Telegram. Click here to join our channel and stay updated with the latest news.

Next