Advertisement

ಕಾರು –ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಆರು ಮಂದಿ ದುರ್ಮರಣ

12:41 PM Aug 05, 2022 | Team Udayavani |

ರಾಯಚೂರು: ಕಾರು ಮತ್ತು ಲಾರಿ ನಡುವಿನ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಆರು ಜನ ಸ್ಥಳದಲ್ಲೇ ದುರ್ಮರಣಕ್ಕೀಡಾದ ಘಟನೆ ಯಾದಗಿರಿಯ ಗುರುಮಿಠಕಲ್ ಬಳಿ ಸಂಭವಿಸಿದೆ.

Advertisement

ಕಾರು ಮತ್ತು ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರು ನಜ್ಜುಗುಜ್ಜಾಗಿದೆ.

ಒಂದು ವರ್ಷದ ಹೆಣ್ಣು ಮಗು ಸೇರಿ ಆರು ಜನ ಸಾವಿಗೀಡಾಗಿದ್ದಾರೆ. ಮೃತ ದುರ್ದೈವಿಗಳು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹಟ್ಟಿಯವರು.

ಇದನ್ನೂ ಓದಿ:ಬಾಯ್ತೆರದ ಭೂಮಿ… ಚಿಲಿಯಲ್ಲಿ ಭಾರೀ ಗಾತ್ರದ ನಿಗೂಢ ಕಂದಕ ಸೃಷ್ಟಿ: ವಿಡಿಯೋ ನೋಡಿ

ಹಟ್ಟಿ ಗ್ರಾಮದ ವಿದ್ಯುತ್ ಗುತ್ತಿಗೆದಾರ ವಾಜೀದ್ ಹುಸೇನ್ (35), ಅವರ ತಂದೆ ಮಜರ್ ಹುಸೇನ್ (72), ತಾಯಿ ನೂರ್ ಜಹಾನ್ (70), ಪತ್ನಿ ಹೀನಾ (30), ಮಕ್ಕಳಾದ ಉಮೇಜಾ (6 ತಿಂಗಳು), ಇಮ್ರಾನ್ (22) ಮೃತಪಟ್ಟಿದ್ದಾರೆ.

Advertisement

ತೆಲಂಗಾಣದ ಕೊಡಂಗಲ್ ನ ದರ್ಗಾಕ್ಕೆ ಜವಳ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಕಾರು ಮತ್ತು ಲಾರಿ ನಡುವೆ ಡಿಕ್ಕಿಯಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next