Advertisement
ನಗರದ ವಾರ್ಡ್ 04 ರಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಕೆ.ಲಕ್ಷ್ಮಣ ಮಾತನಾಡಿ, ಹಳ್ಳಿಯ ಜನರು ನಿಸರ್ಗದೊಂದಿಗೆ ಜೋಡಣೆಯಾಗಿದ್ದಾರೆ. ಆದರೆ ನಗರ ಪ್ರದೇಶದ ಜನರು ನಿಸರ್ಗದೊಂದಿಗೆ ಬೆರೆಯದ ಹೊರತು, ಉತ್ತಮ ವಾತಾವರಣ ಸೃಷ್ಟಿಸಲು ಸಾಧ್ಯವಿಲ್ಲ ಎಂದರು.
Related Articles
Advertisement
ಭಗೀರಥ ಸಂಸ್ಥೆಯ ಅಧ್ಯಕ್ಷ ಪ್ರಕಾಶಕುಲಕರ್ಣಿ ಮಾತನಾಡಿ, ಇಂದು ನಿಸರ್ಗದೊಂದಿಗೆ ಜನರ ಜೋಡಣೆ ಎಂಬ ಕಲ್ಪನೆಯೊಂದಿಗೆ ವಿಶ್ವ ಪರಿಸರ ದಿನಾಚರಣೆ ಆಯೋಜಿಸಿದ್ದು ದಿನೇದಿನೇ ತಾಪಮಾನ ಹೆಚ್ಚುತ್ತಿದೆ, ಜನರ ದುರಾಸೆಯೊಂದಿಗೆ ಪ್ರಕೃತಿಯನ್ನು ಹಾಳುಮಾಡಿದ್ದು, ಇನ್ನಾದರೂ ಪ್ರಕೃತಿಗೆ ಕೊಂಚ ಕೊಡುಗೆ ನೀಡಿ ಎಂದು ತಿಳಿಸಿದರು.
ದಿನಾಚರಣೆ ಕುರಿತು ನಗರ ಸಭೆಯ ಸದಸ್ಯರಾದ ವೆಂಕಟೇಶ, ಸತೀಶಕುಮಾರ್, ಸುನೀತಾ ಜಯರಾಮೇಗೌಡ, ಜಿ.ಎಸ್.ಜಗದೀಶ್ ಮಾತನಾಡಿದರು. ವಾರ್ಡ್ 4ರಲ್ಲಿ ಪ್ರತಿ ಬೀದಿಗಳಲ್ಲಿ ಸ್ವತ್ಛತೆಯ ಬಗ್ಗೆ ಅರಿವು ಮೂಡಿಸಲು ಜಾಥಾ ಕಾರ್ಯಕ್ರಮ ಮಾಡಲಾಯಿತು.
ನಗರ ಸಭೆಯ ಪೌರಯುಕ್ತ ಶಿವಪ್ಪನಾಯಕ, ಸದಸ್ಯರಾದ ಕೃಷ್ಣರಾಜಗುಪ್ತ, ಎಸ್.ಶರವಣ, ಆಶ್ರಯ ಸಮಿತಿಯ ಸದಸ್ಯ ಎಸ್.ಜಯರಾಮ್, ಆರೋಗ್ಯಾಧಿಕಾರಿಗಳಾದ ಸತೀಶ್, ಮೋಹನ್, ಭ ಗೀರಥ ಸಂಸ್ಥೆಯ ಚಂಗಪ್ಪ, ನಂಜುಂಡಸ್ವಾಮಿ, ನಗರ ಸಭೆ ಸಿಬ್ಬಂದಿ, ವಾರ್ಡ್‌ನ ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯರುಗಳು, ಮಹಿಳಾ ಸಂಘದ ಪ್ರತಿನಿಧಿ ಗಳು, ಸತ್ಯಸಾಯಿ ಐಟಿಐ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಡಾನ್ ಬಾಸ್ಕೊ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿದರು.