ಶ್ರೀನಿವಾಸಪುರ: ತಾಲೂಕಿನ ಮೊಗಿಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕಶಾಲೆಯಲ್ಲಿ ಕಟ್ಟಡ ಕುಸಿತವಾಗಿ ಉಳಿದಕೊಠಡಿಗಳು ಬಿರಕು ಬಿಟ್ಟು ಅಪಾಯದ ನಡುವೆ ಶಾಲಾರಂಭದ ದಿನ ಮಕ್ಕಳು ಮರದ ಕೆಳಗೆ ಪಾಠ ಕೇಳಿದರು.
ಶ್ರೀನಿವಾಸಪುರ ತಾಲೂಕಿನಲ್ಲಿ ಶಾಲಾ ಪ್ರಾರಂಭೋತ್ಸವವಕ್ಕೆ ಮಕ್ಕಳು ಸಡಗರದಿಂದಆಗಮಿಸಿದರೂ ಕೂರಲು ಕೊಠಡಿಗಳಿಲ್ಲ ಕಳೆದ ನವಂಬರ್ ಮಾಹೆಯಲ್ಲಿ ರಜಾ ದಿನವಾದ ಭಾನುವಾರ ಕಟ್ಟಡ ಕುಸಿದು ಬಿದ್ದಿರುವುದರಿಂದ ಅನೇಕ ಎಳೆಯ ಮಕ್ಕಳ ಜೀವ ಉಳಿದಂತಾಗಿದೆ.
ಅದೃಷ್ಟವ ಶಾತ್ ಭಾನುವಾರ ಕಟ್ಟಡ ಕುಸಿದು ಬಿದ್ದಿದೆ. ಇದರಿಂದ ಮಕ್ಕಳು ಪಾರಾಗಿದ್ದಾರೆ ಈ ಘಟನೆಯಿಂದ ತಿಳಿದು ಬಂದಿದೆ. ಕೊಠಡಿ ಉರಳಿದ ಕಟ್ಟಡಕ್ಕೆ ಒಂದೇ ಗೋಡೆಯಿರುವುದರಿಂದ ಉಳಿದ ಕೊಠಡಿಗಳು ಬಿರಕು ಬಿಟ್ಟು ಮಳೆ ನೀರು ಸೋರಿಕೆಯಾಗಿ ಇಂದೋ ನಾಳೆ ಬೀಳುವಂತಾಗಿದೆ ಇದರಿಂದ ಮಕ್ಕಳನ್ನು ಶಾಲೆಯ ಆವರಣದ ಮರದ ಕೆಳಗೆ ಪಾಠ ಮಾಡುವಂತಾಗಿದೆ.
ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ, ತಾಪಂ ಇಒ ಎಸ್. ಆನಂದ್ ರವರು ಮಂಗಳವಾರ ಭೇಟಿ ಪರಿಶೀಲನೆ ನಡೆಸಿದರು. ಶಾಸಕರ ಅನುದಾನ ದಲ್ಲಿ ಶೀಘ್ರದಲ್ಲಿಯೇ ಕೊಠಡಿ ನಿರ್ಮಾಣ ಮಾಡ ಲಾಗುತ್ತದೆ ಎಂದರು.
ಬಿಇಓ ಉಮಾ ದೇವಿ, ಬಿಆರ್‌ಸಿ ಸಂಯೋಜಕಿ ಕೆ.ಸಿ.ವಸಂತ,ಸಿಆರ್‌ಪಿ ಮಮತ, ಶಾಲೆಯ ಶಿಕ್ಷಕರು ಗ್ರಾಮಸ್ಥರು ಹಾಜರಿದ್ದರು.
ಮಕ್ಕಳ ಹಿತದೃಷ್ಟಿಯಿಂದ ಗ್ರಾಮದ ಮನೆಯಲ್ಲಿ ಮಕ್ಕಳ ಪಾಠ ಪ್ರವಚನಗಳನ್ನು ನಡೆಸಲುಅದರ ಬಾಡಿಗೆ ತಾಪಂನಿಂದಭರಿಸಲಾಗುತ್ತದೆ. ಹಾಗೆಯೇಗ್ರಾಮದಲ್ಲಿ ಮಾದರಿ ಅಂಗನವಾಡಿಕಟ್ಟಡ ನಿರ್ಮಾಣಕ್ಕೆ ಪ್ರಾರಂಬಿಸಲಾಗುತ್ತದೆ. ಜೊತೆಗೆಅಡುಗೆ ಕೋಣೆ, ಅದೇ ರೀತಿಶಾಲೆಯ ಒಂದು ಭಾಗದಕಾಂಪೌಂಡ್ ನಿರ್ಮಿಸಲಾಗುವುದು – ಆನಂದ್, ಇಒ