ಗುಟ್ರ್ ಗೂऽऽऽऽऽ ಎನ್ನುವ ವಿಶೇಷ ಶೀರ್ಷಿಕೆ ಒಂಥರಾ ಕುತೂಹಲ ಮೂಡಿಸುತ್ತದೆ. ಕೇವಲ ಟೈಟಲ್ ಮಾತ್ರವಲ್ಲ, ಈ ಕಿರು ಚಿತ್ರವೂ ಸಖತ್ ಆಗಿದೆ.
ಕಿಷನ್ ಬದರಿನಾಥ ಚಿತ್ರಕ್ಕೆ ಕಥೆ ಹಾಗೂ ನಿರ್ದೇಶನ , ಮಹೇಶ್ ಸಿಂಹ ಸಿನೆಮಾಟೋಗ್ರಫಿ, ಸಂಗೀತ ಮತ್ತು ಹಿನ್ನೆಲೆ ಧ್ವನಿ ಯಲ್ಲಿ ವಿಶ್ವೇಶ್ ಭಟ್ ಸಾಥ್ ನೀಡಿದ್ದಾರೆ .
ಓದಿ : ವೀಕೆಂಡ್ ಕರ್ಫ್ಯೂ: ಮಾಂಸದಂಗಡಿಗಳಲ್ಲಿ ಫುಲ್ ರಶ್, ಇನ್ನು ರಸ್ತೆಗಿಳಿದರೆ ಬೀಳುತ್ತೆ ಲಾಠಿ ಏಟು
ಶ್ರೀಧರ್ ಕೆ ಎಸ್ ಹಾಗೂ ಗಾನವಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಇಬ್ಬರ ನಟನೆಗೆ ವೀಕ್ಷಕರು ಫುಲ್ ಫಿದಾ ಆಗಿದ್ದಾರೆ. 14.57 ನಿಮಿಷದ ಈ ಕಿರು ಚಿತ್ರ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸಿ, ಮುಗಿಸುವುದೇ ತಿಳಿಯುವುದಿಲ್ಲ. ಅಂತಿಮ ಮನಶಾಸ್ತ್ರ ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಾಗಿ ಬರುವ ಡಾ ಶ್ಯಾಮ್ ಪ್ರಸಾದ್, ಕ್ಲಾಸ್ ನಲ್ಲಿ ಅವರು ವಿದ್ಯಾರ್ಥಿಗಳಿಂದ ಅನುಭವಿಸುವ ತೊಂದರೆ ಈ ಶಾರ್ಟ್ ಫಿಲ್ಮ್ ನ ಕಥೆ.
ಅದರಲ್ಲಿ ಒಬ್ಬ ವಿದ್ಯಾರ್ಥಿ ಅಂತೂ ಮಧ್ಯದಲ್ಲಿ ಮಾಡುವ “ಗುಟ್ರ್ ಗೂऽऽऽऽऽ” ಶಬ್ದ ಹಾಗೂ ಅದಕ್ಕೆ ಕೊಂಡ ಪರಿಹಾರ, ಕ್ಲಾಸ್ ನಲ್ಲಿ ಕಳ್ಳನನ್ನು ಹಿಡಿದ ರೀತಿ ಇದೆಲ್ಲ ಏನೆಂದು ತಿಳಿಯಲು ಚಿತ್ರವನ್ನು ನೋಡಬೇಕು.
ಗಾನವಿ ನಟನೆ ಅಂತೂ ಅತ್ಯದ್ಭುತ. ಈಗಾಗಲೇ ಯುಟ್ಯೂಬ್ ನಲ್ಲಿ ಬಾರಿ ಸಂಖ್ಯೆಯಲ್ಲಿ ಜನ ವೀಕ್ಷಿಸಿ, ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಬಹುತೇಕ ಎಲ್ಲಾ ವೀಕ್ಷಕರು ಚಿತ್ರದ ಕ್ಲೈಮಾಕ್ಸ್ ಗೆ ಭೇಷ್ ಎಂದಿದ್ದಾರೆ. ಇಂತಹ ವಿಭಿನ್ನ ಕಿರು ಚಿತ್ರ ಕನ್ನಡದಲ್ಲಿ ಇನ್ನು ಮುಂದೆಯೂ ಬರಲಿ ಎನ್ನುವುದು ವೀಕ್ಷಕರ ಅಭಿಪ್ರಾಯವಾಗಿದೆ.
-ತೇಜಸ್ವಿನಿ ಆರ್ ಕೆ
ಎಸ್ ಡಿ ಎಂ ಕಾಲೇಜ್, ಉಜಿರೆ.
ಓದಿ : ಸಿರೋ ಸಮೀಕ್ಷೆ : ಕೋವಿಡ್ ವಿರುದ್ಧ ಹೋರಾಡಲು ಮಹಿಳೆಯರಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಇದೆ!