Advertisement

ಗಣರಾಜ್ಯೋತ್ಸವ: ನೃತ್ಯ ಮಾಡುವಾಗಲೇ ಕುಸಿದು ಬಿದ್ದು ನೌಕರ ಮೃತ್ಯು

01:03 PM Jan 26, 2023 | Team Udayavani |

ಸಿಂಧನೂರು:  ನಗರದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ 74ನೇ ಗಣರಾಜ್ಯೋತ್ಸವದ ವೇಳೆ ಕೋಲಾಟ ಆಡುತ್ತಿದ್ದ ನೌಕರ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಜ.26ರ ಗುರುವಾರ ನಡೆದಿದೆ.

Advertisement

ಸ್ಥಳೀಯ ಸರಕಾರಿ ಆಸ್ಪತ್ರೆಯ ನೌಕರ ಮಹಾಂತೇಶ ಪೂಜಾರ್ (40) ಮೃತ.

ಗರಡು ಗಮನ ಕೀರ್ತನೆಗೆ ತಂಡದೊಟ್ಟಿಗೆ ಕೋಲಾಟದಲ್ಲಿ ನಿರತರಾಗಿದ್ದಾಗ ದಿಢೀರ್ ಮೈದಾನದಲ್ಲೇ ಕುಸಿದು ಬಿದ್ದರು. ತಕ್ಷಣವೇ ಅವರನ್ನು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ನಗರಸಭೆಯ ಕಾರಿನಲ್ಲಿ ಆಸ್ಪತ್ರೆಗೆ ಕರೆ ತಂದರು.

ಆಸ್ಪತ್ರೆಗೆ ಕರೆ ತರುವ ಮುನ್ನವೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next