Advertisement

ಪ್ರಿಯಕರನ ಮುಂದೆಯೇ ಕಾಲೇಜು ಯುವತಿ ಮೇಲೆ ಸಾಮೂಹಿಕ ಬಲಾತ್ಕಾರ: ಐವರ ಬಂಧನ

01:14 PM Jan 14, 2023 | Team Udayavani |

ಚೆನ್ನೈ: ಪ್ರಿಯಕರನ ಮುಂದೆಯೇ ಯುವತಿಯೊಬ್ಬಳ ಮೇಲೆ ಸಾಮೂಹಿಕವಾಗಿ ಬಲಾತ್ಕಾರವೆಸಗಿರುವ ಘಟನೆ ತಮಿಳುನಾಡಿನಲ್ಲಿ ಗುರುವಾರ (ಜ.14 ರಂದು) ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಕಾಲೇಜು ಯುವತಿ ತನ್ನ ಪ್ರಿಯಕರನ ಜೊತೆ ತಿರುಗಾಟಕ್ಕೆಂದು ಹೊರಗಡೆ ಹೋಗಿದ್ದಾರೆ. ಅಲ್ಲಿಂದ ವಾಪಾಸ್‌ ಆಗುವ ವೇಳೆ ಕಾಂಚೀಪುರಂ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್‌ ಹಾಕಿಕೊಂಡಿದ್ದ ಮದ್ಯ ಸೇವಿಸಿದ ವ್ಯಕ್ತಿಯೊಬ್ಬ ಇಬ್ಬರನ್ನು ತಡೆದು ಬೆದರಿಸಿದ್ದಾನೆ. ಆ ಬಳಿಕ ಕೆಲ ಸಮಯದ ನಂತರ ನಾಲ್ವರು ಜೊತೆಗೂಡಿ ಜೋಡಿಯನ್ನು ಬೆದರಿಸಿದೆ. ಚೂರಿಯನ್ನು ತೋರಿಸಿ ಯುವತಿಗೆ ಕಿರುಕುಳ ನೀಡಿ, ಒಬ್ಬರ ಮೇಲೆ ಒಬ್ಬರಂತೆ ಬಲಾತ್ಕಾರವೆಸಗಿದ್ದಾರೆ.

ಪ್ರಿಯಕರನ ಮುಂದೆಯೇ ಯುವತಿಯ ಮೇಲೆ ಬಲಾತ್ಕಾರವೆಸಗಿದ ಆರೋಪಿಗಳ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಜೋಡಿ ದೂರು ದಾಖಲಿಸಿದ್ದು, ಪೊಲೀಸರು ಈ ಸಂಬಂಧ ಐವರನ್ನು ಬಂಧಿಸಿದ್ದಾರೆ. ಆರನೇ ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next