Advertisement
ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ 70 ಸರಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳಿವೆ. 3,80,061 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ಜಿಲ್ಲೆಗಳಲ್ಲಿ ಶೇ. 5ರಿಂದ ಶೇ. 6ರಷ್ಟು ವಿದ್ಯಾರ್ಥಿಗಳು ಇನ್ನೂ ಆನ್‌ಲೈನ್ ತರಗತಿ ಮತ್ತಿತರ ನೆಪವೊಡ್ಡಿ ಕಾಲೇಜು ಶಿಕ್ಷಣದಿಂದ ದೂರವಿದ್ದಾರೆ.
Related Articles
Advertisement
ಅವಕಾಶ ನೀಡಿತ್ತು:
ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಹಲವು ಬಾರಿ ದಾಖಲಾತಿ ಪ್ರಕ್ರಿಯೆಯ ದಿನಾಂಕವನ್ನು ವಿಸ್ತರಿಸ ಲಾಗಿತ್ತು. ಅರ್ಧಕ್ಕೆ ಕಾಲೇಜು ಬಿಟ್ಟ ವಿದ್ಯಾರ್ಥಿಗಳ ಮಾಹಿತಿಯನ್ನು ಆಯಾ ಕಾಲೇಜುಗಳ ಮೂಲಕ ಸಂಗ್ರಹಿಸಿ, ಅವರನ್ನು ಸಂಪರ್ಕಿಸುವ ಕಾರ್ಯ ಮಾಡಿದ್ದೇವೆ. ವಿದ್ಯಾರ್ಥಿ ಗಳು ಪುನಃ ಕಾಲೇಜಿಗೆ ಬರಲು ಒಪ್ಪುತ್ತಿಲ್ಲ. ಕುಟುಂಬದ ಸದಸ್ಯರ ಮೂಲಕ ಮನವೊಲಿಸುವ ಕಾರ್ಯ ಮಾಡಿದ್ದೇವೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಡ್ರಾಪ್‌ಔಟ್ ಕಾರಣ :
ಕೊರೊನಾ ಸಂದರ್ಭದ ಆರ್ಥಿಕ ಸಂಕಷ್ಟದಿಂದ ಸ್ಥಳೀಯವಾಗಿ ಲಭ್ಯವಾದ ಉದ್ಯೋಗಕ್ಕೆ ಸೇರಿಕೊಂಡಿ ರುವುದು, ಹೊರ ಜಿಲ್ಲೆಗಳಿಗೆ ಉದ್ಯೋಗಕ್ಕೆ ಹೋಗಿರುವುದು, ಆನ್‌ಲೈನ್ ತರಗತಿ ಪರಿಣಾಮಕಾರಿಯಾಗಿ ನಡೆಯದೆ ಇರುವುದು, ಆನ್‌ಲೈನ್ ಅಥವಾ ಆಫ್ಲೈನ್ ತರಗತಿ ಆಯ್ಕೆ ಅವಕಾಶ ನೀಡಿರುವುದು, ಆನ್‌ಲೈನ್ ತರಗತಿಗೆ ಇಲಾಖೆಯಿಂದ ಸಿದ್ಧಪಡಿಸಿದ ತಂತ್ರಾಂಶ ಗ್ರಾಮೀಣ ಭಾಗದಲ್ಲಿ ಪೂರ್ಣಪ್ರಮಾಣದಲ್ಲಿ ಬಳಕೆಗೆ ಲಭ್ಯವಾಗದೆ ಇರುವುದು, ಕುಟುಂಬದ ಆರ್ಥಿಕ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಪದವಿ ಶಿಕ್ಷಣ ಮೊಟಕುಗೊಳಿಸಿದ್ದಾರೆ.
ಎಲ್ಲಿ, ಎಷ್ಟು ಕಾಲೇಜು? :
ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕೇಂದ್ರ ವ್ಯಾಪ್ತಿಯಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಿವೆ. ಒಟ್ಟು 70 ಕಾಲೇಜು ಗಳಿದ್ದು, ಇದ ರಲ್ಲಿ 37 ಸರಕಾರಿ, 33 ಖಾಸಗಿ ಅನು ದಾನಿತ ಕಾಲೇಜುಗಳು. 3,80,061 ವಿದ್ಯಾರ್ಥಿ ಗಳಿದ್ದಾರೆ. ದಕ್ಷಿಣ ಕನ್ನಡದಲ್ಲಿ ತಲಾ 19 ಸರಕಾರಿ, ಖಾಸಗಿ ಅನುದಾನಿತ ಕಾಲೇಜುಗಳು; ಉಡುಪಿಯಲ್ಲಿ 12 ಸರಕಾರಿ, 13 ಖಾಸಗಿ ಅನುದಾನಿತ ಕಾಲೇಜು, ಕೊಡಗಿನಲ್ಲಿ 6 ಸರಕಾರಿ ಹಾಗೂ 1 ಖಾಸಗಿ ಅನುದಾನಿತ ಕಾಲೇಜಿದೆ.
ಇಲಾಖೆಯ ನಿರ್ದೇ ಶನದಂತೆ ವಿದ್ಯಾ ಭ್ಯಾಸ ವನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ವಿದ್ಯಾರ್ಥಿಗಳು ಪುನಃ ದಾಖ ಲಾಗಲು ಅವಕಾಶ ನೀಡಲಾಗಿತ್ತು. ಆಯಾ ಕಾಲೇಜುಗಳ ಮೂಲಕ ಅಂತಹ ವಿದ್ಯಾರ್ಥಿ ಗಳನ್ನು ಪತ್ತೆ ಹಚ್ಚುವ ಕಾರ್ಯವೂ ನಡೆದಿದೆ.– ಶ್ರೀಧರಬಾಬು,ಜಂಟಿ ನಿರ್ದೇಶಕ, ಮಂಗಳೂರು ಪ್ರಾದೇಶಿಕ ಕೇಂದ್ರ
–ರಾಜು ಖಾರ್ವಿ ಕೊಡೇರಿ