ಬೆಂಗಳೂರು: ಉತ್ತರ ಭಾರತದಿಂದ ದಕ್ಷಿಣದೆಡೆಗೆ ಗಾಳಿ ಬೀಸುತ್ತಿರುವ ಪರಿಣಾಮ ರಾಜ್ಯದ ಕೆಲವೆಡೆ ಮುಂದಿನ ಎರಡು ದಿನಗಳ ಕಾಲ ಚಳಿಯ ವಾತಾವರಣ ಇರಲಿದ್ದು, ಸಾಮಾನ್ಯಕ್ಕಿಂತ 4 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಣಾಂಶ ದಾಖಲಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಒಳನಾಡಿನ ಒಂದೆರಡು ಕಡೆಗಳಲ್ಲಿ ಕನಿಷ್ಠ ಉಷ್ಣಾಂಶವು ಸಾಮಾನ್ಯಕ್ಕಿಂತ 3 ರಿಂದ 4 ಡಿಗ್ರಿ ಕಡಿಮೆಯಾಗಲಿದೆ. ಬೆಂಗಳೂರಿನಲ್ಲಿ ಮುಂಜಾನೆ ಮಂಜು ಮುಸುಕಿದ ವಾತಾವರಣ ಇರಲಿದ್ದು, ಕನಿಷ್ಠ 15 ಡಿ.ಸೆ. ತಾಪಮಾನ ದಾಖಲಾಗುವ ಸಾಧ್ಯತೆಗಳಿವೆ. ಉಳಿದಂತೆ ಕರಾವಳಿ, ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರಿಯಲಿವೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
ಬಾಗಲಕೋಟೆಯಲ್ಲಿ ಕನಿಷ್ಠ ತಾಪಮಾನ:
ಶನಿವಾರ ಬಾಗಲಕೋಟೆಯಲ್ಲಿ 9.4 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಚಿಂತಾಮಣಿ, ಬಳ್ಳಾರಿ 10.1, ವಿಜಯಪುರ 10, ಬೀದರ್ 10.4, ಚಾಮರಾಜನಗರ 11.9, ಮೈಸೂರು 11.4, ಮಂಗಳೂರು 20.5, ಬೆಂಗಳೂರು 14.7, ದಾವಣಗೆರೆ 12.8, ಹಾವೇರಿ 14.8, ಧಾರವಾಡ 12.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
***
ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ತಡವಾಗಿ ಚಳಿ ಶುರುವಾಗಿದೆ. ಕೆಲ ಜಿÇÉೆಗಳಲ್ಲಿ ಹಗಲು ಮತ್ತು ರಾತ್ರಿ ವೇಳೆ ತಂಪಾದ ಗಾಳಿ ಬೀಸುತ್ತಿದೆ. ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ತಾಪಮಾನದಲ್ಲಿ ಉಷ್ಣಾಂಶ ಗಣನೀಯವಾಗಿ ಇಳಿಕೆಯಾಗಿದೆ. ಕಳೆದ ವಾರ ಹಿಂಗಾರು ಮಳೆ ಕ್ಷೀಣ ಹಾಗೂ ಬಿಸಿಲು ವಾತಾವರಣವಿದ್ದ ಪರಿಣಾಮ ಚಳಿ ಕಡಿಮೆಯಾಗಿತ್ತು. ಈಗ ಮೋಡದಲ್ಲಿ ತೇವಾಂಶ ಇರುವುದರಿಂದ ಮತ್ತೆ ಚಳಿ ತೀವ್ರಗೊಂಡಿದೆ.
ಬಾಗಲಕೋಟೆಯಲ್ಲಿ ಕನಿಷ್ಠ ತಾಪಮಾನ:
ಶನಿವಾರ ಬಾಗಲಕೋಟೆಯಲ್ಲಿ 9.4 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಚಿಂತಾಮಣಿ, ಬಳ್ಳಾರಿ 10.1, ವಿಜಯಪುರ 10, ಬೀದರ್ 10.4, ಚಾಮರಾಜನಗರ 11.9, ಮೈಸೂರು 11.4, ಮಂಗಳೂರು 20.5, ಬೆಂಗಳೂರು 14.7, ದಾವಣಗೆರೆ 12.8, ಹಾವೇರಿ 14.8, ಧಾರವಾಡ 12.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.
Related Articles
ಉತ್ತರ ಭಾರತದಿಂದ ಉತ್ತರ ಕರ್ನಾಟಕದತ್ತ ಗಾಳಿ ಬೀಸುತ್ತಿದೆ. ಹೀಗಾಗಿ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಚಳಿ ಹೆಚ್ಚಾಗುವ ಸಾಧ್ಯತೆಗಳಿವೆ. ಉಳಿದಂತೆ ಹವಾಮಾನದಲ್ಲಿ ಭಾರೀ ಬದಲಾವಣೆ ಆಗುವ ಸಾಧ್ಯತೆಗಳಿಲ್ಲ.
– ಶ್ರೀನಿವಾಸ ರೆಡ್ಡಿ, ಹವಾಮಾನ ತಜ್ಞ