Advertisement

ಬಣ್ಣ ಬಣ್ಣ ಯಾವ ಬಣ್ಣ?

06:04 PM Jul 24, 2019 | mahesh |

ಮೇಜಿನ ಮೇಲೆ ಸಾಲಾಗಿ ಐದಾರು ಬಣ್ಣದ ಪೆನ್ಸಿಲ್‌ಗ‌ಳನ್ನು (ಕೆಂಪು, ಕಪ್ಪು, ನೀಲಿ, ಹಳದಿ, ಕಂದು) ಇಡಿ. (ಈ ಪೆನ್ಸಿಲ್‌ಗ‌ಳ ಮೈಬಣ್ಣ ಒಂದೇ ಇದ್ದರೆ ಚೆನ್ನ) ಪ್ರೇಕ್ಷಕರಲ್ಲಿ ಒಬ್ಬರನ್ನು ಕರೆದು ಒಂದು ಕಾಗದದ ತುಂಡನ್ನು ಕೊಟ್ಟು ಈ ರೀತಿಯಾಗಿ ಹೇಳಬೇಕು: “ನಾನು ಹಿಂದೆ ತಿರುಗಿದಾಗ ನೀವು ಯಾವುದಾದರೂ ಒಂದು ಪೆನ್ಸಿಲನ್ನು ಆರಿಸಿ ಈ ಕಾಗದದಲ್ಲಿ ಸುತ್ತಿ ನನಗೆ ಕೊಡಿ ಮತ್ತು ಉಳಿದ ಪೆನ್ಸಿಲ್‌ಗ‌ಳನ್ನು ನನಗೆ ಕಾಣದ ಹಾಗೆ ಮುಚ್ಚಿಡಿ.’ ಈ ಮಾತನ್ನು ಹೇಳಿದ ನಂತರ ನೀವು ಹಿಂದಕ್ಕೆ ಗೋಡೆಗೆ ಮುಖ ಮಾಡಿ ತಿರುಗಿ ನಿಂತುಕೊಳ್ಳಿ. ಅವರು, ನೀವು ಹೇಳಿದ ಸಲಹೆಗಳನ್ನು ಸರಿಯಾಗಿ ಪಾಲಿಸಿದ ನಂತರ ನೀವು ಮುಂದಕ್ಕೆ ತಿರುಗಿ. ಅವರು ಕಾಗದದಲ್ಲಿ ಸುತ್ತಿದ ಪೆನ್ಸಿಲಿನ ಪೊಟ್ಟಣವನ್ನು ತೆಗೆದುಕೊಂಡು ಎರಡೂ ಕೈಗಳನ್ನು ನಿಮ್ಮ ಹಿಂದಕ್ಕೆ ತೆಗೆದುಕೊಂಡು ಮಂತ್ರ ಉಚ್ಚರಿಸುತ್ತಿರುವಂತೆ ನಟಿಸಿ.

Advertisement

ಅದೇ ಸಮಯಕ್ಕೆ ಎಚ್ಚರಿಕೆಯಿಂದ ಕಾಗದವನ್ನು ಸ್ವಲ್ಪವಾಗಿ ಬಿಚ್ಚಿ ಪೆನ್ಸಿಲ್‌ನ ಮೊನೆಯಿಂದ ನಿಮ್ಮ ಬಲಗೈಯ ಹಿಂಭಾಗದಲ್ಲಿ ಪೆನ್ಸಿಲಿನಿಂದ ಗುರುತು ಮಾಡಿಕೊಳ್ಳಿ. ಪುನಃ ಪೆನ್ಸಿಲನ್ನು ಕಾಗದದಲ್ಲಿ ಸುತ್ತಿ ಕೈಯನ್ನು ಮುಂದೆ ತಂದು ಪೆನ್ಸಿಲಿನಿಂದ ಮಾಡಿದ ಗುರುತು ಪ್ರೇಕ್ಷಕರಿಗೆ ಕಾಣದ ಹಾಗೆ ಕೈಯನ್ನು ನಿಮ್ಮ ಕಡೆಗೆ ಹಿಡಿದು ಗುರುತು ಯಾವ ಬಣ್ಣದ್ದೆಂದು ತಿಳಿದುಕೊಳ್ಳಿ. ಅದರ ಆಧಾರದ ಮೇಲೆ ಪ್ರೇಕ್ಷಕ ಆರಿಸಿದ ಪೆನ್ಸಿಲ್‌ ಇಂಥದ್ದೇ ಬಣ್ಣದ್ದೆಂದು ಆತ್ಮವಿಶ್ವಾಸದಿಂದ ಹೇಳಿ. ನಂತರ ಪ್ರೇಕ್ಷಕರ ಮುಂದೆ ಕಾಗದವನ್ನು ಬಿಚ್ಚುತ್ತಾ ಪೆನ್ಸಿಲ್‌ಅನ್ನು ತೋರಿಸಿ, ಅದರಿಂದ ಕಾಗದದ ಮೇಲೆ ಗೀಚಿ ತೋರಿಸಿ. ಅದು ನೀವು ಹೇಳಿದ ಬಣ್ಣದ ಪೆನ್ಸಿಲ್ಲೇ ಆಗಿರುತ್ತದೆ.

ಉದಯ್‌ ಜಾದೂಗಾರ್‌

Advertisement

Udayavani is now on Telegram. Click here to join our channel and stay updated with the latest news.

Next