Advertisement

ವರ್ತಕರಿಂದ ಅಗತ್ಯ ವಸ್ತು ಸಂಗ್ರಹ

02:54 PM Apr 02, 2020 | Suhan S |

ತುಮಕೂರು: ಕೋವಿಡ್ 19 ವೈರಸ್‌ ಹರಡದಂತೆ ತಡೆ ಗಟ್ಟಲು ಲಾಕ್‌ಡೌನ್‌ ಘೋಷಣೆ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ನಿರ್ಗತಿಕರು, ಬಡವರು, ಕೂಲಿಕಾರ್ಮಿಕರಿಗೆ ನೀಡಲು ಶಾಸಕ ಜಿ.ಬಿ. ಜ್ಯೋತಿಗಣೇಶ್‌ ನೇತೃತ್ವದಲ್ಲಿ ನಗರದ ಮಂಡಿಪೇಟೆಯಲ್ಲಿ ವರ್ತಕರಿಂದ ದಿನಸಿ ಪದಾರ್ಥಗಳನ್ನು ಸಂಗ್ರಹ ಮಾಡಲಾಯಿತು.

Advertisement

ಶಾಸಕ ಜ್ಯೋತಿಗಣೇಶ್‌ ಮಂಡಿ ಪೇಟೆಯ ಪ್ರತಿ ಅಂಗಡಿ ಮಳಿಗೆಗೆ ಖುದ್ದಾಗಿ ಭೇಟಿ ನೀಡಿ ಸಂಕಷ್ಟದಲ್ಲಿರುವವರಿಗೆ ಅಗತ್ಯ ವಸ್ತುಗಳನ್ನು ನೀಡ ಬೇಕೆಂದು ವರ್ತಕರಲ್ಲಿ ಮನವಿ ಮಾಡಿ ಮಾತನಾಡಿ, ವರ್ತಕರೆಲ್ಲಾ ತುಂಬು ಹೃದಯದಿಂದ ದಿನಸಿ ಪದಾರ್ಥಗಳನ್ನು ನೀಡಲು ಮುಂದೆ ಬಂದಿದ್ದು, ಸಂಗ್ರಹಿಸಿದ ದಿನಸಿಯನ್ನು ಕ್ರೋಢಿಕರಿಸಿ ಅರ್ಹರಿಗೆ ವಿತರಿಸಲಾಗುವುದು ಎಂದರು.

ನಗರದ ವೀರಶೈವ ಕಲ್ಯಾಣ ಮಂಟಪ, ಅಯ್ಯಪ್ಪಸ್ವಾಮಿ ಮಂದಿರ, ಶಂಕರಮಠ, ಬ್ರಾಹ್ಮಣರ ವಸತಿ ನಿಲಯ ಮತ್ತಿ ತರ ಕಡೆ ದಾನಿಗಳಿಂದ ಸಂಗ್ರಹಿಸಿದ ದವಸ ಧಾನ್ಯ ಗಳನ್ನು ಬಳಸಿ ತಯಾರಿಸಿದ ಊಟವನ್ನು ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಪೂರೈಸಲಾಗುತ್ತಿದೆ ಎಂದು ತಿಳಿಸಿದರು.

ಸಮಾಜ ಸೇವಕ ಶ್ರೀ ಭಗವಾನ್‌ ರೈಸ್‌ ಇಂಡಸ್ಟ್ರೀಸ್‌ನ ರಮೇಶ್‌ ಬಾಬು ಮಾತನಾಡಿ, ಹಸಿದವರಿಗೆ ಅನ್ನ ನೀಡುವುದು ಪುಣ್ಯದ ಕೆಲಸ. ಇಂತಹ ಕಾರ್ಯಕ್ಕೆ ವರ್ತಕರು ಅಗತ್ಯವಿರುವ ದಿನನಿತ್ಯದ ವಸ್ತುಗಳನ್ನು ನೀಡಲು ಮುಂದೆ ಬಂದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಉಪವಿಭಾಗಾಧಿಕಾರಿ ಅಜಯ್‌ ಮಾತನಾಡಿ, ವರ್ತಕರಿಗೆ ದಿನಸಿ ಪದಾರ್ಥಗಳ ನೆರವು ನೀಡುವ ಮನೋ ಭಾವವಿದ್ದರೂ, ಹೇಗೆ ನೀಡ ಬೇಕೆಂಬ ಮಾರ್ಗ ತಿಳಿದಿರಲಿಲ್ಲ. ಶಾಸಕರೇ ಖುದ್ದಾಗಿ ಅಂಗಡಿ ಮಾಲೀಕರನ್ನು ಭೇಟಿ ಮಾಡಿ ದಿನಸಿ ಪದಾರ್ಥಗಳನ್ನು ನಿರ್ಗತಿಕರಿಗೆ ಹೇಗೆ ತಲುಪಿಸಬೇಕೆಂಬ ಮಾಹಿತಿ ನೀಡಲಾಗಿದೆ. ಸಂಕಷ್ಟದಲ್ಲಿರುವವರಿಗೆ ಧನ ಸಹಾಯ ಮಾಡಲಿಚ್ಛಿಸುವವರು ಜಿಲ್ಲಾಡಳಿತವನ್ನು ಸಂಪರ್ಕಿಸಬಹುದಾಗಿದೆ ಎಂದು ಮನವಿ ಮಾಡಿದರು. ತಹ ಶೀಲ್ದಾರ್‌ ಮೋಹನ್‌, ಸಮಾಜ ಸೇವಕರು, ಸ್ವಯಂ ಸೇವಕರು, ವರ್ತಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next