ವಾಷಿಂಗ್ಟನ್: ಮಂಗಳನ ಪರಿಸರದ ಅಧ್ಯಯನ ನಡೆಸುತ್ತಿರುವ ಅಮೆರಿಕ ಬಾಹ್ಯಾಕಾಶ ಸಂಸ್ಥೆಯ (ನಾಸಾ) ಪರ್ಸೆರ್ವೆನ್ಸ್ ಮಾರ್ಸ್ ರೋವರ್ ಗಗನನೌಕೆ, ಅಲ್ಲಿನ ಕಲ್ಲಿನ ಕೆಲವು ಮಾದರಿಗಳನ್ನು ಸಂಗ್ರಹಿಸಿದೆ.
ಕಲ್ಲುಬಂಡೆಗಳಿಂದ ಸಂಗ್ರಹಿಸಲಾಗಿರುವ ಮಾದರಿಗಳನ್ನು 2030ರಲ್ಲಿ ತಾನು ಭೂಮಿಗೆ ಹಿಂದಿರುಗುವ ವೇಳೆ ಅದನ್ನು ತನ್ನೊಂದಿಗೆ ತರಲಿದೆ. ಅಂದಹಾಗೆ, ಮಂಗಳನ ಅಧ್ಯಯನದ ವೇಳೆ ಮಾದರಿಗಳನ್ನು ಕಲೆ ಹಾಕಿದ್ದು ಇದೇ ಮೊದಲು.
ರೋವರ್ ನಡೆಸಿರುವ ಪ್ರಾಥಮಿಕ ಪರೀಕ್ಷೆಯಲ್ಲಿ ಈ ಕಲ್ಲುಗಳ ಮೇಲೆ ಲವಣದ ಪರದಗಳಿದ್ದು, ಇವುಗಳು ಭೂಗರ್ಭದ ನೀರು ಇವುಗಳ ಮೇಲೆ ಹರಿದಿರುವುದರಿಂದ ಆಗಿರುವಂಥದ್ದು. ಮಂಗಳನಲ್ಲಿ ನೀರು ಇತ್ತು ಎಂದಾದರೆ, ಗಾಗಿ, ಅಲ್ಲಿ ಹಿಂದೆ ಜೀವಿಸಲು ಅನುಕೂಲವಾದ ವಾತಾವರಣ ಇತ್ತು ಎಂಬ ಸಿದ್ಧಾಂತಗಳಿಗೆ ಇದು ಪುಷ್ಟಿ ನೀಡುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಒಂದೇ ಹೆಬ್ಬಂಡೆಯಿಂದ ಒಟ್ಟು ಎರಡು ಮಾದರಿಯ ಕಲ್ಲುಗಳನ್ನು ರೋವರ್ ಕಲೆಹಾಕಿದೆ. ಸೆ. 6ರಂದು ಕಲೆ ಹಾಕಿದ ಕಲ್ಲಿಗೆ ವಿಜ್ಞಾನಿಗಳು, ಮೌಂಟ್‌ಡೆನಿಯರ್ ಎಂದು ಹೆಸರಿಟ್ಟಿದ್ದಾರೆ. ಸೆ. 8ರಂದು ಕಲೆಹಾಕಲಾಗಿರುವ ಕಲ್ಲಿಗೆ ಮಾಂಟಾಗ್ನಾಕ್ ಎಂದು ನಾಮಕರಣ ಮಾಡಲಾಗಿದೆ.
ಎರಡೂ ಕಲ್ಲುಗಳು ಪೆನ್ಸಿಲ್‌ಗಿಂತ ಕೊಂಚ ದಪ್ಪ ಹಾಗೂ ತಲಾ ಆರು ಸೆಂ.ಮೀ.ನಷ್ಟು ಉದ್ದ ಇವೆ. ಇವುಗಳಿಗೆ ಗಾಜಿನಂತೆ ಹೊಳೆಯುವ ಗುಣವಿದೆ. ಇವು ಜ್ವಾಲಾಮುಖೀಗೆ ತುತ್ತಾಗಿರುವ ಕಲ್ಲುಗಳಾಗಿರಬಹುದು. ಬಿಸಿಯಾದ ಲಾವಾರಸವು ಇವುಗಳ ಮೇಲೆ ಹರಿದಿರುವುದರಿಂದ ಈ ಕಲ್ಲುಗಳು ಈ ಸ್ವರೂಪ ಪಡೆದಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.