Advertisement

Collection of fines: ಆಟೋ ಚಾಲಕರಿಂದ 3.36 ಲಕ್ಷ ದಂಡ ವಸೂಲಿ

12:20 PM Sep 25, 2023 | Team Udayavani |

ಬೆಂಗಳೂರು: ಆಟೋ ಚಾಲಕರ ವಿರುದ್ಧ ನಿರಂತರವಾಗಿ ದೂರುಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 670 ಪ್ರಕರಣಗಳನ್ನು ದಾಖಲಿಸಿ, 3.36 ಲಕ್ಷ ರೂ. ದಂಡ ವಸೂಲಿ ಮಾಡಿದ್ದಾರೆ.

Advertisement

ಸೆ.14 ರಿಂದ 23ರವರೆಗೆ ವಿಶೇಷ ಕಾರ್ಯಾಚರಣೆ ನಡೆಸಿದ್ದು, ಈಶಾನ್ಯ ಉಪವಿಭಾಗದಲ್ಲಿ 141 ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 72 ಸಾವಿರ ರೂ., ಉತ್ತರ ವಿಭಾಗದಲ್ಲಿ 213 ಪ್ರಕರಣದಲ್ಲಿ 1.06 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಈಶಾನ್ಯ ಉಪವಿಭಾಗದಲ್ಲಿ ಕರೆದ ಕಡೆ ಬಾರದ 95 ಚಾಲ ಕರ 47,500 ರೂ. ಹಾಗೂ ಉತ್ತರದ 221 ಪ್ರಕರಣದಲ್ಲಿ 1.10 ಲಕ್ಷ ದಂಡ ವಿಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next