ಕೂಳ್ಳೆಗಾಲ: ಪಟ್ಟಣದ ಹೃದಯಭಾಗದಲ್ಲಿರುವ ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನವು ವಿಶಾಲವಾಗಿದ್ದು, ಬೆಳಗ್ಗೆ ಹಾಗೂ ಸಂಜೆ ನೂರಾರು ಮಂದಿ ವಾಯುವಿಹಾರಕ್ಕೆ ಆಗಮಿಸುವರು. ಆರೇಳು ಎಕರೆ ವಿಸ್ತೀರ್ಣ ದಲ್ಲಿರುವ ಈ ಮೈದಾನವು ವಾಯು ವಿಹಾರಕ್ಕೆ ಹೇಳಿ ಮಾಡಿದ ತಾಣವಾಗಿದ್ದು, ಇಲ್ಲಿ ವಾಕಿಂಗ್ ಪಾತ್ ಹಾಗೂ ವಿಶ್ರಾಂತಿ ಪಡೆಯುವ ಬೆಂಚ್‌ಗಳನ್ನು ಕಲ್ಪಿಸಿದರೆ ಸಾಕಷ್ಟು ಅನುಕೂಲ ವಾಗಲಿದೆ.
ಪಟ್ಟಣದ ಮುಡಿಗುಂಡ ಗುರುಕಾರ್ ಸುಬ್ಬಪ್ಪ ವೀರಪ್ಪ ಅವರು 1956ರಲ್ಲಿ ಸುಮಾರು 10 ಎಕರೆ ಜಮೀ ನನ್ನು ದಾನವಾಗಿ ನೀಡಿ ಇಲ್ಲಿ ಕಾಲೇಜು ನಿರ್ಮಿಸಿದ್ದರು. 3 ಎಕರೆ ಪ್ರದೇಶದಲ್ಲಿ ಕಟ್ಟಡಗಳಿದ್ದು, ಉಳಿದ ಏಳು ಎಕರೆ ಪ್ರದೇಶವನ್ನು ಮೈದಾನವನ್ನಾಗಿ ಮಾಡಲಾಗಿದೆ. ಸಾಕಷ್ಟು ವಿಶಾಲವಾಗಿರುವ ಈ ಜಾಗದಲ್ಲಿ ಪ್ರತಿದಿನ ಬೆಳ ಗಿ ನ ಜಾವ ವೃದ್ಧರು, ಕ್ರೀಡಾ ಪ ಟು ಗಳು ಮತ್ತು ವಿವಿಧ ಕಾಯಿ ಲೆ ಗ ಳಿಗೆ ಒಳ ಗಾ ದ ವರು ವಾಯು ವಿ ಹಾ ರ ಹಾಗೂ ವ್ಯಾಯಮ ಮಾಡುವರು. ಮೈದಾನ ಸಮತಟ್ಟು ಇಲ್ಲದೆ ಉಬ್ಬು ತಗ್ಗುಗಳಿಂದ ಕೂಡಿದೆ. ಇಲ್ಲಿ ವಯೋವೃದ್ಧರು ಹಾಗೂ ಮಹಿಳೆಯರು ಓಡಾಡಲು ತುಸು ಆಯಾಸ ಪಡುತ್ತಾರೆ. ಹೀಗಾಗಿ ಈ ಮೈದಾನದ ನಿರ್ದಿಷ್ಟ ಪ್ರದೇಶದಲ್ಲಿ ವಾಕಿಂಗ್ ಪಾತ್ ನಿರ್ಮಿಸಿದರೆ ಸುಲಲಿತವಾಗಿ ವಾಯು ವಿಹಾರ ಮಾಡಲು ಅನುಕೂಲವಾಗಲಿದೆ. ಜೊತೆಗೆ ಕ್ರೀಡಾಪಟುಗಳು ಹಾಗೂ ಯುವಕರು ಬೆಳಗ್ಗೆ ಹಾಗೂ ಸಂಜೆ ವ್ಯಾಯಾಮ, ಯೋಗ, ಓಟ ಮತ್ತಿತರ ದೈಹಿಕ ಕಸರತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವರು. ಅವರು ಬಳಲಿದಾಗ ಕುಳಿತುಕೊಳ್ಳಲು ಸಮರ್ಪಕ ವಾದ ಜಾಗವಿಲ್ಲದೇ ನೆಲವನ್ನೇ ಆಶ್ರಯಿಸಬೇಕಾಗಿದೆ. ಹೀಗಾಗಿ ಮೈದಾನದಲ್ಲಿ ಅಲ್ಲಲ್ಲಿ ಕಲ್ಲಿನ ಬೆಂಚ್‌ಗಳನ್ನು ನಿರ್ಮಿಸಿದರೆ ವೃದ್ಧರು, ಕ್ರೀಡಾಪಟುಗಳು ವಿಶ್ರಾಂತಿ ಪಡೆದಕೊಳ್ಳಲು ಸಹಾಯವಾಗಲಿದೆ.
ಪಟ್ಟಣದಲ್ಲಿರುವ ಈ ಪಿಯು ಕಾಲೇಜು ಉತ್ತಮ ಹೆಸರು ಪಡೆದಿದ್ದು, ಇಲ್ಲಿ ವ್ಯಾಸಂಗ ಮಾಡಿದವರು ಹಲವು ಕ್ಷೇತ್ರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಶಾಸಕರು ಸೇರಿದಂತೆ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತಾ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಈ ಕಾಲೇಜು ಮೈದಾನದಲ್ಲಿ ರಾಜಕೀಯ, ಧಾರ್ಮಿಕ ಸಭೆ-ಸಮಾರಂಭಗಳು ಯಶಸ್ವಿ ಯಾಗಿ ನಡೆಯುತ್ತವೆ. ಅದೇ ರೀತಿ ವಾಯು ವಿಹಾರಿಗಳಿಗೂ ವಾಕಿಂಗ್ ಪಾತ್, ಕುಡಿಯುವ ನೀರು, ಕುಳಿತ್ತುಕೊಳ್ಳಲು ಕಲ್ಲುಬೆಂಚ್ ಸೇರಿದಂತೆ ವಿವಿಧ ಸೌಕರ್ಯ ನೀಡಿ, ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಪಟ್ಟಣದ ನಾಗರಿಕರ ಆಶಯವಾಗಿದೆ.
ಪಾದ ಚಾರಿ ಮಾರ್ಗ: ಮೈದಾ ನದ ತುದಿ ಭಾಗ ದಲ್ಲಿ ಅರ್ಧ ಮೈದಾ ನ ದಷ್ಟು ಪಾದ ಚಾರಿ ಮಾರ್ಗ ಮಾಡಲಾಗಿದ್ದು, ಉಳಿದ ಮೈದಾನದ ಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಮಾಡಿ ದರೆ ವಾಯು ವಿಹಾರಿ ಗಳು ಸಮತಟ್ಟಾದ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಲಿದೆ.
ಅಭಿವೃದ್ಧಿ: ಮೈದಾ ನಕ್ಕೆ ಕೇವಲ ಕ್ರೀಡಾ ಪಟುಗಳು ಮಾತ್ರ ಬರುವುದಿಲ್ಲ. ಇಲ್ಲಿಗೆ ಅನಾರೋಗ್ಯಕ್ಕೆ ಒಳಗಾದವರು, ವೃದ್ಧರು ವಾಯುವಿಹಾರಕ್ಕಾಗಿ ಬರುತ್ತಾರೆ. ನಂತರ ವಿಶ್ರಾಂತಿಗಾಗಿ ಮಣ್ಣಿನ ನೆಲದ ಮೇಲೆ ಕೂರುತ್ತಿದ್ದಾರೆ. ಕ್ರೀಡಾ ಪಟುಗಳು ಕೂಡ ಆಯಾಸವಾದಾಗಿ ವಿಶ್ರಾಂತಿ ಪಡೆಯುವ ಸೂಕ್ತ ಜಾಗವಿಲ್ಲ. ಹೀಗಾಗಿ ಅಧಿಕಾರಿಗಳು ಹಾಗೂ ಜನಪ್ರತಿ ನಿ ಧಿ ಗಳು ಮೈದಾನಕ್ಕೆ ಸೂಕ್ತ ಕಲ್ಲು ಬೆಂಚು, ಪಾದಚಾರಿ ಮಾರ್ಗ ನಿರ್ಮಿಸಬೇಕು ಎಂದು ಕರವೇ ಗೌರ ವಾಧ್ಯಕ್ಷ ಪ್ರಭಾಕರ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.