Advertisement

ಎಚ್ಚರ ತಪ್ಪಿದರೆ ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ

07:44 PM Mar 19, 2021 | Team Udayavani |

ಚಿಕ್ಕಬಳ್ಳಾಪುರ: ನೆರೆಯ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೈಅಲರ್ಟ್‌ ಆಗಿದ್ದು, ಗಡಿ ಜಿಲ್ಲೆಯ ಲ್ಲಿಯೂ ಸಹ ಜಿಲ್ಲಾಡಳಿತ ಮುನ್ನೆ ಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

Advertisement

ಸೋಂಕಿತರ ಸಂಖ್ಯೆ ಕಡಿಮೆ:

ಜನಸಂದಣಿ ಸೇರಬಾರದೆಂದು ಕಟ್ಟುನಿಟ್ಟಿನ ಆದೇಶ ಗಳು ಜಾರಿಗೊಳಿಸಿದರೂ ಸಹ ಅದಕ್ಕೆ ಪೂರಕವಾಗಿ ನಾಗರಿ ಕರಿಂದ ಸ್ಪಂದನೆ ಸಿಗುತ್ತಿಲ್ಲ. ಆದರೂ ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿರುವುದು ನೆಮ್ಮದಿ ತರುವ ವಿಷಯವಾಗಿದೆ. ಜಿಲ್ಲಾಡಳಿತ ಸೋಂಕು ನಿಯಂ ತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದು ಕೊಂಡು ಸ್ಯಾನಿಟೈಸರ್‌ ಬಳಕೆ ಮಾಡಬೇಕೆಂದು ಕಟ್ಟುನಿಟ್ಟಿ ನಿಂದ ಸೂಚನೆ ನೀಡುವ ಜೊತೆಗೆ ಮುನ್ನೆಚ್ಚರಿಕೆ ಕ್ರಮ ಗಳನ್ನು ಪಾಲಿಸದೆ ನಿರ್ಲಕ್ಷ್ಯ ವಹಿಸುವ ನಾಗರಿಕರಿಗೆ ದಂಡ ಸಹ ವಿಧಿಸಿದ್ದಾರೆ. ಆದರೂ ಸಹ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗಿದೆಯೆಂದು ಜಿಲ್ಲೆಯ ಜನ ಮೈಮರೆತ್ತಿದ್ದು, ಜಿಲ್ಲಾಡಳಿತ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ನಾಗರಿಕರ ನಿರ್ಲಕ್ಷ್ಯ:

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸುವ ಆದೇಶಗಳು ಮತ್ತು ಸುತ್ತೋಲೆಗಳ ಅನುಸಾರ ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಅನೇಕ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ. ವಿಶೇಷವಾಗಿ ಗ್ರಾಪಂ ಮತ್ತು ನಗರಸಭೆಯ ವ್ಯಾಪ್ತಿಯಲ್ಲಿ ಕೋವಿಡ್‌-19 ಮುನ್ನೆಚ್ಚರಿಕೆ ಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡು ತ್ತಿದ್ದಾರೆ. ಆದರೆ ನಾಗರಿಕರು ಸೋಂಕಿನ ಕುರಿತು ನಿರ್ಲಕ್ಷ್ಯ ವಹಿಸಿರುವುದು ಕಂಡು ಬರುತ್ತಿದೆ.

Advertisement

ಗೊಂದಲ ನಿವಾರಿಸಲು ಪ್ರಯತ್ನ:

ಲಸಿಕೆ ಕುರಿತು ಜನರಲ್ಲಿ ಮೂಡಿರುವ ಅನುಮಾನ ಮತ್ತು ಗೊಂದಲ ನಿವಾರಿಸಲು ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್‌, ಹಿರಿಯ ಶಾಸಕ ವಿ. ಮುನಿಯಪ್ಪ, ಜಿಲ್ಲಾಧಿಕಾರಿ ಆರ್‌.ಲತಾ, ಜಿಪಂ ಸಿಇಒ ಪಿ.ಶಿವಶಂಕರ್‌, ಚುನಾ ಯಿತ ಜನಪ್ರತಿನಿಧಿಗಳು ಲಸಿಕೆ ಹಾಕಿಸಿ ಕೊಂಡು 45-60 ವರ್ಷದ ಜನರು ಕಡ್ಡಾ ಯವಾಗಿ ಲಸಿಕೆ ಹಾಕಿಸಲು ಮನವಿ ಮಾಡಿ ಅಭಿಯಾನ ಯಶಸ್ವಿಗೆ ಪ್ರಯತ್ನ ಮಾಡಿದ್ದಾರೆ.

19,152 ಮಂದಿಗೆ ಮೊದಲ ಸುತ್ತಿನ ಲಸಿಕೆ:

ಜಿಲ್ಲೆಯಲ್ಲಿ ಈಗಾಗಲೇ 19,152 ಮಂದಿಗೆ ಮೊದಲ ಸುತ್ತಿನ ಲಸಿಕೆ ಹಾಗೂ 6,139 ಮಂದಿಗೆ ದ್ವಿತೀಯ ಹಂತದ ಲಸಿಕೆ ನೀಡಲಾಗಿದೆ. ಪ್ರತಿನಿತ್ಯ ಸುಮಾರು 1,634 ಮಂದಿಗೆ ಕೊರೊನಾ ಸೋಂಕಿನ ಪರೀಕ್ಷೆ ನಡೆಸಲಾಗುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ 13,859 ಮಂದಿಗೆ ಸೋಂಕು ಕಾಣಿಸಿ ಕೊಂಡಿದೆ. ಆ ಪೈಕಿ 13,694 ಗುಣಮುಖ ರಾಗಿದ್ದಾರೆ. 46 ಸಕ್ರಿಯ ಪ್ರಕರಣಗಳು ಕಂಡು ಬಂದಿದ್ದು, 118 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಲಸಿಕೆ ಲಭ್ಯವಾಗಿದ್ದು ಗುರಿ ಸಾಧಿಸಲು ಕಷ್ಟವಾಗುತ್ತಿದ್ದು, ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳು ಹಾಗೂ ಕೆಲ ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ವಯಸ್ಸು ಆದವರು ಆರೋಗ್ಯ ಕೇಂದ್ರಗಳಿಗೆ ಬರಲು ತೊಂದರೆ ಆಗುತ್ತಿರುವುದನ್ನು ಗಮನಿಸಿ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಅವರನ್ನು ಮನೆಯಿಂದ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಪುನಃ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡುತ್ತಿದ್ದು, ಇದರಿಂದ ನಾಗರಿಕರಿಗೆ ಅನುಕೂಲವಾಗಿದೆ.

ಎಂ.ಎ.ತಮೀಮ್‌ ಪಾಷ

 

 

Advertisement

Udayavani is now on Telegram. Click here to join our channel and stay updated with the latest news.

Next