Advertisement
ಕಳೆದ ಫೆ.3ರಿಂದ 11ರವರೆಗೆ 9 ದಿನಗಳ ಅವಧಿ ಯಲ್ಲಿ 4,98,265 ಪ್ರಕರಣ ವಿಲೇವಾರಿ ಯಾಗುವ ಮೂಲಕ 12,30,58,650 ರೂ. ದಂಡ ಸಂಗ್ರಹವಾಗಿದೆ. ಇಷ್ಟು ದಿನ ರಸ್ತೆ ಬದಿ ನಿಂತು ವಾಹನ ತಪಾಸಣೆ ಮಾಡುತ್ತಿದ್ದ ಸಂಚಾರ ಪೊಲೀಸರನ್ನು ಕಂಡು ಬಿಧ್ದೋಡುತ್ತಿದ್ದ ಜನ, ಕಳೆದ ವಾರದಲ್ಲಿ ಪೊಲೀಸರನ್ನೇ ಬೆನ್ನತ್ತಿ, ದಂಡ ಕಟ್ಟಿದ ಪ್ರಸಂಗ ಸಾಮಾ ನ್ಯವಾಗಿತ್ತು. ಕೆಲವರು ರಸ್ತೆ ಬದಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಯನ್ನು ಹಿಡಿದರೆ, ಇನ್ನೂ ಕೆಲವರು ಸಂಚಾರ ಠಾಣೆಗಳಿಗೆ ತೆರಳಿ ತಮ್ಮ ವಾಹನಗಳಿಗೆ ವಿಧಿಸಲಾಗಿದ್ದ ದಂಡ ಪಾವತಿಸಿದರು.
Related Articles
Advertisement
ಅವಧಿ ವಿಸ್ತರಣೆಗೆ ಒತ್ತಾಯ: ವಾಹನಗಳ ಸವಾರರಿಂದ ಶೇ.50 ರಷ್ಟು ರಿಯಾಯ್ತಿಯಲ್ಲಿ ಸರ್ಕಾರ ದಂಡ ಪಾವತಿ ಮಾಡಿಕೊಟ್ಟಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಕಡಿಮೆ ಅವಧಿ ಇರುವುದರಿಂದ ಇನ್ನೂ ಸಾಕಷ್ಟು ಮಂದಿಗೆ ದಂಡ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದಂಡ ಪಾವತಿ ಇರುವ ಕಾಲಾವಧಿಯನ್ನು ಮತ್ತೆ ಒಂದು ವಾರಕ್ಕೆ ವಿಸ್ತರಿಸಬೇಕೆಂದು ಮನವಿ ಮಾಡಿದ್ದಾರೆ.
ಕಳೆದ 9 ದಿನದಲ್ಲಿ ನಗರದ ವಿವಿಧ ಸಂಚಾರ ಠಾಣೆ, ವಾಹನ ತಪಾಸಣೆ ಮಾಡುವ ಪೊಲೀಸರ ಬಳಿ ಹಾಗೂ ಆಟೋ ಮೇಷನ್ ಸೆಂಟರ್‌ಗೆ ಸಾವಿರಾರು ಜನ ತೆರಳಿ ದಂಡ ಪಾವತಿಸಿ ದ್ದಾರೆ. ಈ ಮೂಲಕ 12.30 ಕೋಟಿ ರೂ. ದಂಡ ಸಂಗ್ರಹವಾಗಿದೆ. – ಪರುಶುರಾಮಪ್ಪ, ಎಸಿಪಿ ಸಂಚಾರ ವಿಭಾಗ ಮೈಸೂರು ನಗರ
-ಸತೀಶ್ ದೇಪುರ